ತಿನ್ನುತ್ತಿರುವಾಗ ಅಥವಾ ತನ್ನ ಪಾಡಿಗೆ ತಾನಿದ್ದ ಪ್ರಾಣಿಗಳಿಗೆ ಕೀಟಲೆ ಕೊಡುವುದನ್ನು ನಿಲ್ಲಬೇಕಾಗಿದೆ. ಇಲ್ಲವಾದರೆ ಪ್ರಾಣಿಯ ದಾಳಿಗೆ ತುತ್ತಾಗಬೇಕಾಗುತ್ತದೆ. ಯುವತಿಯೊಬ್ಬಳು ಹಸುವಿನ ಮುಂದೆ ಡಾನ್ಸ್ ಮಾಡುತ್ತಾ ಕೀಟಲೆ ಕೊಟ್ಟಾಗ ಕೋಪಗೊಂಡ ಹಸು ಬಲವಾಗಿ ಗುದ್ದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ‘psycho_biihari ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ರೀಲ್ಸ್ ವಿಡಿಯೋ ಈವರೆಗೆ 46 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 24 ಸಾವಿರಕ್ಕೂ ಹೆಚ್ಚು ಲೈಕ್ಗಳು ಬಂದಿವೆ.
ವಿಡಿಯೋದಲ್ಲಿ ಕಾಣುವಂತೆ, ಹಗ್ಗದಿಂದ ಕಟ್ಟಿ ಹಾಕಿದ್ದ ಹಸುವಿನ ಮುಂದೆ ಗುಲಾಬಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣದ ಲೆಗ್ಗಿಂಗ್‌ಗಳನ್ನು ಧರಿಸಿರುವ ಯುವತಿಯೊಬ್ಬಳು ಹಸುವಿಗೆ ಆಹಾರ ಹಾಕುತ್ತಾಳೆ. ಅಷ್ಟು ಮಾತ್ರವಲ್ಲದೆ ಅದನ್ನು ಹಸು ತಿನ್ನಲೂ ಬಿಡದೆ ವಿಲಕ್ಷಣವಾಗಿ ನೃತ್ಯವನ್ನು ಮಾಡುತ್ತಾಳೆ. ಹಸಿದ ವೇಳೆ ಹಾಕಿದ ಆಹಾರವನ್ನು ಸುಮ್ಮನೆ ತಿನ್ನಬೇಕು ಎನ್ನವಷ್ಟರಲ್ಲಿ ಯುವತಿಯ ಡಾನ್ಸ್ ಹಸುವಿಗೆ ಕಿರಿಕಿರಿ ಉಂಟುಮಾಡಿದೆ. ಆರಂಭದಲ್ಲಿ ಸುಮ್ಮನಾಗಿದ್ದ ಹಸು ನಂತರ ಕೋಪಗೊಂಡು ಅವಳನ್ನು ಬಲವಾಗಿ ತಳ್ಳುತ್ತದೆ. ಪರಿಣಾಮವಾಗಿ ಆ ಯುವತಿ ಹಿಂಬದಿ ಇದ್ದ ಬುಟ್ಟಿಯೊಳಗೆ ಬೀಳುತ್ತಾಳೆ. ಆ ಮೂಲಕ ರೀಲ್ಸ್ ವಿಡಿಯೋ ಕೊನೆಗೊಳ್ಳುತ್ತದೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Sun, 21 August 22