AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಶಸ್ತ್ರಸಜ್ಜಿತವಾದ ‘ರೋಬೋಟ್ ನಾಯಿ’ ಅನಾವರಣಗೊಳಿಸಿದ ರಷ್ಯಾ

ರಷ್ಯಾದ ವಾರ್ಷಿಕ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಎಕ್ಸ್‌ಪೋ-2022ರ ಕೇಂದ್ರಬಿಂದುವಾಗಿ ಆಂಟಿ ಟ್ಯಾಂಕ್ ರಾಕೆಟ್ ಲಾಂಚರ್ ಅನ್ನು ಹಿಂಭಾಗದಲ್ಲಿ ಕಟ್ಟಿಕೊಂಡಿರುವ ರೋಬೋಟ್ ನಾಯಿ ಕಾಣಿಸಿಕೊಂಡಿದೆ. ನಿಂಜಾ ಉಡುಗೆಯಲ್ಲಿ ಕಾಣಿಸಿಕೊಂಡ ರೋಬೋಟ್ ನಾಯಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ಶಸ್ತ್ರಸಜ್ಜಿತವಾದ 'ರೋಬೋಟ್ ನಾಯಿ' ಅನಾವರಣಗೊಳಿಸಿದ ರಷ್ಯಾ
ರೋಬೋಟ್ ನಾಯಿ ಅನಾವರಣಗೊಳಿಸಿದ ರಷ್ಯಾ
TV9 Web
| Edited By: |

Updated on:Aug 21, 2022 | 1:58 PM

Share

ರಷ್ಯಾದ ವಾರ್ಷಿಕ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಎಕ್ಸ್‌ಪೋ-2022ರ ಕೇಂದ್ರಬಿಂದುವಾಗಿ ಆಂಟಿ ಟ್ಯಾಂಕ್ ರಾಕೆಟ್ ಲಾಂಚರ್ ಅನ್ನು ಹಿಂಭಾಗದಲ್ಲಿ ಕಟ್ಟಿಕೊಂಡಿರುವ ರೋಬೋಟ್ ನಾಯಿ ಕಾಣಿಸಿಕೊಂಡಿದೆ. ನಿಂಜಾ ಉಡುಗೆಯಲ್ಲಿ ಕಾಣಿಸಿಕೊಂಡ ರೋಬೋಟ್ ನಾಯಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತನಿಖಾ ಮಾಧ್ಯಮದ ಪ್ರಕಾರ, ಚೀನೀ ಆನ್‌ಲೈನ್ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಗ್ರಾಹಕ ದರ್ಜೆಯ ರೋಬೋಟಿಕ್ ನಾಯಿಯು ಭವಿಷ್ಯದ ಸಾಧನಕ್ಕೆ ಗಮನಾರ್ಹವಾದ ಹೋಲಿಕೆಯನ್ನು ಹೊಂದಿದೆ.

“M-81 ಕಾಂಪ್ಲೆಕ್ಸ್” ಎಂದು ಕರೆಯಲ್ಪಡುವ ಚತುರ್ಭುಜದ ರೋಬೋಟ್ ನಾಯಿಯ ವಿಡಿಯೋವನ್ನು ರಷ್ಯಾದ ಸರ್ಕಾರಿ ಆರ್​ಐಎ ನೊವೊಸ್ಟಿ ಸುದ್ದಿ ಸಂಸ್ಥೆ ಹಂಚಿಕೊಂಡಿದ್ದು, ರೋಬೋಟ್ ನಾಯಿ ನಡೆಯುವುದು, ಮಲಗುವುದು ಮತ್ತು ತಿರುಗುವುದನ್ನು ವಿಡಿಯೋದಲ್ಲಿ ಕಾಣಬಹುದು.

ಗುರಿ ಆಯ್ಕೆ, ಗಸ್ತು ತಿರುಗುವಿಕೆ ಮತ್ತು ಭದ್ರತೆ M-81 ಗಾಗಿ ಹೆಚ್ಚುವರಿ ಮಿಲಿಟರಿ ಬಳಕೆಗಳಾಗಿವೆ ಎಂದು ಮೆಷಿನ್ ಇಂಟೆಲೆಕ್ಟ್ ಕಂಪನಿಯ ಪ್ರತಿನಿಧಿಯು ಆರ್​ಐಎ ನೊವೊಸ್ಟಿಗೆ ತಿಳಿಸಿದರು. ನಾಗರಿಕ ಕರ್ತವ್ಯಗಳಲ್ಲಿ ಔಷಧಿಯನ್ನು ಒಯ್ಯುವುದು, ಸುತ್ತಲೂ ವೀಕ್ಷಣೆ ಮಾಡುವುದು ಮತ್ತು ವಿಪತ್ತು ಪ್ರದೇಶಗಳಲ್ಲಿ ಕಲ್ಲುಮಣ್ಣುಗಳನ್ನು ದಾಟುವ ಸಾಮರ್ಥ್ಯವನ್ನು ಈ ರೋಬೋಟ್ ಹೊಂದಿದೆ.

ಅಷ್ಟೇ ಅಲ್ಲದೆ, RPG-26 ಟ್ಯಾಂಕ್ ವಿರೋಧಿ ರಾಕೆಟ್ ಲಾಂಚರ್ನೊಂದಿಗೆ ಇದು ಶಸ್ತ್ರಸಜ್ಜಿತವಾಗಿದ್ದು, ಸುಮಾರು 3 ಕೆಜಿ ವರೆಗೆ ಲೋಡ್ ಮಾಡಬಹುದಾಗಿದೆ, ಆಪ್ಟಿಕಲ್ ಗುರಿ ವ್ಯವಸ್ಥೆಯನ್ನು ಹೊಂದಿರುವ ಈ ರೋಬೋಟ್ ನಾಯಿ, ಎಕ್ಸ್​ಪೋದಲ್ಲಿ ತನ್ನ ಕೌಶಲ್ಯಗಳನ್ನು ಪ್ರದರ್ಶಿಸಿತು. ಈ ರೋಬೋಟ್ ನಾಯಿಯು,  ಚೀನೀ ಸ್ಟಾರ್ಟ್‌ಅಪ್ ಯುನಿಟ್ರೀ ರೋಬೋಟಿಕ್ಸ್ ಅಭಿವೃದ್ಧಿಪಡಿಸಿದ ಕಂಪ್ಯಾನಿಯನ್ ರೋಬೋಟ್ ಗೋ1 ಅನ್ನು ಹೋಲುತ್ತದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:58 pm, Sun, 21 August 22

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ