Viral Video: ಆಗಸದೆತ್ತರಕ್ಕೆ ಹಾರಿದ ಧೂಳು! ದೈತ್ಯ ಮರಳು ಚಂಡಮಾರುತದ ವಿಡಿಯೋ ವೈರಲ್

ಚೀನಾದ ವಾಯುವ್ಯ ಪ್ರದೇಶದಲ್ಲಿ ದೈತ್ಯ ಮರಳು ಚಂಡಮಾರುತ ಬೀಸಿದ ಘಟನೆ ನಡೆದಿದೆ. ಕಳೆದ ಬುಧವಾರ ಮರಳು ಚಂಡಮಾರುತ ಸಂಭವಿಸಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿ ನೆಟ್ಟಿಗರನ್ನು ಬೆರುಗುಗೊಳಿಸಿದೆ.

Viral Video: ಆಗಸದೆತ್ತರಕ್ಕೆ ಹಾರಿದ ಧೂಳು! ದೈತ್ಯ ಮರಳು ಚಂಡಮಾರುತದ ವಿಡಿಯೋ ವೈರಲ್
ಮರಳು ಚಂಡಮಾರುತ
Follow us
TV9 Web
| Updated By: Rakesh Nayak Manchi

Updated on:Jul 25, 2022 | 11:44 AM

ಚೀನಾದ ವಾಯುವ್ಯ ಪ್ರದೇಶದಲ್ಲಿ ದೈತ್ಯ ಮರಳು ಚಂಡಮಾರುತ (Sandstorm) ಬೀಸಿದ ಘಟನೆ ನಡೆಇದೆ. ಈ ಘಟನೆ ಕಳೆದ ವಾರದಲ್ಲಿ ಸಂಭವಿಸಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗಿ ನೆಟ್ಟಿಗರನ್ನು ಬೆರುಗುಗೊಳಿಸಿದೆ. ರಸ್ತೆ ಹಾದುಹೋಗಿರುವ ಮರುಭೂಮಿಯಲ್ಲಿ ಆಗಸದೆತ್ತರಕ್ಕೆ ಮರಳು ಹಾರುವುದನ್ನು ವಿಡಿಯೋ ತೋರಿಸುತ್ತದೆ. ಅಕ್ಯುವೆದರ್ ಪ್ರಕಾರ, ವಾಯುವ್ಯ ಚೀನಾದಲ್ಲಿರುವ ಕಿಂಗ್ಹೈ ಪ್ರಾಂತ್ಯದ ಭಾಗಗಳಲ್ಲಿ ಪ್ರಬಲವಾದ ಧೂಳಿನ ಚಂಡಮಾರುತ ಬುಧವಾರ ಬೀಸಿದೆ. ಸಿಎನ್​ಎನ್ ವರದಿ ಪ್ರಕಾರ, ಸುಮಾರು ನಾಲ್ಕು ಗಂಟೆಗಳ ಕಾಲ ಮರಳು ಬಿರುಗಾಳಿ ಬೀಸಿದೆ.

ವೈರಲ್ ವಿಡಿಯೋದಲ್ಲಿ ಇರುವಂತೆ, ಕಿಂಗ್ಹೈ ಪ್ರಾಂತ್ಯದ ಭಾಗಗಳಲ್ಲಿ ದೈತ್ಯ ಮರಳು ಚಂಡಮಾರುತ ಎದ್ದಿದೆ. ಹೀಗೆ ಎದ್ದ ಧೂಳು ಆಗಸದ ಎತ್ತರಕ್ಕೆ ಹಾರಿದೆ. ಈ ವೇಳೆ ಮರುಭೂಮಿಯ ರಸ್ತೆ ಮೂಲಕ ಸಂಚರಿಸುತ್ತಿದ್ದ ವಾಹನ ಸವಾರರು ದ್ಯತ್ಯ ಧೂಳಿನ ಚಂಡಮಾರುತ ನೋಡಿ ಬೆಚ್ಚಿಬಿದ್ದಿದ್ದಾರೆ. ಕೆಲವರು ಇದನ್ನು ಮೊಬೈಲ್ ಕ್ಯಾಮರಾ ಮೂಲಕ ಸೆರೆಹಿಡಿದಿದ್ದಾರೆ. ಚಂಡಮಾರುತ ಹಿನ್ನೆಲೆ ಪ್ರವಾಸಿಗರು ಮತ್ತು ನಿವಾಸಿಗಳು ತಮ್ಮ ಪ್ರಯಾಣವನ್ನು ಸ್ಥಗಿತಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಮರಳು ಚಂಡಮಾರುತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್​ನ ಪ್ರತ್ಯೇಕ ವರದಿ ಪ್ರಕಾರ, ಬೃಹತ್ ಚಂಡಮಾರುತವು ಕ್ವಿಂಗ್ಹೈ ಪ್ರಾಂತ್ಯದ ಕೆಲವು ಪಟ್ಟಣಗಳಲ್ಲಿ ಗೋಚರಿಸಿದೆ ಮತ್ತು 200 ಮೀಟರ್‌ಗಿಂತ ಕಡಿಮೆಯಾಗಿ ಸೂರ್ಯನೂ ಕಾಣದಂತೆ ಧೂಳು ಮೇಳೆದ್ದಿದೆ.

ಅದಾಗ್ಯೂ, ಕೆಲವು ಇತರ ದೇಶಗಳಂತೆ ಚೀನಾ ಕೂಡ ತೀವ್ರವಾದ ಶಾಖವನ್ನು ಎದುರಿಸುತ್ತಿದೆ. ಅಕ್ಯುವೆದರ್ ಪ್ರಕಾರ, ಜೂನ್ ಮಧ್ಯದಿಂದ, ಉತ್ತರ, ಪೂರ್ವ ಮತ್ತು ಮಧ್ಯ ಚೀನಾದ ದೊಡ್ಡ ಪ್ರದೇಶಗಳು ಹೆಚ್ಚಿನ ತಾಪಮಾನವನ್ನು ಅನುಭವಿಸುತ್ತಿವೆ. ಈ ವರ್ಷ ಯುರೋಪ್‌ನಲ್ಲೂ ವಿಪರೀತ ತಾಪಮಾನ ಕಂಡುಬಂದಿದೆ. ಶಾಖದ ಬಿಸಗೆ ಸ್ಪೇನ್, ಫ್ರಾನ್ಸ್, ಗ್ರೀಸ್ ಮತ್ತು ಇಟಲಿಯಲ್ಲಿ ಕಾಳ್ಗಿಚ್ಚು ಉಂಟಾಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಶಾಖದ ತೀವ್ರತೆ ಬಗ್ಗೆ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ, ಮುಂಬರುವ ವರ್ಷಗಳಲ್ಲಿ ಶಾಖದ ಅಲೆಗಳು ತೀವ್ರವಾಗುತ್ತವೆ ಎಂದು ಹೇಳಿದೆ.

Published On - 11:34 am, Mon, 25 July 22