ಗುವಾಹಟಿ: ಅಸ್ಸಾಂನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ನಡುವೆ ಗುವಾಹಟಿಯ ರಸ್ತೆಯಲ್ಲಿ ತುಂಬಿದ ಮಳೆ ನೀರಿನಲ್ಲಿ ಮೀನುಗಳು ಈಜುತ್ತಿರುವುದು ಕಂಡುಬಂದಿದೆ ಎಂದು ಹೇಳುವ ವಿಡಿಯೋ ವೈರಲ್ ಆಗುತ್ತಿದೆ. ಇತ್ತೀಚಿನ ಅಸ್ಸಾಂ ಪ್ರವಾಹದಲ್ಲಿ ‘ಗುವಾಹಟಿಯಲ್ಲಿ ಮೀನುಗಳು ರಸ್ತೆಯಲ್ಲಿ ಈಜುತ್ತಿವೆ’ ಎಂದು ಟ್ವಿಟರ್ ವಿಡಿಯೋದಲ್ಲಿ ಶೀರ್ಷಿಕೆ ನೀಡಲಾಗಿದೆ. ಅಷ್ಟಕ್ಕೂ ಅಸ್ಸಾಂನ ಗುವಾಹಟಿಯದ್ದು ಎನ್ನಲಾಗಿರುವ ಈ ವಿಡಿಯೋ ಸುಳ್ಳು. ಹಲವಾರು ಟ್ವಿಟ್ಟರ್ ಬಳಕೆದಾರರು ನಕಲಿ ವೀಡಿಯೊವನ್ನು ಗುವಾಹಟಿಯದ್ದಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Viral: ಸಾಕಿದ ನಾಯಿ ಕಳೆದುಕೊಂಡಾಕೆಯ ಸಂಕಟಕ್ಕೆ ಪೆಟ್ ಫುಡ್ ಕಂಪನಿಯ ಸ್ಪಂದನೆ; ಸಹೃದಯರ ಸಾಂತ್ವನ
Fish on road of Guwahati. Assam flood reaches to city. pic.twitter.com/ZxBM6vO0H8
— sharmadivas (@sharmadivas) June 14, 2022
ಅಸಲಿಗೆ ರಸ್ತೆಯಲ್ಲಿ ತುಂಬಿದ ನೀರಿನಲ್ಲಿ ಮೀನುಗಳು ಈಜಾಡುತ್ತಿರುವ ದೃಶ್ಯ ಚೀನಾದ್ದಾಗಿದೆ. ಈ ಹಿಂದೆ ಚೀನೀ ಟ್ವೀಟ್‌ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, “ಗುವಾಂಗ್‌ಡಾಂಗ್‌ನಲ್ಲಿ ನಿರಂತರ ಬಿರುಗಾಳಿ ಸಹಿತ ಮಳೆಯಿಂದಾಗಿ ಮೀನುಗಳು ರಸ್ತೆಗೆ ಬಂದಿವೆ” ಎಂದು ಶೀರ್ಷಿಕೆ ನೀಡಲಾಗಿದೆ.
粤国近日连续暴雨???跑到大街上了。 pic.twitter.com/WT3f4L0CAr
— 楚国军人(东亚盟军成员) (@ZhihuYang) June 10, 2022
ಇದನ್ನೂ ಓದಿ: Viral Video: ರಸ್ತೆಯಲ್ಲಿ ಓಡಾಡುತ್ತಿದ್ದ ಹುಲಿಯನ್ನು ಹಗ್ಗದಿಂದ ಕಟ್ಟಿ ಕರೆದುಕೊಂಡು ಹೋದ ಯುವಕ! ಮುಂದೆ ಆಗಿದ್ದೇ ಬೇರೆ
ಆದಾಗ್ಯೂ, ದೊಡ್ಡ ಗಾತ್ರದ ಮೀನುಗಳು ರಸ್ತೆಗಳಲ್ಲಿ ಈಜುತ್ತಿವೆ ಎಂಬ ಸುದ್ದಿ ಹರಡುತ್ತಿದ್ದಂತೆ ಅಸ್ಸಾಂನ ಬೀದಿಗಳಲ್ಲಿ ಜನರು ಮೀನು ಹಿಡಿಯಲು ಮುಂದಾಗಿದ್ದಾರೆ. ಕಾಮ್ರೂಪ್‌ನ ರಂಗಿಯಾದ ಮೊರಾಂಜನಾ ಪ್ರದೇಶದಲ್ಲಿ ನೀರಿನಿಂದ ಮುಳುಗಡೆಯಾದ ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ಮೀನು ಹಿಡಿಯಲು ಸ್ಥಳೀಯರು ಬಲೆಗಳನ್ನು ಹಾಕುತ್ತಿರುವ ವೀಡಿಯೊವನ್ನು ಟೈಮ್ಸ್ ಆಫ್ ಇಂಡಿಯಾ ಟ್ವೀಟ್ ಮಾಡಿದೆ. ಆ ಪ್ರದೇಶದಲ್ಲಿಯೂ ರಸ್ತೆಯಲ್ಲಿ ಮೀನುಗಳು ಪತ್ತೆಯಾಗಿಲ್ಲ.
Kamrup, #Assam: Locals lay nets to catch fish at the inundated National Highway 31 in Moranjana area, Rangia in the wake of floods; vehicular movement also restricted to one side. #assamfloods pic.twitter.com/u92KnUzpk5
— TOI Guwahati (@TOIGuwahati) June 18, 2022
ನಿರಂತರ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಅಸ್ಸಾಂ ತತ್ತರಿಸಿ ಹೋಗಿದ್ದು, 32 ಜಿಲ್ಲೆಗಳಲ್ಲಿ ಸುಮಾರು 31 ಲಕ್ಷ ಜನರ ಮೇಲೆ ಪರಿಣಾಮ ಬೀರಿದೆ. ಅಧಿಕಾರಿಗಳ ಪ್ರಕಾರ, ಶನಿವಾರದಂದು ಇನ್ನೂ ಎಂಟು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಸಾವಿನ ಸಂಖ್ಯೆ 63ಕ್ಕೆ ತಲುಪಿದೆ. ಹಾನಿಗೊಳಗಾದ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಇದುವರೆಗೆ 3000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. 514 ಪರಿಹಾರ ಶಿಬಿರಗಳಲ್ಲಿ 1.56 ಲಕ್ಷಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ.
ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ