ಇಂಟರ್ನೆಟ್ನಲ್ಲಿ ಪ್ರಾಣಿ ಮತ್ತು ಪಕ್ಷಿಗಳನ್ನು ಒಳಗೊಂಡಿರುವ ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ನೆಟ್ಟಿಗರು ಇಂತಹ ವಿಡಿಯೋಗಳನ್ನು ಬಹಳ ಇಷ್ಟಪಟ್ಟು ನೋಡುತ್ತಾರೆ. ಅದೇ ರೀತಿ ಹುಲಿ ಮತ್ತು ಬಾತುಕೋಳಿಯ ವಿಡಿಯೋವೊಂದು ಇಂಟರ್ನೆಟ್ನಲ್ಲಿ ಎಲ್ಲರ ಗಮನವನ್ನು ಸೆಳೆದಿದೆ. Buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ 46 ಸೆಕೆಂಡುಗಳ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ, ಬಾತುಕೋಳಿಯು ತನ್ನ ಬಳಿಗೆ ಕಳ್ಳ ಹೆಜ್ಜೆಯನ್ನಿಡುತ್ತಾ ಬರುತ್ತಿದ್ದ ಹುಲಿಯೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವುದನ್ನು ನೋಡಬಹುದು. ಹುಲಿ ಆ ಬಾತುಕೋಳಿಯ ಮೇಲೆ ದಾಳಿ ನಡೆಸುವಷ್ಟರಲ್ಲಿ ಆ ಬಾತುಕೋಳಿ ನೀರಿನೊಳಗೆ ಧುಮುಕಿತು.
Playing hide and seek.. ? pic.twitter.com/foCNauJu1N
— Buitengebieden (@buitengebieden_) December 26, 2021
ನಂತರ, ಅದು ಎಲ್ಲೋ ಕೆಳಗಿನಿಂದ ಮೇಲೆ ಬಂದು ಮತ್ತೆ ಮುಖ ತೋರಿಸಿತು. ಇದರಿಂದ ಹುಲಿ ಸಂಪೂರ್ಣವಾಗಿ ಗೊಂದಲಕ್ಕೊಳಗಾಯಿತು.
The supreme confidence that you gain when you know that your opponent is out of his depth in your own waters
— Philosophus (@Philosophuslux) December 26, 2021
“ಪ್ಲೇಯಿಂಗ್ ಹೈಡ್ ಅಂಡ್ ಸೀಕ್ (sic),” ಎಂಬ ಶೀರ್ಷಿಕೆ ನೀಡಿ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ.
— Winchester Robinson (@wersr75) December 27, 2021
ಇದನ್ನೂ ಓದಿ: Viral Video: ಕಿಟ್ಕ್ಯಾಟ್ ಚಾಕೋಲೇಟ್ನಿಂದ ಟೊಮ್ಯಾಟೋ ಕಟ್ ಮಾಡಿದ ಮಹರಾಯ; ಈ ವಿಡಿಯೋ ಮಿಸ್ ಮಾಡಬೇಡಿ!
Viral Video: ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾತ್ರಿಗಳಿಗೆ ಹೇಗೆ ಹೇರ್ಕಟ್ ಮಾಡ್ತಾರೆ ಗೊತ್ತಾ?; ಇಲ್ಲಿದೆ ವಿಡಿಯೋ