Viral Video : ಒಂದೇ ಬೈಕ್​ ಮೇಲೆ ಏಳು ಜನರ ಸವಾರಿ! ಇದು ನಕ್ಕು ಸುಮ್ಮನಾಗುವ ವಿಷಯವಲ್ಲ

Bike Riding : ಟ್ವಿಟರ್​ನಲ್ಲಿ 1.7 ಮಿಲಿಯನ್ ನೆಟ್ಟಿಗರ ಹುಬ್ಬೇರುವಂತೆ ಮತ್ತು ವಿಧವಿಧವಾಗಿ ಪ್ರತಿಕ್ರಿಯಿಸುವಂತೆ ಮಾಡಿದೆ ಈ ವಿಡಿಯೋ. ನೀವೇನು ಹೇಳುತ್ತೀರಿ ಈ ದೃಶ್ಯಕ್ಕೆ.

Viral Video : ಒಂದೇ ಬೈಕ್​ ಮೇಲೆ ಏಳು ಜನರ ಸವಾರಿ! ಇದು ನಕ್ಕು ಸುಮ್ಮನಾಗುವ ವಿಷಯವಲ್ಲ
ಬೈಕ್ ಒಂದೇ ಜನ ಏಳು!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 01, 2022 | 11:41 AM

Viral Video : ಏಳು ಜನರ ಕುಟುಂಬವೊಂದು ಒಂದೇ ಬೈಕ್‌ನಲ್ಲಿ ಹೋಗುತ್ತಿರುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ರೀತಿಯಲ್ಲಿ ಅನೇಕರು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಬೈಕ್​ ಸವಾರ ನಾಲ್ಕು ಮಕ್ಕಳು ಮತ್ತು ಇಬ್ಬರು ಮಹಿಳೆಯರನ್ನು ಕೂರಿಸಿಕೊಂಡಿದ್ದಾನೆ. ಯಾರೊಬ್ಬರೂ ಹೆಲ್ಮೆಟ್​ ಧರಿಸಿಲ್ಲ. ಈ ವಿಡಿಯೋ 1.2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವ ಮೂಲಕ ವ್ಯಕ್ತಿಗಳು ತಮ್ಮ ಜೀವವನ್ನು ಹೇಗೆ ಅಪಾಯಕ್ಕೆ ತಳ್ಳಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಅನೇಕ ನೆಟ್ಟಿಗರು ಚರ್ಚಿಸಿದ್ದಾರೆ. ಸರಿಯಾದ ಸಾರಿಗೆ ಸೌಲಭ್ಯಗಳ ಕೊರತೆಯಿಂದಾಗಿ ಜನರು ಹೀಗೆ ಅನಿವಾರ್ಯವಾಗಿ ಬದುಕಬೇಕಿದೆ ಎಂದು ಮತ್ತಷ್ಟು ಜನರು ಹೇಳಿದ್ದಾರೆ. ಆ್ಯಕ್ಸಿಡೆಂಟ್ ಆದರೆ ಅಥವಾ ಅವರಾಗಿಯೇ ಬಿದ್ದರೆ ಮಕ್ಕಳ ಗತಿ ಏನು? ಇಂಥ ಸವಾರರನ್ನು ಬಂಧಿಸಬೇಕು, ಡ್ರೈವಿಂಗ್ ಲೈಸನ್ಸ್​ ರದ್ದುಗೊಳಿಸಬೇಕು ಎಂದು ಇನ್ನೂ ಕೆಲವರು ಹೇಳಿದ್ದಾರೆ.

ದೇಶದಲ್ಲಿ ಇಂಧನ ಬೆಲೆ ಹೆಚ್ಚುತ್ತಿರುವುದರಿಂದ ಕೆಳ ಮತ್ತು ಕೆಳಮಧ್ಯಮ ವರ್ಗದ ಮೇಲೆ ಹೆಚ್ಚು ಪರಿಣಾಮ ಉಂಟಾಗುತ್ತಿದೆ ಎನ್ನುವುದು ಗಮನಿಸಬೇಕಾದ ವಿಷಯ. ‘ಇದು ತಮಾಷೆ ವಿಷಯವಲ್ಲ. ದೇವರು ಅವರನ್ನು ಸುರಕ್ಷಿತವಾಗಿರಿಸಲಿ ಮತ್ತು ಅವರು ಉತ್ತಮ ಸಾರಿಗೆ ವ್ಯವಸ್ಥೆಯನ್ನು ಪಡೆಯಲು ಸಾಧ್ಯವಾಗಲಿ‘ ಎಂದು ಒಬ್ಬ ವ್ಯಕ್ತಿ ಹಾರೈಸಿದ್ದಾರೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:36 am, Thu, 1 September 22