ಎಲ್ಲ ಬಗೆಯ ಪಾತ್ರಗಳಿಗೆ ಒಗ್ಗುವ ನಿವಿನ್ ಪೌಲಿ ಈಗ ಮಾಲಿವುಡ್​ನ ಜನಪ್ರಿಯ ನಟರಲ್ಲಿ ಒಬ್ಬರು

ನೋಡಲು ಸ್ಫುರದ್ರೂಪಿ ಮತ್ತು ಉತ್ತಮ ಮೈಕಟ್ಟು ಹೊಂದಿದ್ದರೂ, ಆರಂಭದಲ್ಲಿ ನಿವಿನ್​​ಗೆ ಸಿಕ್ಕಿದ್ದು ಚಿಕ್ಕ ಪುಟ್ಟ ಪಾತ್ರಗಳು. ಅವರ ಲುಕ್ಸ್, ಪ್ರತಿಭೆ, ಸಾಮರ್ಥ್ಯಗಳಿಗೆ ತಕ್ಕುದಾದ ರೋಲ್​ಗಳಿಗೆ ಅವರು ಮೂರು ವರ್ಷ ಕಾಯಬೇಕಾಯಿತು.

ಮಲಯಾಳಂ ಚಿತ್ರಗಳನ್ನು ಟ್ರ್ಯಾಕ್ ಮಾಡಿವವರಿಗೆ ಆ ಚಿತ್ರರಂಗದ ಶ್ರೀಮಂತ ಪ್ರತಿಭಾವಂತ ನಟ-ನಟಿಯರ ಬಗ್ಗೆ ಗೊತ್ತಿರುತ್ತದೆ. ಪ್ರೇಮ್ ನಜೀರ್ ಅವರಿಂದ ಮೊದಲುಗೊಂಡು ನಿವಿನ್ ಪೌಲಿವರೆಗೆ ಸಾಲು ಸಾಲು ಅದ್ಭುತ ನಟರನ್ನು ಮೊಲಿವುಡ್ ಕಂಡಿದೆ. ನಿವಿನ್ ಈಗ ಅಲ್ಲಿನ ಜನಪ್ರಿಯ ಮತ್ತು ಅಷ್ಟೇ ಪ್ರತಿಭಾವಂತ ನಟರಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ನಿವಿನ್ ಚಿತ್ರ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. 37-ವರ್ಷ-ವಯಸ್ಸಿನ ನಿವಿಲ್ ಚಿತ್ರರಂಗಕ್ಕೆ ಹೊಸಬರೇನೂ ಅಲ್ಲ. ಸುಮಾರು 12 ವರ್ಷಗಳಷ್ಟು ಹಿಂದೆಯೇ ಅವರು ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟರು.

ನೋಡಲು ಸ್ಫುರದ್ರೂಪಿ ಮತ್ತು ಉತ್ತಮ ಮೈಕಟ್ಟು ಹೊಂದಿದ್ದರೂ, ಆರಂಭದಲ್ಲಿ ನಿವಿನ್​​ಗೆ ಸಿಕ್ಕಿದ್ದು ಚಿಕ್ಕ ಪುಟ್ಟ ಪಾತ್ರಗಳು. ಅವರ ಲುಕ್ಸ್, ಪ್ರತಿಭೆ, ಸಾಮರ್ಥ್ಯಗಳಿಗೆ ತಕ್ಕುದಾದ ರೋಲ್​ಗಳಿಗೆ ಅವರು ಮೂರು ವರ್ಷ ಕಾಯಬೇಕಾಯಿತು.

ನಿವಿನ್ ಇಮೇಜನ್ನು ಬದಲಾಯಿಸಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು 2012 ರಲ್ಲಿ ಬಿಡುಗಡೆಯಾದ ‘ತಟ್ಟತ್ತಿನ್ ಮರಯಾತು’ ಚಿತ್ರ. ಅದಾದ ಬಳಿಕ ಅವರು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಅವುಗಳಲ್ಲಿ 2013 ರಲ್ಲಿ ತೆರೆಕಂಡ ‘ನೇರಮ್’, 2014 ರಲ್ಲಿ ಬಿಡುಗಡೆಯಾದ ‘1983’, ‘ಓಮ್ ಶಾಂತಿ ಒಶಾನಾ’ (2014), ‘ಬೆಂಗಳೂರ್ ಡೇಸ್’ (2014), ‘ಒರು ವಡಕ್ಕನ್ ಸೆಲ್ಫೀ’ (2015), ಅದೇ ವರ್ಷ ತೆರೆಕಂಡು ಬಾಕ್ಸಾಫೀಸನ್ನು ಕೊಳ್ಳೆಹೊಡೆದ ‘ಪ್ರೇಮಂ’ 2016ರಲ್ಲಿ ರಿಲೀಸ್ ಆದ ‘ಆಕ್ಷನ್ ಹಿರೋ ಬಿಜು’ ಮತ್ತು ಅದೇ ವರ್ಷ ತೆರೆಕಂಡ ‘ಜಕೊಬಿಂಟೆ ಸ್ವರ್ಗರಾಜ್ಯಂ,’ ಪ್ರಮುಖ ಸಿನಿಮಾಗಳು ಎನಿಸಿಕೊಂಡಿವೆ.

‘ಆಕ್ಷನ್ ಹಿರೋ ಬಿಜು’ ಅವರ ನಿರ್ಮಾಣದ ಮೊದಲ ಚಿತ್ರವಾಗಿದ್ದು ಅವರ ನಿರ್ಮಾಣ ಸಂಸ್ಥೆಯ ಹೆಸರು ಪೌಲಿ ಜ್ಯೂನಿಯರ್ ಪಿಕ್ಚರ್ಸ್ ಆಗಿದೆ.

ಕ್ಲಾಸ್ ಮತ್ತು ಮಾಸ್ ಎರಡೂ ಅಪೀಲಿರುವ ನಿವಿನ್ ಪ್ರತಿ ಚಿತ್ರದಲ್ಲಿ ಭಿನ್ನ ಭಿನ್ನ ಪಾತ್ರ ಮತ್ತು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರನ್ನು ಮೊಲಿವುಡ್​ನ ರಕ್ಷಿತ್ ಶೆಟ್ಟಿ ಅಂತಲೂ ಕರೆಯುವುದುಂಟು ಮಾರಾಯ್ರೇ.

ಕಲಾತ್ಮಕ ಮತ್ತು ಆಫ್ ಬೀಟ್ ಚಿತ್ರಗಳಲ್ಲೂ ನಿವಿನ್ ತಮ್ಮ ಅದ್ಭುತ ನಟನೆಯಿಂದ ಸೈ ಅನಿಸಿಕೊಂಡಿದ್ದಾರೆ.

ಇದನ್ನೂ ಓದಿ:  ತುಂಬಾ ಕಿರಿಕಿರಿ ಮಾಡಿದ್ರೆ ರಶ್ಮಿಕಾ ಹೀಗೆ ಒದಿತಾರೆ; ವಿಡಿಯೋ ಸಮೇತ ವಿವರಿಸಿದ ನಟಿ

Click on your DTH Provider to Add TV9 Kannada