Viral Video: ಪುರುಷ ಗ್ರಾಹಕರನ್ನು ಸೆಳೆಯಲು ಗಂಗೂಬಾಯಿ ಕಥಿಯಾವಾಡಿ ಸಿನಿಮಾದ ದೃಶ್ಯ ಬಳಕೆ, ಟೀಕೆಗೆ ಗುರಿಯಾದ ಪಾಕ್​ನ ರೆಸ್ಟೋರೆಂಟ್

ಪಾಕಿಸ್ತಾನದ ಅತಿದೊಡ್ಡ ನಗರದಲ್ಲಿರುವ ಜನಪ್ರಿಯ ರೆಸ್ಟೋರೆಂಟ್‌ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ಪುರುಷ ಗ್ರಾಹಕರನ್ನು ಸೆಳೆಯಲು ವೇಶ್ಯೆ ಆಧಾರಿತ ಗಂಗೂಬಾಯಿ ಸಿನಿಮಾದ ದೃಶ್ಯವಾಳಿಯನ್ನು ಪ್ರಚಾರಕ್ಕಾಗಿ ಬಳಸಿರುವುದು.

Viral Video: ಪುರುಷ ಗ್ರಾಹಕರನ್ನು ಸೆಳೆಯಲು ಗಂಗೂಬಾಯಿ ಕಥಿಯಾವಾಡಿ ಸಿನಿಮಾದ ದೃಶ್ಯ ಬಳಕೆ, ಟೀಕೆಗೆ ಗುರಿಯಾದ ಪಾಕ್​ನ ರೆಸ್ಟೋರೆಂಟ್
ಪ್ರಚಾರಕ್ಕಾಗಿ ಬಳಸಿದ ದೃಶ್ಯ
Follow us
TV9 Web
| Updated By: Rakesh Nayak Manchi

Updated on:Jun 18, 2022 | 6:06 PM

ಕೆಲವೊಂದು ಜಾಹಿರಾತುಗಳು ವಿವಾದಕ್ಕೆ ಕಾರಣವಾಗುತ್ತಿರುತ್ತವೆ. ಇದೀಗ ತನ್ನ ಸಮುದಾಯದ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಲೈಂಗಿಕ ಕಾರ್ಯಕರ್ತೆಯ ನಿಜ ಜೀವನದ ಕಥೆಯನ್ನು ಆಧರಿಸಿದ ನಿರ್ಮಿಸಿದ್ದ ಹಾಗೂ ಆಲಿಯಾ ಭಟ್ ಅಭಿನಯದ ‘ಗಂಗೂಬಾಯಿ ಕಥಿಯಾವಾಡಿ’ (gangubai kathiawadi) ಚಲನಚಿತ್ರದ ದೃಶ್ಯವನ್ನು ರೆಸ್ಟೋರೆಂಟ್​ನಲ್ಲಿ ಗ್ರಾಹಕರನ್ನು ಸೆಳೆಯಲು ಪ್ರಚಾರಕ್ಕಾಗಿ ಬಳಸಿರುವುದು ಟೀಕೆಗೆ ಕಾರಣವಾಗಿದೆ. ಪಾಕಿಸ್ತಾನದ ಜನಪ್ರಿಯ ರೆಸ್ಟೋರೆಂಟ್‌ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Viral Video: ವಿವಾಹ ಸಂಭ್ರಮದಲ್ಲಿ ಭರ್ಜರಿ ಡಾನ್ಸ್, ಕಣ್ಣು ಮಿಟುಕಿಸಿ ನೋಡುವಷ್ಟರಲ್ಲಿ ಹೊಂಡದಲ್ಲಿದ್ದ ಜನರು! ವಿಡಿಯೋ ವೈರಲ್

ಸಿನಿಮಾದಲ್ಲಿ ವೇಶ್ಯಾವಾಟಿಕೆಗೆ ಒತ್ತಾಯಿಸಲ್ಪಟ್ಟ ನಟಿ ಕಾಮತಿಪುರದಲ್ಲಿ ಬಿಟ್ಟ ನಂತರ ತನ್ನ ಮೊದಲ ಗ್ರಾಹಕನನ್ನು ಕರೆಯುವ ಪ್ರಯತ್ನಿಸುತ್ತಾಳೆ. ಸಿನಿಮಾದಲ್ಲಿ ಲೈಂಗಿಕ ಕಾರ್ಯಕರ್ತರು ಅಜಾ ನಾ ರಾಜಾ ಅಂತ ಹೇಳುತ್ತಾರೆ. ಇದೇ ಕ್ಲಿಕ್ ಅನ್ನು ಬಳಸಿಕೊಂಡು ‘ಅಜಾ ನಾ ರಾಜಾ – ನೀವು ಯಾವುದಕ್ಕಾಗಿ ಕಾಯುತ್ತಿದ್ದೀರಿ?’ ಎಂದು ರೆಸ್ಟೋರೆಂಟ್‌ನಲ್ಲಿ ಪುರುಷರ ದಿನದ ವಿಶೇಷಕ್ಕಾಗಿ ಗ್ರಾಹಕರನ್ನು ಆಕರ್ಷಿಸಲು ಬಳಸಲಾಗಿದೆ.

View this post on Instagram

A post shared by Swing ? (@swing.khi)

ಇದನ್ನೂ ಓದಿ: Viral Video: ಮದುವೆಯ ಸಂಭ್ರಮದಲ್ಲಿ ತೇಲಾಡಿದ ವರನಿಂದ ವಧುವಿಗೆ ಒಂದೇ ಒಂದು ಕಿಕ್! ವಿಡಿಯೋ ವೈರಲ್

“ಸ್ವಿಂಗ್ಸ್ ಎಲ್ಲಾ ರಾಜರನ್ನು ಇಲ್ಲಿಗೆ ಕರೆಯುತ್ತಿದೆ. ಅಜಾವೋ ಮತ್ತು ಸ್ವಿಂಗ್ಸ್‌ನಲ್ಲಿ ಪುರುಷರ ಸೋಮವಾರದಂದು ಶೇಕಡಾ 25 ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಿ!” ಎಂದು ರೆಸ್ಟೋರೆಂಟ್​ನಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಾತ್ರವಲ್ಲದೆ, ಗ್ರಾಹಕರಿಂದಲೂ ಭಾರಿ ಟೀಕೆ ವ್ಯಕ್ತವಾಗಿವೆ. ಇದರಿಂದ ಎಚ್ಚೆತ್ತ ರೆಸ್ಟೋರೆಂಟ್‌ನ ಮಾಲೀಕರು, ಅರೆಮನಸ್ಸಿನ ಕ್ಷಮೆಯಾಚನೆಯೊಂದಿಗೆ ಅದನ್ನು ತೆಗೆದುಹಾಕಿದ್ದಾರೆ.

View this post on Instagram

A post shared by Swing ? (@swing.khi)

ಫೇಸ್‌ಬುಕ್ ಪೋಸ್ಟ್‌ನಲ್ಲಿ “ಇದೇನು? ಇದು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುತ್ತದೆ ಮತ್ತು ವೇಶ್ಯೆಯರಾಗಲು ಒತ್ತಾಯಿಸಲ್ಪಟ್ಟ ಮಹಿಳೆಯರನ್ನು ಅಕ್ಷರಶಃ ಗೇಲಿ ಮಾಡುತ್ತಿದೆ” ಎಂದು ನೆಟ್ಟಿಗರೊಬ್ಬರು ಹೇಳಿಕೊಂಡಿದ್ದಾರೆ. ಮತ್ತೊಬ್ಬರು, “ವೇಶ್ಯಾವಾಟಿಕೆ ಆಧಾರಿತ ಚಲನಚಿತ್ರದ ಕ್ಲಿಪ್ ಅನ್ನು ಬಳಸುವುದರಿಂದ ನೀವು ಪ್ರಚಾರಕ್ಕಾಗಿ ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದೀರಿ ಎಂದು ತೋರಿಸುತ್ತಿದೆ” ಎಂದು ಹೇಳಿದ್ದಾರೆ. ಇನ್ನೊಬ್ಬರು, “ರೆಸ್ಟೋರೆಂಟ್‌ನಿಂದ ಅಂತಹ ಜಾಹೀರಾತನ್ನು ನಿರೀಕ್ಷಿಸಿರಲಿಲ್ಲ ಮತ್ತು ಮಾರ್ಕೆಟಿಂಗ್ ಗಿಮಿಕ್‌ನಿಂದ ಅವರು ಅತ್ಯಂತ ನಿರಾಶೆಗೊಂಡಿದ್ದಾರೆ” ಎಂದು ಬರೆದಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Sat, 18 June 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್