AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರಸ್ತೆಯಲ್ಲಿ ಓಡಾಡುತ್ತಿದ್ದ ಹುಲಿಯನ್ನು ಹಗ್ಗದಿಂದ ಕಟ್ಟಿ ಕರೆದುಕೊಂಡು ಹೋದ ಯುವಕ! ಮುಂದೆ ಆಗಿದ್ದೇ ಬೇರೆ

ಹಾಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹುಲಿರಾಯನನ್ನು ಕಂಡು ಬೆಚ್ಚಿಬಿದ್ದ ಜನರು, ನೋಡನೋಡುತ್ತಿದ್ದಂತೆ ಅತ್ತಿಂದ ಬಂದ ಯುವಕನೊಬ್ಬ ಹುಲಿಯನ್ನು ಹಗ್ಗದಲ್ಲಿ ಕಟ್ಟಿ ಕರೆದುಕೊಂಡು ಹೋಗಿದ್ದಾನೆ. ಆದರೆ ಮುಂದೆ ಆಗಿದ್ದೇ ಬೇರೆ.

Viral Video: ರಸ್ತೆಯಲ್ಲಿ ಓಡಾಡುತ್ತಿದ್ದ ಹುಲಿಯನ್ನು ಹಗ್ಗದಿಂದ ಕಟ್ಟಿ ಕರೆದುಕೊಂಡು ಹೋದ ಯುವಕ! ಮುಂದೆ ಆಗಿದ್ದೇ ಬೇರೆ
ವೈರಲ್ ಆದ ಹುಲಿ
TV9 Web
| Edited By: Rakesh Nayak Manchi|

Updated on:Jun 19, 2022 | 9:53 AM

Share

ಸಾಮಾನ್ಯವಾಗಿ ನಾಯಿ ಕಂಡರೆ ಸಾಕು ಭಯಪಡುವವರೇ ಹೆಚ್ಚು, ಅಂಥದ್ರಲ್ಲಿ ಈತ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಾಘ್ರವನ್ನೇ ಕರೆದುಕೊಂಡು ಹೋಗಿದ್ದಾನೆ! ಈ ವೇಳೆ ಹುಲಿರಾಯ ಸುಮ್ಮನಿದ್ದದ್ದೇ ಆಶ್ಚರ್ಯ! ಆತ ಬಂದ, ಹಗ್ಗವನ್ನು ಹುಲಿಯ ಕುತ್ತಿಗೆಗೆ ಹಾಕಿದ, ಕರೆದುಕೊಂಡು ಹೋದ, ಹುಲಿ(Tiger)ಯೂ ಅವನ ಹಿಂದೆ ಹೋಯ್ತು, ಆದರೆ ಮುಂದೆ ಆಗಿದ್ದೇ ಬೇರೆ. ಅದೇನೆಂದು ಹೇಳುತ್ತೇವೆ ಈ ಸುದ್ದಿ ಓದಿ.

ಇದನ್ನೂ ಓದಿ: Viral Video: ಪುರುಷ ಗ್ರಾಹಕರನ್ನು ಸೆಳೆಯಲು ಗಂಗೂಬಾಯಿ ಕಥಿಯಾವಾಡಿ ಸಿನಿಮಾದ ದೃಶ್ಯ ಬಳಕೆ, ಟೀಕೆಗೆ ಗುರಿಯಾದ ಪಾಕ್​ನ ರೆಸ್ಟೋರೆಂಟ್

ಬೆಂಗಾಲ್ ಹುಲಿಯಂತೆ ಕಾಣುವ ಹುಲಿಯೊಂದು ಮೆಕ್ಸಿಕೋದ ಪಟ್ಟಣದ ನಯರಿತ್ ರಾಜ್ಯದ ಟೆಕುಲಾದ ರಸ್ತೆಯೊಂದರಲ್ಲಿ ಕಾಣಿಸಿಕೊಂಡಿದೆ. ಈ ವೇಳೆ ರಸ್ತೆಯಲ್ಲಿ ಹುಲಿಗೆ ಮುಖಾಮುಖಿಯಾದ ಜನರು ಹುಲಿರಾಯನನ್ನು ಕಂಡು ಭಯಭೀತರಾದರು. ಹೃದಯದ ಕಂಪನ ವೇಗ ಪಡೆದರೂ ರಸ್ತೆಯಲ್ಲಿದ್ದ ಜನರು ಹುಲಿಯ ವಿಡಿಯೋ ಮಾಡುವುದನ್ನು ಮಾತ್ರ ಬಿಡಲಿಲ್ಲ. ರಸ್ತೆಯಲ್ಲಿ ನಡೆದಾಡಿ ಸುಸ್ತಾಯ್ತೇನೋ ಗೊತ್ತಿಲ್ಲ ಕಾರು ಮತ್ತು ಬೈಕ್​ ಪಕ್ಕದಲ್ಲಿ ಬಂದು ಹುಲಿರಾಯ ಕುಳಿತುಕೊಂಡಿದ್ದಾನೆ. ನೋಡನೋಡುತ್ತಿದ್ದಂತೆ ಹುಲಿಯ ಬಳಿ ಬಂದ ವ್ಯಕ್ತಿಯೊಬ್ಬ ಹಗ್ಗದಿಂದ ಅದನ್ನು ಕಟ್ಟಿ ಕರೆದುಕೊಂಡು ಹೋಗಿದ್ದಾನೆ. ಹುಲಿಯೂ ಸೈಲೆಂಟ್ ಆಗಿ ಅವನ ಹಿಂದೆಯೇ ನಡೆದುಕೊಂಡು ಹೋಗಿದೆ.

ಇದನ್ನೂ ಓದಿ: Viral Video: ವಿವಾಹ ಸಂಭ್ರಮದಲ್ಲಿ ಭರ್ಜರಿ ಡಾನ್ಸ್, ಕಣ್ಣು ಮಿಟುಕಿಸಿ ನೋಡುವಷ್ಟರಲ್ಲಿ ಹೊಂಡದಲ್ಲಿದ್ದ ಜನರು! ವಿಡಿಯೋ ವೈರಲ್

ಇದಿಷ್ಟು ವೈರಲ್ ವಿಡಿಯೋ (Viral Video)ದಲ್ಲಿ ಸೆರೆಯಾಗಿರುವ ದೃಶ್ಯಾವಳಿಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಕ್ತಿಯ ಅಸಲಿಯತ್ತು ಬಯಲಿಗೆ ಬಂದಿದೆ. ಅಸಲಿಗೆ ಈ ವ್ಯಕ್ತಿ ಅಕ್ರಮವಾಗಿ ಹುಲಿಯನ್ನು ಸಾಕಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಹುಲಿಯನ್ನು ಸೆರೆಹಿಡಿದು ರಕ್ಷಣೆ ಮಾಡಿದ್ದಾರೆ.

ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪ್ರಕಾರ, ಸಿನಾಲೋವಾ ಗಡಿಯಲ್ಲಿ ಹುಲಿಯನ್ನು ಸೆರೆಹಿಡಿಯಲಾಗಿದೆ ಎಂದು ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಅಟಾರ್ನಿ ಜನರಲ್ (PROFEPA) ಬುಧವಾರ ಹೇಳಿದ್ದಾರೆ. “ಬೆಂಗಾಲ್ ಹುಲಿ ಟೆಕುವಾಲಾ ಬೀದಿಗಳಲ್ಲಿ ಅಲೆದಾಡುತ್ತಿರುವ ಬಗ್ಗೆ ವರದಿಗಳನ್ನು ಸ್ವೀಕರಿಸಿದ ನಂತರ ಅಕ್ರಮವಾಗಿ ಹುಲಿ ಸಾಕುತ್ತಿರುವುದು ತಿಳಿದುಬಂದಿದೆ. ಹೀಗಾಗಿ ಇಲಾಖೆಯು ಹುಲಿಯನ್ನು ರಕ್ಷಣೆ ಮಾಡಿದೆ ಎಂದು ಹೇಳಿದ್ದಾರೆ. ಸ್ಥಳೀಯ ಮಾಧ್ಯಗಳ ಪ್ರಕಾರ, ಹುಲಿಯ ಉಗುರುಗಳನ್ನು ತೆಗೆಯಲಾಗಿದೆ. ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ 13ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೂರಾರು ಲೈಕ್ಸ್​ಗಳು ಪಡೆದುಕೊಂಡಿದೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:53 am, Sun, 19 June 22

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್