Viral Video: ಟಿ ಶರ್ಟ್​ಗೆ 1000 ರೂ. ಅಲ್ಲ 150ರೂ. ಅಂತ ಹೇಳಿದ ಯುವಕನಿಗೆ ಕಪಾಳಮೋಕ್ಷ ಮಾಡಿದ ಯುವತಿ

| Updated By: Rakesh Nayak Manchi

Updated on: Jul 16, 2022 | 7:00 AM

1ಸಾವಿರ ಕೊಟ್ಟು ಟಿ ಶರ್ಟ್ ಖರೀದಿಸಿದ್ದಾಗಿ ಯುವತಿ ಹೇಳಿದಾಗ ಅದು 150 ರೂಪಾಯಿದ್ದು ಎಂದು ಯುವಕ ಹೇಳಿದ್ದಾನೆ. ಈ ವೇಳೆ ಕುಪಿತಗೊಂಡ ಯುವತಿ ಯುವಕನಿಗೆ ಕಪಾಳಮೋಕ್ಷ ಮಾಡುವ ವಿಡಿಯೋ ವೈರಲ್ ಆಗುತ್ತಿದೆ.

Viral Video: ಟಿ ಶರ್ಟ್​ಗೆ 1000 ರೂ. ಅಲ್ಲ 150ರೂ. ಅಂತ ಹೇಳಿದ ಯುವಕನಿಗೆ ಕಪಾಳಮೋಕ್ಷ ಮಾಡಿದ ಯುವತಿ
ಯುವಕನಿಗೆ ಯುವತಿಯ ಕಪಾಳಮೋಕ್ಷ
Follow us on

ಟಿ ಶರ್ಟ್ ಖರೀದಿ ವಿಚಾರಕ್ಕೆ ಆರಂಭವಾದ ಜಗಳ ಕಪಾಳ ಮೋಕ್ಷ ನಡೆಸುವವರೆಗೆ ಹೋದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬರ್ತ್​ಡೆಗಾಗಿ ನಾನು 1ಸಾವಿರ ಕೊಟ್ಟು ಟಿ ಶರ್ಟ್ ಖರೀದಿಸಿದ್ದಾಗಿ ಯುವತಿ ಹೇಳುತ್ತಾಳೆ. ನಂತರ ಪ್ರಾರಂಭವಾದ ಜಗಳ ತಾರಕಕ್ಕೇರಿದೆ. ಈ ಘಟನೆ ನಡೆದಿದ್ದು ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ. ಅಷ್ಟಕ್ಕೂ ಜಗಳ ನಡೆದಿದ್ದು ಹೇಗೆ ಎಂದು ಈ ಸುದ್ದಿಯಲ್ಲಿ ತಿಳಿಸುತ್ತೇವೆ. ತುಂಬಾ ಕುತೂಹಲಕಾರಿಯಾಗಿದೆ.

ಮೆಟ್ರೋದಲ್ಲಿ ಯುವಕ ಯುವತಿ ಪ್ರಯಾಣಿಸುತ್ತಿರುತ್ತಾರೆ. ಈ ವೇಳೆ ಯುವತಿ ತಾನು 1ಸಾವಿರ ರೂಪಾಯಿ ಕೊಟ್ಟು ಟಿ ಶರ್ಟ್ ಖರೀದಿಸಿದ್ದಾಗಿ ಹೇಳಿಕೊಳ್ಳುತ್ತಾಳೆ. ಈ ವೇಳೆ ಯುವಕ ಅದು 1000 ರೂಪಾಯಿದ್ದಲ್ಲ 150 ರೂಪಾಯಿದ್ದು ಅಂತ ಹೇಳುತ್ತಾನೆ. ಇದಕ್ಕೆ ಕುಪಿತಗೊಂಡ ಯುವತಿ ಜಗಳಕ್ಕೆ ನಿಂತಿದ್ದು ಯುವಕನಿಗೆ ಕಪಾಳಮೋಕ್ಷ ಮಾಡುತ್ತಾಳೆ. ಈ ವೇಳೆ ಯುವಕ ಎಚ್ಚರಿಕೆ ನೀಡಿದರೂ ಆಕೆ ಮತ್ತೆ ಮತ್ತೆ ಕಪಾಳಮೋಕ್ಷ ಮಾಡಿದ್ದಾಳೆ. ಕೊನೆಯಲ್ಲಿ ನಿಲ್ದಾಣವೊಂದರಲ್ಲಿ ಇಬ್ಬರು ಮೆಟ್ರೋದಿಂದ ಇಳಿಯುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ಅಷ್ಟಕ್ಕೂ ಈ ಘಟನೆ ನಡೆದಿದ್ದು ಯಾವಾಗ ಎಂದು ತಿಳಿದುಬಂದಿಲ್ಲ, ಆದರೆ ಇದು ಫ್ರಾಂಕ್ ಮಾಡುವ ಸ್ಕ್ರಿಪ್ಟೆಡ್ ವಿಡಿಯೋವೋ ಅಥವಾ ನಿಜವೋ ಗೊತ್ತಿಲ್ಲ. ಏಕೆಂದರೆ ವಿಡಿಯೋದಲ್ಲಿ ಕಾಣಿಸಿಕೊಂಡವರು ಯೂಟ್ಯೂಬರ್ ಗೌರವ್ ತನೇಜಾ ಮತ್ತು ಅವರ ಪತ್ನಿ ರತೀ ತನೇಜಾ.

ಗೌರವ್ ತನೇಜಾ ಅವರ ಪತ್ನಿ ರಿತು ರತೀ ತನೇಜಾ ಅವರ ಹುಟ್ಟುಹಬ್ಬದ ಆಚರಣೆಗೆ ಅನುಯಾಯಿಗಳನ್ನು ಆಹ್ವಾನಿಸಿದ್ದರು. ಇದರ ನಂತರ, ಯೂಟ್ಯೂಬರ್ ಅನ್ನು ಭೇಟಿ ಮಾಡಲು ಸಾವಿರಾರು ಜನರು ಸೆಕ್ಟರ್ 51 ಮೆಟ್ರೋ ನಿಲ್ದಾಣಕ್ಕೆ ಸೇರಿದ್ದರು. ಈ ಸಂಭ್ರಮಾಚರಣೆಯಿಂದಾಗಿ ಗೌರವ್ ತನೇಜಾ ಅವರು ಒಂದು ದಿನದ ಮಟ್ಟಿಗೆ ಜೈಲಿನಲ್ಲಿ ಕೂರುವ ಸ್ಥಿತಿಯೂ ಬಂದಿತ್ತು.

ನೋಯ್ಡಾ ಮೆಟ್ರೋ ನಿಲ್ದಾಣದಲ್ಲಿ ಜನದಟ್ಟಣೆಗೆ ಕಾರಣವಾದ ಆಶ್ಚರ್ಯಕರ ಹುಟ್ಟುಹಬ್ಬದ ಪಾರ್ಟಿಯನ್ನು ನಡೆಸಿದ್ದಕ್ಕಾಗಿ ಯೂಟ್ಯೂಬರ್ ಗೌರವ್ ತನೇಜಾ ಅವರನ್ನು ಒಂದು ದಿನದ ಮಟ್ಟಿಗೆ ಬಂಧಿಸಲಾಗಿದೆ. ನೋಯ್ಡಾದಲ್ಲಿ ಜಾರಿಯಲ್ಲಿರುವ ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ (CrPC) ಸೆಕ್ಷನ್ 144 ಮತ್ತು ಸೆಕ್ಷನ್ 188 (ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶಕ್ಕೆ ಅಸಹಕಾರ) ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಗಿದೆ.

Published On - 7:00 am, Sat, 16 July 22