Viral Video : ಕೆಲಸ ಮಾಡುವ ಅಮ್ಮಂದಿರ ಮಕ್ಕಳದ್ದು ಯಾವಾಗಲೂ ಗೋಳೆ… ನೋಡಿ, ಅನುಭವಿಸಿ, ಕೇಳಿ ಸಾಕಾಗಿರುತ್ತದೆ. ಆದರೂ ಕೆಲವೊಮ್ಮೆ ಇದ್ದುದರಲ್ಲಿ ಅವರವರ ಮಟ್ಟದಲ್ಲಿ ಅವರವರೇ ಖುಷಿ ಕಂಡುಕೊಳ್ಳಲೂ ಸಾಧ್ಯವಿದೆ. ಈ ವಿಡಿಯೋ ನೋಡಿ. ಗಗನಸಖಿಯೊಬ್ಬಳು ತನ್ನ ಪುಟ್ಟ ಮಗುವನ್ನು ವಿಮಾನದಲ್ಲಿ ಸ್ವಾಗತಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗುತ್ತಿದೆ. ಫ್ಲೈಗರ್ಲ್ ಟ್ರಿಗರ್ಲ್ ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಕೆಲ ದಿನಗಳ ಹಿಂದೆ ಈ ಸಣ್ಣ ಕ್ಲಿಪ್ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಎಮಿರೇಟ್ಸ್ ವಿಮಾನದಲ್ಲಿ ಗಗನಸಖಿಯಾಗಿರುವ ತನ್ನ ತಾಯಿಗೆ ಬೋರ್ಡಿಂಗ್ ಪಾಸ್ ತೋರಿಸುತ್ತಿದೆ ಈ ಪುಟ್ಟ ಮಗು. 11,500 ಲೈಕ್ಸ್ ಪಡೆದಿದೆ ಈ ವಿಡಿಯೋ.
ಇದನ್ನೂ ಓದಿ
Viral Video : ತನ್ನ ಹುಡುಗನಿಗಾಗಿ ಪಂಜಾಬಿ ಕಲಿತು ಮಾತನಾಡಿದ್ದಾಳೆ ಈ ಕೆನಡಿಯನ್ ಯುವತಿ
Viral Video : ‘ಮಸಾಕಾ ಕಿಡ್ಸ್ ಆಫ್ರಿಕಾನಾ’ದ ಮಕ್ಕಳು ಈ ಸಲ ಜಸ್ಟಿನ್ ಬೈಬರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ
Viral Video: ಆಕಾಶಕ್ಕೆ ಈ ಬಣ್ಣದ ಕುಂಚಿಗೆ ಕಟ್ಟಿದರಾರೋ? ಚೀನಾದಲ್ಲಿ ಮೂಡಿದ ಕಾಮನಬಿಲ್ಲು
Viral Video : ನಿರೀಕ್ಷೆ ಇಲ್ಲದೆ ಪ್ರೀತಿಸುವುದಷ್ಟೇ ಗೊತ್ತು ಈ ಜೀವಗಳಿಗೆ
ಎರಡು ದಿನಗಳ ಹಿಂದೆ ಏರ್ ಇಂಡಿಯಾದ ಫ್ಲೈಟ್ ಅಟೆಂಡೆಂಟ್ ಪ್ರಯಾಣಿಕರ ಮಗುವನ್ನು ತನ್ನ ಹೆಗಲಮೇಲೆ ಹಾಕಿಕೊಂಡು ಸಂತೈಸಿದ ಮುದ್ದಾದ ವಿಡಿಯೋ ನೋಡಿ ಮೆಚ್ಚಿದ್ದಿರಿ. ಈ ವಿಡಿಯೋ ನೋಡಿ ಏನನ್ನಿಸುತ್ತಿದೆ?