AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Feng Shui: ಮನೆಯಲ್ಲಿ ಸೌಭಾಗ್ಯ ನೆಲೆಸಬೇಕೆಂದರೆ ಫೆಂಗ್ ಶೂಯಿ ಪದ್ಧತಿಯಲ್ಲಿ ಈ ಮೂರು ನಿಯಮ ಪಾಲಿಸಿ

ಅನೇಕ ಒಳಾಂಗಣ ಮತ್ತು ಹೊರಾಂಗಣ ಗಿಡಗಳು ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ಧಿ ತರಬಲ್ಲವು. ಇದು ಮನೆಯನ್ನು ಸಹ ಆಕರ್ಷಕವಾಗಿಡುತ್ತದೆ. ಹಾಗಾಗಿ ಯಾರಾದರೂ ಫೆಂಗ್ ಶೂಯಿ ತಜ್ಞರ ಸಲಹೆ ಪಡೆದು ನಿಮ್ಮ ಮನೆಯಲ್ಲಿ ಆಯ್ದ ಗಿಡಗಳನ್ನು ತಂದಿಟ್ಟುಕೊಳ್ಳೀ. ಫೆಂಗ್ ಶೂಯಿ ಪದ್ಧತಿ ಪ್ರಕಾರ ಗಿಡಗಳು ದೊಡ್ಡದಾಗಿ ಮತ್ತು ಹಸಿರಿನಿಂದ ಕಂಗೊಳಿಸುತ್ತಿದ್ದರೆ ನಿಮ್ಮ ಜೀವನದಲ್ಲಿ ಅಭಿವೃದ್ಧಿ ಕಂಡುಬರುತ್ತದೆ.

Feng Shui: ಮನೆಯಲ್ಲಿ ಸೌಭಾಗ್ಯ ನೆಲೆಸಬೇಕೆಂದರೆ ಫೆಂಗ್ ಶೂಯಿ ಪದ್ಧತಿಯಲ್ಲಿ ಈ ಮೂರು ನಿಯಮ ಪಾಲಿಸಿ
ಮನೆಯಲ್ಲಿ ಸೌಭಾಗ್ಯ ನೆಲೆಸಬೇಕೆಂದರೆ ಫೆಂಗ್ ಶೂಯಿ ಪದ್ಧತಿಯಲ್ಲಿ ಈ ಮೂರು ನಿಯಮ ಪಾಲಿಸಿ
TV9 Web
| Edited By: ಸಾಧು ಶ್ರೀನಾಥ್​|

Updated on: Oct 23, 2021 | 9:05 AM

Share

ಫೆಂಗ್ ಶೂಯಿ ಎಂಬುದು (Feng shui- Chinese geomancy) ವಾಸ್ತು ಶಾಸ್ತ್ರದಂತಹ ಒಂದು ಪದ್ಧತಿ. ಇದರ ಆಚರಣೆಯಿಂದ ಅನೇಕ ಪ್ರಭಾವಗಳು ಬೀರುತ್ತವೆ. ಫೆಂಗ್ ಶೂಯಿ ಪಾಲನೆಯಲ್ಲಿ ಈ 3 ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಸೌಭಾಗ್ಯ ನೆಲೆಸುತ್ತದೆ. ಅಂದರೆ ನಾಲ್ಕು ವಸ್ತುಗಳನ್ನು ಖರೀದಿಸಿ, ಮನೆಯಲ್ಲಿ ತಂದಿಟ್ಟುಕೊಂಡರೆ ನಕಾರಾತ್ಮಕ ವಾತಾವರಣ ತೊಲಗಿ ಸುಖ ಸಮೃದ್ಧಿ ಶಾಂತಿ ನಳನಳಿಸುತ್ತದೆ.

ಯಶಸ್ಸು ಕಾಣಲು ಪರಿಶ್ರಮ ಮತ್ತು ಅದೃಷ್ಟ ಎರಡೂ ಒಟ್ಟಿಗೆ ಬೇಕಾಗುತ್ತದೆ. ಅನೇಕ ಬಾರಿ ಸಾಕಷ್ಟು ಪರಿಶ್ರಮ ಹಾಕುತ್ತೇವೆ, ಆದರೆ ಪರಿಶ್ರಮಪಟ್ಟಿದ್ದೇ ಬಂತು ಭಾಗ್ಯ, ಅದರಿಂದ ಯಶಸ್ಸು ದೊರೆಯುವುದೇ ಇಲ್ಲ. ವಾಸ್ತವವಾಗಿ ಆ ಯಶಸ್ಸಿಗೆ ನಾವು ಹಕ್ಕುದಾರರರಾಗಿರುತ್ತೇವೆ. ಆದರೂ ಅದು ನಮ್ಮಿಂದ ಕೈಜಾರಿರುತ್ತದೆ. ನಿರಂತರ ಪ್ರಯತ್ನಗಳ ಹೊರತಾಗಿಯೂ ಮತ್ತೆ ಮತ್ತೆ ಇಂತಹುದೆ ಅಪಜಯ ಅನುಭವಿಸುತ್ತಿದ್ದರೆ ಅದು ಮತ್ತೇನೂ ಇಲ್ಲ. ಜಸ್ಟ್​ ಅದೃಷ್ಟ ಕೈ ಕೊಡುತ್ತಿದೆ ಎಂದೇ ಅರ್ಥ.

ಇದರ ಜೊತೆಗೆ ನಿಮ್ಮ ಗ್ರಹ ಗತಿ, ಜಾತಕದ ಪ್ರಭಾವವೂ ನಿಮ್ಮ ಯಶಸ್ಸಿಗೆ ಬಾಧಕವಾಗಿರುತ್ತದೆ. ಇದಕ್ಕೆ ವಾಸ್ತು ಸಂಬಂಧಿ ದೋಷಗಳು ಕಾರಣವಾಗಿರುತ್ತವೆ. ಇಂತಹ ಸಂದರ್ಭದಲ್ಲಿಯೇ ಫೆಂಗ್ ಶೂಯಿ ಪದ್ಧತಿ ನೆರವಿಗೆ ಬರುವುದು. ವಾಸ್ತು ಶಾಸ್ತ್ರದಂತೆ ಫೆಂಗ್ ಶೂಯಿ ಆಚರಣೆಯೂ ಜೀವನದ ಮೇಲೆ ಪ್ರಭಾವ ಬೀರುತ್ತದೆ.

ಹಸಿರು ಗಿಡಗಳು: ಫೆಂಗ್ ಶೂಯಿ ಪದ್ಧತಿಯಲ್ಲಿ ಗಿಡಗಳು ಮಹತ್ವದ ಪ್ರಭಾವ ಬೀರಬಲ್ಲದು. ಇಂತಹ ಅನೇಕ ಒಳಾಂಗಣ ಮತ್ತು ಹೊರಾಂಗಣ ಗಿಡಗಳು ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ಧಿ ತರಬಲ್ಲವು. ಇದು ಮನೆಯನ್ನು ಸಹ ಆಕರ್ಷಕವಾಗಿಡುತ್ತದೆ. ಹಾಗಾಗಿ ಯಾರಾದರೂ ಫೆಂಗ್ ಶೂಯಿ ತಜ್ಞರ ಸಲಹೆ ಪಡೆದು ನಿಮ್ಮ ಮನೆಯಲ್ಲಿ ಆಯ್ದ ಗಿಡಗಳನ್ನು ತಂದಿಟ್ಟುಕೊಳ್ಳೀ. ಫೆಂಗ್ ಶೂಯಿ ಪದ್ಧತಿ ಪ್ರಕಾರ ಗಿಡಗಳು ದೊಡ್ಡದಾಗಿ ಮತ್ತು ಹಸಿರಿನಿಂದ ಕಂಗೊಳಿಸುತ್ತಿದ್ದರೆ ನಿಮ್ಮ ಜೀವನದಲ್ಲಿ ಅಭಿವೃದ್ಧಿ ಕಂಡುಬರುತ್ತದೆ.

ಬಣ್ಣ ಬಣ್ಣದ ಚಿಟ್ಟೆಗಳು: ರಂಗಿ ಭಿ ರಂಗೆ ಚಿಟ್ಟೆಗಳನ್ನು ಇಟ್ಟುಕೊಳ್ಳುವುದರಿಂದಲೂ ತುಂಬಾ ಶುಭದಾಯಕ ಎಂದು ಫೆಂಗ್ ಶೂಯಿ ಪದ್ಧತಿಯಲ್ಲಿ ನಂಬಲಾಗಿದೆ. ಇದು ಮನೆಯಲ್ಲಿನ ನಕಾರಾತ್ಮಕತೆಯನ್ನು ಹೊಡೆದೋಡಿಸುತ್ತದೆ. ಇದರಿಂದ ಏಕಾಗ್ರತೆಯಿಂದ ಹಿಡಿದ ಕೆಲಸ ಮಾಡಿಮುಗಿಸಬಹುದು. ಇದರಿಂದ ಯಶಸ್ಸು ತನ್ನೀಂದ ತಾನೇ ಪ್ರಾಪ್ತಿಯಾಗುತ್ತದೆ. ಬಣ್ಣ ಬಣ್ಣದ ಚಿಟ್ಟೆಗಳು ಕುಟುಂಬಸ್ಥರಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

ಕಲ್ಲಿನ ಗಿಡಗಳು: ಫೆಂಗ್ ಶೂಯಿ ಪದ್ಧತಿಯಲ್ಲಿ ಕಲ್ಲಿನ ಗಿಡಗಳು ಶುಭದಾಯಕ ಎಂದು ಪರಿಗಣಿಸಲಾಗಿದೆ. ಬಣ್ಣ ಬಣ್ಣದ ರತ್ನಗಳಿಂದ ತಯಾರಿಸಲಾದ ಗಿಡಗಳನ್ನು ವಾಯವ್ಯ ದಿಕ್ಕಿನಲ್ಲಿ ಇಟ್ಟರೆ ನಿಶ್ಚಿತವಾಗಿ ಶ್ರೇಯಸ್ಸು ಹುಡುಕಿಕೊಂಡು ಬರುತ್ತದೆ. ಇದು ನವ ಗ್ರಹಗಳನ್ನು ಶಾಂತಗೊಳಿಸುವ ಕ್ಷಮತೆಯನ್ನು ಹೊಂದಿರುತ್ತದೆ. ಇದನ್ನು ನವ ರತ್ನ ಗಿಡಗಳು ಎಂದೂ ಕರೆಯುತ್ತಾರೆ. ಇದರಿಂದ ಮನೆಯಲ್ಲಿ ಕುಟುಂಬಸ್ಥರ ಮಧ್ಯೆ ಖುಷಿ ಖುಷಿ ವಾತಾವರಣ ಸೃಷ್ಟಿಸುತ್ತದೆ.

(Spiritual feng shui tips for good luck 3 principles of feng shui that remove bad luck)

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್