Viral Video: ಹದ್ದಿನ ರೋಚಕ ಬೇಟೆ; ಕರುಣೆ ಇಲ್ಲದೆ ಕಾಗೆಯ ಜೀವ ಹಿಂಡುವ ಹದ್ದಿನ ವಿಡಿಯೋ ವೈರಲ್

| Updated By: Rakesh Nayak Manchi

Updated on: Aug 05, 2022 | 2:14 PM

ಕಾಗೆಯನ್ನು ಹದ್ದು ರೋಚಕವಾಗಿ ಬೇಟೆಯಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹದ್ದಿನ ಬಿಗಿಯಾದ ಹಿಡಿತದಿಂದ ತಪ್ಪಿಸಿಕೊಳ್ಳಲು ಮತ್ತು ಜೀವ ಉಳಿಸಲು ಕೊನೆಯ ಕ್ಷಣದವರೆಗೂ ಕಾಗೆ ಹೋರಾಡುತ್ತದೆ.

Viral Video: ಹದ್ದಿನ ರೋಚಕ ಬೇಟೆ; ಕರುಣೆ ಇಲ್ಲದೆ ಕಾಗೆಯ ಜೀವ ಹಿಂಡುವ ಹದ್ದಿನ ವಿಡಿಯೋ ವೈರಲ್
ಕಾಗೆಯನ್ನು ಬೇಟೆಯಾಡಿದ ಹದ್ದು
Follow us on

ಸಿಂಹ ಬೇಟೆಗೆ ಇಳಿದರೆ ಕಾಡಿನಲ್ಲಿರುವ ಇತರೆ ಪ್ರಾಣಿಗಳು ತಮ್ಮ ಮನೆ ಸೇರಿಕೊಳ್ಳುತ್ತವೆ. ಕಾಡಿನ ಹೊರತಾಗಿ ಹದ್ದುಗಳು ಬೇಟೆಯಾಡಲು ಮುಂದಾದರೆ ಇತರೆ ಪಕ್ಷಿಗಳು ಮಾತ್ರವಲ್ಲ ಹಾವುಗಳು, ಮೀನುಗಳು, ಕೋಳಿಗಳು ಇತ್ಯಾದಿ ಪ್ರಾಣಿ-ಪಕ್ಷಿಗಳು ಎಚ್ಚರವಾಗುತ್ತವೆ. ಒಂದೊಮ್ಮೆ ಬೇಟೆಗಾರ ಪಕ್ಷಿಯ ಕೈಗೆ ತಗಲಾಕೊಂಡರೆ ತಪ್ಪಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ, ಏಕೆಂದರೆ ಅವುಗಳ ಕೈಗಳ ಹಿಡಿತ ಅಷ್ಟೇ ಬಲವಾಗಿರುತ್ತದೆ. ಹದ್ದುಗಳು ತುಂಬಾ ಬುದ್ಧಿವಂತ ಮತ್ತು ಉಗ್ರ ಪಕ್ಷಿಗಳಾಗಿವೆ. ಇವುಗಳ ಬಿಗಿಯಾದ ಹಿಡಿತದಿಂದ ಹಾವು, ಸಣ್ಣಪುಟ್ಟ ಪಕ್ಷಿಗಳು, ಮೀನುಗಳು ಸೇರಿದಂತೆ ಅವುಗಳ ಇನ್ನಿತರ ಆಹಾಗಳನ್ನು ಸುಲಭವಾಗಿ ಹಾರುತ್ತಾ ಸಾಗಿಸುತ್ತವೆ. ಇದೀಗ ಬಂದಿರುವ ಈ ವಿಡಿಯೋ ನೋಡಿ.. ಹದ್ದು ಕಾಗೆಯೊಂದನ್ನು ರೋಚಕವಾಗಿ ಬೇಟೆಯಾಡಿದೆ. ನಂತರ ಏನಾಯ್ತು ಎಂಬುದನ್ನು ಈ ವಿಡಿಯೋದಲ್ಲಿ ನೀವೇ ನೋಡಿ.

ವೀಡಿಯೊದಲ್ಲಿ, ಕಾಗೆಯೊಂದರ ಮೇಲೆ ಹದ್ದು ದಾಳಿ ನಡೆಸಿ ನೆಲಕ್ಕೆ ಎಸೆದು ಬಿಗಿಯಾಗಿ ಹಿಡಿಯುತ್ತದೆ. ಅಷ್ಟಕ್ಕೂ ಸುಮ್ಮನಾಗದ ಹುದ್ದು ಕಾಗೆಯ ಮೇಲೆ ಹತ್ತಿ ಅದನ್ನು ಕುಕ್ಕುತ್ತದೆ. ಹದ್ದಿನ ಭೀಕರ ದಾಳಿಗೆ ತನ್ನ ಜೀವ ಉಳಿಸುವ ಪ್ರಯತ್ನವನ್ನುವನ್ನು ಬಿಡದ ಕಾಗೆ ರಕ್ತ ಸುರಿದರೂ ಹದ್ದಿನ ಕೈಯಿಂದ ತಪ್ಪಿಸಿಕೊಳ್ಳಲು ಕೊನೆಯ ಕ್ಷಣದವರೆಗೂ ಯತ್ನಿಸುತ್ತದೆ. ಆದರೆ ಹದ್ದು ಸ್ವಲ್ಪವೂ ಕರುಣೆ ತೋರದೆ ಕಾಗೆಯ ಜೀವವನ್ನು ಹಿಂಡುವುದನ್ನು ಕಾಣಬಹುದು.

ಹದ್ದು ಕಾಗೆಯ ಮುಖವನ್ನು ತನ್ನ ಕೈಗಳಿಂದ ಹಿಡಿದು ನಿಧಾನವಾಗಿ ಕಾಗೆಯ ರೆಕ್ಕೆಗಳನ್ನು ಬೇರ್ಪಡಿಸುತ್ತದೆ. ಈ ವೇಳೆ ಕಾಗೆ ತುಂಬಾ ನರಳುತ್ತದೆ. ರಸ್ತೆಗೆ ಕಾಗೆಯ ತಲೆ ಉಜ್ಜುತ್ತಿದ್ದರಿಂದ ರಕ್ತ ಸುರಿಯುತ್ತದೆ. ವಿಡಿಯೋವನ್ನು ಕೊನೆಯವರೆಗೂ ನೋಡಿದರೆ ಜೀವ ಉಳಿಸಲು ಕಾಗೆ ತನ್ನೆಲ್ಲ ಶಕ್ತಿಯನ್ನು ಬಳಸಿಕೊಂಡಿದೆ. ದುರದೃಷ್ಟವಶಾತ್ ಬೇಟೆಗಾರ ಹದ್ದಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಗೆ ಕಾಗೆಯನ್ನು ಹದ್ದು ಕೊಂದು ಬಿಡುತ್ತದೆ.

ಈ ವೀಡಿಯೊವನ್ನು Animal_WorId ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಯಾವುದೇ ಶೀರ್ಷಿಕೆಯನ್ನು ಬರೆಯಲಾಗಿಲ್ಲ. ಹೀಗಾಗಿ ಈ ದೃಶ್ಯಾವಳಿ ಎಲ್ಲಿ ಸೆರೆಹಿಡಿಯಲಾಗಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಜು.27ರಂದು ಹಂಚಿಕೊಳ್ಳಲಾದ ಈ ವಿಡಿಯೋ ವೈರಲ್ ಪಡೆದು ಈವರೆಗೆ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:45 pm, Fri, 5 August 22