Viral Video : ಪಾಪ ಈ ಹುಡುಗಿ ಜನ್ಮದಲ್ಲಿ ಹಲಸಿನಹಣ್ಣನ್ನು ತಿರುಗಿ ನೋಡಲಿಕ್ಕಿಲ್ಲ!

Jackfruit : ಇನ್ನೇನು ಹಲಸಿನಹಣ್ಣು, ಹಿಡಿದುಕೊಂಡ ಜಾಕೆಟ್​​ನೊಳಗೆ ಬೀಳಬಹುದೆಂದು ಈ ಹುಡುಗಿಯರು ಅಂದುಕೊಂಡಿದ್ದರು. ಆದರೆ ಮುಂದೆನಾಯಿತು? ನೆಟ್ಟಿಗರಂತೂ ಬಿದ್ದು ಬಿದ್ದು ನಕ್ಕಿದ್ಧಾರೆ.

Viral Video : ಪಾಪ ಈ ಹುಡುಗಿ ಜನ್ಮದಲ್ಲಿ ಹಲಸಿನಹಣ್ಣನ್ನು ತಿರುಗಿ ನೋಡಲಿಕ್ಕಿಲ್ಲ!
ತಲೆಯ ಮೇಲೆ ಹಲಸಿನ ಹಣ್ಣು!
Edited By:

Updated on: Sep 01, 2022 | 11:40 AM

Viral Video : ಹಳ್ಳಿಗಳ ಕಡೆ ಶಾಂತಿಯುವಾಗಿ ಸಮಾಧಾನವಾಗಿ ಜೀವನ ನಡೆಸುವುದು ಒಂದು ಉತ್ತಮ ಜೀವನವಿಧಾನವೆಂದು ತೋರುವುದು ಸಹಜ. ಆದರೆ ಜಮೀನುಗಳಲ್ಲಿ, ತೋಟಗಳಲ್ಲಿ ವಾಸಿಸುವವರು ಕೆಲವೊಮ್ಮೆ ಅಪಾಯಕಾರಿ ಸಂದರ್ಭಗಳಿಗೆ ಎದುರಾಗುತ್ತಿರುತ್ತಾರೆ ಎನ್ನುವುದನ್ನು ತಳ್ಳಿಹಾಕಲಾಗದು. ದೊಡ್ಡ ತೆಂಗಿನಕಾಯಿ ಅಥವಾ ಹಲಸಿನಕಾಯಿ ನೇರ ನಿಮ್ಮ ನೆತ್ತಿಯ ಮೇಲೆ ಬಿದ್ದರೆ ಏನಾಗಬಹುದು. ಆಘಾತವೇ ತಾನೆ? ಇಲ್ಲಿ ಈ ಹುಡುಗಿಯರಿಗೆ ಹಲಸಿನಹಣ್ಣು ತಿನ್ನಬೇಕು ಎನ್ನಿಸಿದೆ. ಮುಂದೇನಾಯಿತು ನೀವೇ ನೋಡಿ.

ಜಾಕೆಟ್​ನೊಳಗೆ ಹಲಸಿನಕಾಯಿ ಬೀಳುವುದನ್ನು ನಿರೀಕ್ಷಿಸುತ್ತಿದ್ದ ಅವರಿಗೆ ಹೀಗಾಗಬಹುದು ಎಂಬ ಆಲೋಚನೆಯೇ ಇರಲಿಲ್ಲ ಅಲ್ಲವೆ? ತಲೆಮೇಲೆ ಹಲಸಿನಹಣ್ಣು ಬೀಳಿಸಿಕೊಂಡವಳಿಗೆ ಎಷ್ಟು ಆಘಾತ ಮತ್ತು ನೋವಾಗಿರಬೇಡ? ಉಳಿದವರಿಗೆ ನಗು!

26,000 ವೀಕ್ಷಣೆಗಳನ್ನು ಹೊಂದಿದ ಈ ವಿಡಿಯೋ 1,700 ಲೈಕ್ಸ್​ ಪಡೆದಿದೆ. ನೆಟ್ಟಿಗರಿಗೂ ಈ ವಿಡಿಯೋ ನೋಡಿ ನಗುವೋ ನಗು. ಪಾಪ ಆ ಹುಡುಗಿ ಇನ್ನೆಂದೂ ಹಲಸಿನ ಹಣ್ಣಿನೆಡೆ ಆಸೆ ಪಡಳೇನೋ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:52 am, Thu, 1 September 22