Viral Video: ಐಸ್​ಕ್ರೀಂ ತಿನ್ನಲು ಹರಸಾಹಸಪಟ್ಟ ಐಸ್​ಕ್ರೀಂ ಪ್ರಿಯ ನಾಯಿ; ವೈರಲ್ ವಿಡಿಯೋ ಇಲ್ಲಿದೆ

ಪೋಸ್ಟರ್​ನಲ್ಲಿರುವ ಐಸ್​ಕ್ರೀಂ ಅನ್ನು ತಿನ್ನಲು ನಾಯಿಯೊಂದು ಪಡುವ ತ್ರಾಸು ಅಷ್ಟಿಷ್ಟಲ್ಲ, ಅದು ಬಾಯಿಗೆ ಸಿಗುತ್ತಿಲ್ಲ ಎಂದು ತಿಳಿದಾಗ ಇನ್ನಷ್ಟು ಉತ್ಸುಕವಾಗಿ ತಿನ್ನಲು ಮುಂದಾಗುವ ವಿಡಿಯೋ ವೈರಲ್ ಆಗುತ್ತಿದೆ.

Viral Video: ಐಸ್​ಕ್ರೀಂ  ತಿನ್ನಲು ಹರಸಾಹಸಪಟ್ಟ ಐಸ್​ಕ್ರೀಂ ಪ್ರಿಯ ನಾಯಿ; ವೈರಲ್ ವಿಡಿಯೋ ಇಲ್ಲಿದೆ
ಐಸ್​ಕ್ರೀಂ ತಿನ್ನಲು ಯತ್ನಿಸುತ್ತಿರುವ ನಾಯಿ
Follow us
TV9 Web
| Updated By: Rakesh Nayak Manchi

Updated on: Jul 21, 2022 | 10:56 AM

ಐಸ್​ಕ್ರೀಂ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಸಣ್ಣ ಮಕ್ಕಳಿಂದ ಹಿಡಿದು ಹಿರಿಯರಿಗೂ ಅಚ್ಚುಮೆಚ್ಚು. ಯಾವುದಾದರೊಂದು ಸಮಾರಂಭದಲ್ಲಿ ಐಸ್​ಕ್ರೀಂ ಇತ್ತೆಂದರೆ ಸಾಕು ಯಾವುದೇ ತಿನಿಸುಗಳಿಗೆ ಇಲ್ಲದೆ ಬೇಡಿಕೆ ಐಸ್​​ಕ್ರೀಂಗೆ ಇರುತ್ತದೆ. ಪ್ರಪಂಚದ ಬಹುತೇಕ ವ್ಯಕ್ತಿಗಳು ಐಸ್​ಕ್ರೀಂ ಅನ್ನು ಇಷ್ಟಪಡುತ್ತಾರೆ ಮತ್ತು ಐಸ್​ಕ್ರೀಂ (Ice Cream) ಪ್ರಿಯರೂ ಆಗಿದ್ದಾರೆ. ಇದರಿಂದ ಪ್ರಾಣಿಗಳು ಕೂಡ ಹೊರತಾಗಿಲ್ಲ. ಹೌದಾ? ಎಂದು ನೀವು ಪ್ರಶ್ನಿಸುತ್ತಿದ್ದೀರಾ? ನಿಮ್ಮ ಪ್ರಶ್ನೆಗೆ ಈ ವಿಡಿಯೋ ಸಾಕ್ಷಿ. ಪೋಸ್ಟರ್​ನಲ್ಲಿರುವ ಐಸ್​ಕ್ರೀಂ ಅನ್ನು ತಿನ್ನಲು ನಾಯಿಯೊಂದು ಪಡುವ ತ್ರಾಸು ಅಷ್ಟಿಷ್ಟಲ್ಲ, ಅದು ಬಾಯಿಗೆ ಸಿಗುತ್ತಿಲ್ಲ ಎಂದು ತಿಳಿದಾಗ ಇನ್ನಷ್ಟು ಉತ್ಸುಕವಾಗಿ ತಿನ್ನಲು ಮುಂದಾಗುವುದನ್ನು ವಿಡಿಯೋ ತೋರಿಸುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಇರುವಂತೆ, ಅಂಗಡಿ ಮುಂದೆ ಹಾಕಿರುವ ಪೋಸ್ಟರ್​ನಲ್ಲಿ ಐಸ್​ಕ್ರೀಂ ಫೋಟೋವನ್ನು ಕಾಣಬಹುದು. ಈ ಪೋಸ್ಟರ್ ನೋಡಿದ ನಾಯಿ, ಇದು ನಿಜವಾದ ಐಸ್​ಕ್ರೀಂ ಎಂದು ತಿಳಿದು ತಿನ್ನಲು ಹೋಗುತ್ತದೆ. ಐಸ್​ಕ್ರೀಂ ತಿನ್ನಲು ಹರಸಾಹಸ ಪಡುತ್ತದೆ ಮತ್ತು ತಾನು ಎಷ್ಟು ಬಾಯಿ ಹಾಕಿದರೂ ಐಸ್​ಕ್ರೀಂ ಸಿಗುತ್ತಿಲ್ಲ ಎಂದು ಇನ್ನಷ್ಟು ಉತ್ಸುಕವಾದ ನಾಯಿ ತನ್ನ ಕೈಗಳಿಂದಲೂ ಅದನ್ನು ಕೆದುಕುವುದನ್ನು ನೋಡಬಹುದು.

ಮುದ್ದಾದ ನಾಯಿಯ ವಿಡಿಯೋವನ್ನು Buitengebieden ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 7.3 ಲಕ್ಷ ವೀಕ್ಷಣೆಗಳನ್ನು ಪಡೆದಿದೆ ಮತ್ತು 2 ಲಕ್ಷಕ್ಕೂ ಹೆಚ್ಚು ಲೈಕ್​ಗಳನ್ನು ಗಿಟ್ಟಿಸಿಕೊಂಡಿದೆ. ಅಲ್ಲದೆ 25ಸಾವಿರಕ್ಕೂ ಹೆಚ್ಚು ರೀಟ್ವೀಟ್​ಗಳು ಆಗಿವೆ. ಈ ವಿಡಿಯೋ ನೆಟ್ಟಿಗರ ಹೃದಯವನ್ನು ಐಸ್​ಕ್ರೀಂನಂತೆ ಕರಗಿಸಿದ್ದು, ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮುದ್ದಾದ ನಾಯಿಯ ವಿಡಿಯೋ ಇಲ್ಲಿದೆ, ನೋಡಿ ಆನಂದಿಸಿ:

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ