AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆಯ ಸಂಭ್ರಮದಲ್ಲಿ ತೇಲಾಡಿದ ವರನಿಂದ ವಧುವಿಗೆ ಒಂದೇ ಒಂದು ಕಿಕ್! ವಿಡಿಯೋ ವೈರಲ್

ಮದುವೆಯಾದ ಖುಷಿಯಲ್ಲಿ ವಧು-ವರ, ಭಾರಿ ಸಂತೋಷ ಪಟ್ಟ ವರನಿಂದ ಡಾನ್ಸ್.. ಕೊನೆಯಲ್ಲಿ ವಧುವಿಗೆ ಕಾಲಿನಿಂದ ಒಂದೇ ಒಂದು ಶಾಟ್! ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನರಂಜನೆಗೆ ಕಾರಣವಾಯ್ತು ವರನ ಸ್ಟಂಡ್ ಡಾನ್ಸ್.

Viral Video: ಮದುವೆಯ ಸಂಭ್ರಮದಲ್ಲಿ ತೇಲಾಡಿದ ವರನಿಂದ ವಧುವಿಗೆ ಒಂದೇ ಒಂದು ಕಿಕ್! ವಿಡಿಯೋ ವೈರಲ್
ವಧುವಿನ ಮುಖಕ್ಕೆ ಒದ್ದ ವರ
TV9 Web
| Edited By: |

Updated on: Jun 18, 2022 | 3:33 PM

Share

ಮದುವೆಯಾದ ಖುಷಿಯಲ್ಲಿ ವಧು-ವರ, ಭಾರಿ ಸಂತೋಷ ಪಟ್ಟ ವರನಿಂದ ಡಾನ್ಸ್.. ಕೊನೆಯಲ್ಲಿ ವಧುವಿಗೆ ಕಾಲಿನಿಂದ ಒಂದೇ ಒಂದು ಶಾಟ್! ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನರಂಜನೆಗೆ ಕಾರಣವಾಯ್ತು ವರನ ಸ್ಟಂಡ್ ಡಾನ್ಸ್.. ಮದುವೆ ಎಂದರೆ ಹಾಗೆ ಸಂಭ್ರಮ ಸಡಗರ, ಒಂದಷ್ಟು ಆಡಂಬರ ಇರುತ್ತದೆ. ಆಡಂಬರದ ಮದುವೆಯಲ್ಲಿ ಕೆಲವೊಂದು ನೃತ್ಯ, ಶೂಟಿಂಗಳಂಥ ವಿಶೇಷಗಳನ್ನು ಮಾಡಲು ಹೋಗಿ ಎಡವಿ ಬೀಳುವುದನ್ನು ಕಾಣುತ್ತೇವೆ. ಭಾರತದಲ್ಲಿ ಇಂಥ ತಪ್ಪುಗಳು ಕಡಿಮೆ ಇದ್ದರೂ ವಿದೇಶಗಳಲ್ಲಿ ಹೆಚ್ಚು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರನೊಬ್ಬ ನೃತ್ಯ ಮಾಡುತ್ತಾ ವಧುವಿಗೆ ಕಾಲಿನಿಂದ ಒದ್ದ ವಿಡಿಯೋ ವೈರಲ್ (Video Viral) ಆಗುತ್ತಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಈ ಸುದ್ದಿ ಓದಿ.

ಇದನ್ನೂ ಓದಿ: Trending: ಭಾರಿ ಟ್ರೆಂಡಿಂಗ್ ಆಗುತ್ತಿದೆ ಪ್ರಧಾನಿ ಮೋದಿ ರಾಜೀನಾಮೆ ಹ್ಯಾಶ್​ಟ್ಯಾಗ್, ಯಾಕೆ ಗೊತ್ತಾ?

ಮದುವೆಯಾದ ನಂತರ ದಂಪತಿಗಳು ತಮ್ಮ ಮೊದಲ ನೃತ್ಯವನ್ನು ಮಾಡುತ್ತಿದ್ದಾಗ ವರನು ಸ್ಟಂಟ್ ಮಾದರಿಯಲ್ಲಿ ಹೆಜ್ಜೆ ಹಾಕಲು ಪ್ರಯತ್ನಿಸಿದನು. ಮದುವೆಯಾದ ಖುಷಿಯಲ್ಲಿ ತೇಲಾಡುತ್ತಿದ್ದ ವರ ಕೈಕಾಲುಗಳನ್ನು ಅಲ್ಲಾಡಿಸುತ್ತಾ ಕಾಲೆತ್ತಿ ಖುರ್ಚಿ ಮೇಲೆ ಕುಳಿತಿದ್ದ ವಧುವಿನ ತಲೆ ಮೇಲಿನಿಂದ ಸಾಗಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ವರ ಸಾಕಷ್ಟು ಎತ್ತರ ಇರದ ಹಿನ್ನೆಲೆ ಕಾಲು ವಧುವಿನ ಮುಖಕ್ಕೆ ಬಡಿದಿದೆ.

ವರನ ಕಾಲಿನ ಏಟಿನಿಂದ ನೋವು ತಿಂದ ವಧು ತನ್ನ ಮುಖಕ್ಕೆ ಕೈ ಹಿಡಿದುಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೂಡಲೇ ವರನು ತನ್ನ ಪತ್ನಿಯನ್ನು ವಿಚಾರಿಸಲು ದಾವಿಸುತ್ತಾನೆ. ಈ ವಿಡಿಯೋವನ್ನು Los Negros Del Ataúd ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 407k ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Viral Video: ಇದು ಶೂ ಥರಾನೇ, ಆದರೆ ಶೂ ಅಲ್ಲ, ಹಾಗಿದ್ರೆ ಈ ವ್ಯಕ್ತಿ ಧರಿಸಿದ್ದಾದರೂ ಏನು ಗೊತ್ತಾ?

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ