ಸಿರಿಯಾದಲ್ಲಿ ಯುಎಸ್​ ಸೇನೆಯಿಂದ ಡ್ರೋಣ್​ ದಾಳಿ; ಅಲ್​ ಖೈದಾ ಹಿರಿಯ ನಾಯಕ ಅಬ್ದುಲ್​ ಹಮೀದ್​ ಹತ್ಯೆ

ಅಲ್​-ಖೈದಾ ಉಗ್ರಸಂಘಟನೆ ಈ ಸಿರಿಯಾವನ್ನು ತಮ್ಮ ಸುರಕ್ಷಿತ ತಾಣವನ್ನಾಗಿ ರೂಪಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಅಮೆರಿಕ ಮತ್ತು ನಮ್ಮ ಮೈತ್ರಿ ರಾಷ್ಟ್ರಗಳ ಜನರಿಗೆ ಬೆದರಿಕೆ ಒಡ್ಡುವುದನ್ನು ಮುಂದುವರಿಸಿದೆ ಎಂದು ಯುಎಸ್​ ಸೇನಾ ಮೇಜರ್​ ಜಾನ್ ರಿಗ್ಸ್ಬೀ ತಿಳಿಸಿದ್ದಾರೆ.

ಸಿರಿಯಾದಲ್ಲಿ ಯುಎಸ್​ ಸೇನೆಯಿಂದ ಡ್ರೋಣ್​ ದಾಳಿ; ಅಲ್​ ಖೈದಾ ಹಿರಿಯ ನಾಯಕ ಅಬ್ದುಲ್​ ಹಮೀದ್​ ಹತ್ಯೆ
ಸಾಂಕೇತಿಕ ಚಿತ್ರ

ಯುಎಸ್​ ಸೇನೆ ಸಿರಿಯಾದಲ್ಲಿ ನಡೆಸಿದ ಡ್ರೋಣ್​ ದಾಳಿ (Drone Strike)ಗೆ ಅಲ್​ ಖೈದಾ (al-Qaeda) ಉಗ್ರಸಂಘಟನೆಯ ಹಿರಿಯ ನಾಯಕ ಅಬ್ದುಲ್​ ಹಮೀದ್​ ಅಲ್​ ಮತಾರ್​​ ಬಲಿಯಾಗಿದ್ದಾನೆ. ಈ ಬಗ್ಗೆ ಯುಎಸ್​ ಸೆಂಟ್ರಲ್​ ಕಮಾಂಡ್​ ವಕ್ತಾರ ಮಾಹಿತಿ ನೀಡಿದ್ದಾರೆ.  ಯುಎಸ್  ಸೇನೆಯ ಮೇಜರ್ ಜಾನ್ ರಿಗ್ಸ್ಬೀ ಶುಕ್ರವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿದ್ದು, ಅಲ್​ ಖೈದಾ ಹಿರಿಯ ನಾಯಕನಾಗಿದ್ದ ಹಮೀದ್​ ಹತ್ಯೆಯಿಂದಾಗಿ ಖಂಡಿತವಾಗಿಯೂ ಆ ಉಗ್ರ ಸಂಘಟನೆಗೆ ಹಿನ್ನಡೆಯಾಗುತ್ತದೆ. ಅವರು ಮತ್ತೊಂದು ಜಾಗತಿಕ ದಾಳಿ ನಡೆಸುವುದು, ಯುಎಸ್​ ನಾಗರಿಕರ, ನಮ್ಮ ಸಹಭಾಗಿ ದೇಶಗಳ ಜನರಿಗೆ, ಮುಗ್ಧ ನಾಗರಿಕರ ಜೀವಕ್ಕೆ ಹಾನಿ ಮಾಡುವ ಅವರ ಯೋಜನೆಗೆ ಅಡ್ಡಿಯುಂಟಾಗುತ್ತದೆ ಎಂದು ಹೇಳಿದ್ದಾರೆ. ಅಲ್​-ಖೈದಾ ಹಿರಿಯ ನಾಯಕನನ್ನು ಬಿಟ್ಟರೆ ಇನ್ಯಾರೂ ಸತ್ತಿಲ್ಲ. ನಾವು MQ-9 ಏರ್​ಕ್ರಾಫ್ಟ್​ ಬಳಸಿ ದಾಳಿ ನಡೆಸಿದ್ದೆವು ಎಂದೂ ಮಾಹಿತಿ ನೀಡಿದ್ದಾರೆ. 

ದಕ್ಷಿಣ ಸಿರಿಯಾದಲ್ಲಿರುವ ಯುಎಸ್​ ಔಟ್​​ಪೋಸ್ಟ್​ ಮೇಲೆ ಅಲ್​-ಖೈದಾ ದಾಳಿ ನಡೆಸಿದ ಎರಡೇ ದಿನದಲ್ಲಿ ಯುಎಸ್ ಸೇನೆ ಪ್ರತಿದಾಳಿ ನಡೆಸಿದೆ.  ಅಲ್​-ಖೈದಾ ಉಗ್ರಸಂಘಟನೆ ಈ ಸಿರಿಯಾವನ್ನು ತಮ್ಮ ಸುರಕ್ಷಿತ ತಾಣವನ್ನಾಗಿ ರೂಪಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಅಮೆರಿಕ ಮತ್ತು ನಮ್ಮ ಮೈತ್ರಿ ರಾಷ್ಟ್ರಗಳ ಜನರಿಗೆ ಬೆದರಿಕೆ ಒಡ್ಡುವುದನ್ನು ಮುಂದುವರಿಸಿದೆ ಎಂದೂ ಜಾನ್ ರಿಗ್ಸ್ಬೀ ತಿಳಿಸಿದ್ದಾರೆ. ಆದರೆ ಸಿರಿಯಾದ ಯಾವ ಭಾಗದಲ್ಲಿ ಡ್ರೋಣ್​ ದಾಳಿ ನಡೆಸಲಾಗಿದೆ ಎಂಬುದನ್ನು ಸೇನಾ ಮೇಜರ್​ ತಿಳಿಸಿಲ್ಲ.

ಇದನ್ನೂ ಓದಿ: Feng Shui: ಮನೆಯಲ್ಲಿ ಸೌಭಾಗ್ಯ ನೆಲೆಸಬೇಕೆಂದರೆ ಫೆಂಗ್ ಶೂಯಿ ಪದ್ಧತಿಯಲ್ಲಿ ಈ ಮೂರು ನಿಯಮ ಪಾಲಿಸಿ

ರಾಯನ್​ ರಾಜ್​ ಸರ್ಜಾ ಹುಟ್ಟುಹಬ್ಬದ ಫೋಟೋ ಗ್ಯಾಲರಿ; ಸೆಲೆಬ್ರಿಟಿಗಳ ಜೊತೆ ಚಿರು-ಮೇಘನಾ ಪುತ್ರ ಮಿಂಚಿಂಗ್

 

Click on your DTH Provider to Add TV9 Kannada