Trending : ಇದು ವಿಮಾನದಲ್ಲಿ ಮೂಡಿದ ಹಚ್ಚೆಯ ಕಥೆ

Tattoo : ಟ್ಯಾಟೂ ಕಲಾವಿದೆಯೊಬ್ಬರು ವಿಮಾನದಲ್ಲಿ ಪ್ರಯಾಣಿಸುತ್ತಲೇ ತನ್ನ ಪಕ್ಕದಲ್ಲಿದ್ದ ಅಪರಿಚಿತ ಪ್ರಯಾಣಿಕರ ಮನದಿಂಗಿತವನ್ನು ಅರ್ಥ ಮಾಡಿಕೊಂಡು ಅವರ ಕೈಮೇಲೆ ಟ್ಯಾಟೂ ಹಾಕಿದ್ದಾರೆ.

Trending : ಇದು ವಿಮಾನದಲ್ಲಿ ಮೂಡಿದ ಹಚ್ಚೆಯ ಕಥೆ
ಆ್ಯಷರ್ ಸಹಪ್ರಯಾಣಿಕಳಿಗೆ ಟ್ಯಾಟೂ ಹಾಕುತ್ತಿರುವುದು.
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 01, 2022 | 10:36 AM

Viral Video : ಟ್ಯಾಟೂ ಅಥವಾ ಹಚ್ಚೆ ಹಾಕಿಸಿಕೊಳ್ಳಬೇಕೆಂದರೆ ಹಳೆಯ ಕಾಲದಲ್ಲಿ ಎಲ್ಲೂ ಹೋಗಬೇಕಿರಲಿಲ್ಲ. ಹಚ್ಚೆ ಹಾಕುವವರೇ ಮನೆಮನೆಗೆ ಬಂದು ಹಾಕಿ ಹೋಗುತ್ತಿದ್ದರು. ಆದರೆ ಈಗ ಆಧುನಿಕ ಕಾಲದಲ್ಲಿ ಟ್ಯಾಟೂ ಸ್ಟುಡಿಯೋಗೇ ಹೋಗಬೇಕು. ಇಲ್ಲವಾದರೆ ಎಲ್ಲಿ ಹೋಗಿ ಹಾಕಿಸಿಕೊಳ್ಳಬಹುದು. ಈ ಬಗ್ಗೆ ನಿಮಗೇನಾದರೂ ಕಲ್ಪನೆ ಬರುತ್ತದೆಯೇ? ಆದರೆ, ಇಲ್ಲೊಬ್ಬ ಟ್ಯಾಟೂ ಕಲಾವಿದರು ಸಾವಿರಾರು ಅಡಿಗಳಷ್ಟು ಮೇಲೆ ಅಂದರೆ ವಿಮಾನದಲ್ಲಿ ಅಪರಿಚಿತರೊಬ್ಬರಿಗೆ ಟ್ಯಾಟೂ ಹಾಕಿದ ಘಟನೆ ನಡೆದಿದೆ.

ಟ್ಯಾಟೂ ಕಲಾವಿದ ಆ್ಯಶರ್ ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ. ಪಕ್ಕದಲ್ಲಿದ್ದ ಪ್ರಯಾಣಿಕರು ಆ್ಯಶರ್ ಮೈಮೇಲಿನ ಟ್ಯಾಟೂ ನೋಡಿ ಆಕರ್ಷಿತರಾಗಿ ಹೊಗಳಲಾರಂಭಿಸಿದರು. ನಂತರ ತನಗೂ ಟ್ಯಾಟೂ ಹಾಕಿಸಿಕೊಳ್ಳುವುದಿದೆ. ಆದರೆ ಎಲ್ಲಿ ಹಾಕಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೇನೆ ಎಂದು ಆ್ಯಶರ್​ ಅವರನ್ನುದ್ದೇಶಿಸಿ ಹೇಳಿದರು. ಆಗ ಆ್ಯಶರ್, ‘ಓಹ್ ಹೌದಾ, ನನ್ನ ಬಳಿ ಟ್ಯಾಟೂ ಹಾಕುವ ಎಲ್ಲಾ ಟೂಲ್ಸ್​ ಇವೆ ಎಂದು ಸಾಂದರ್ಭಿಕವಾಗಿ ತಮಾಷೆಗಾಗಿ ಹೇಳಿದೆ. ನಂತರ ಪರಸ್ಪರ ಮಾತನ್ನು ಮುಂದುವರಿಸಿದೆವು. ಆದರೆ, ಆಕೆ ತುಂಬಾ ಉತ್ಸುಕತೆಯಿಂದ ಮಾತನಾಡುತ್ತಿದ್ದಳು. ಪ್ರವಾಸದಲ್ಲಿ ಸಾಹಸವನ್ನು ಹುಡುಕುತ್ತಿರುವಂತೆಯೂ ತೋರಿತು. ನಂತರ ಅವಳ ಬಲಗೈ ಮೇಲೆ Hello ಎಂದು ಟ್ಯಾಟೂ ಹಾಕಿದೆ’ ಎಂದು ‘ಬಝ್​ಫೀಡ್’​ಗೆ ತಿಳಿಸಿದರು.

ಆ್ಯಷರ್, ಟ್ಯಾಟೂ ಹಾಕುವ ಮೊದಲು ಶುಚಿತ್ವವನ್ನು ಖಚಿತಪಡಿಸಿಕೊಂಡು ಫ್ಲೈಟ್​ ಅಟೆಂಡೆಂಟ್​ಗಳಿಂದ ಅನುಮತಿ ಪಡೆದಿದ್ದರು. ವಿಮಾನದೊಳಗಿನ ನಿಶ್ಯಬ್ದದಲ್ಲಿಯೂ, ಯಾರೋ ಒಬ್ಬರು ಇಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ ಎನ್ನುವುದು ಉಳಿದ ಪ್ರಯಾಣಿಕರ ಗಮನಕ್ಕೆ ಬರಲೇ ಇಲ್ಲ!

ಇದನ್ನೂ ಓದಿ
Image
Viral Video : ತನ್ನ ಹುಡುಗನಿಗಾಗಿ ಪಂಜಾಬಿ ಕಲಿತು ಮಾತನಾಡಿದ್ದಾಳೆ ಈ ಕೆನಡಿಯನ್ ಯುವತಿ
Image
Viral Video : ‘ಮಸಾಕಾ ಕಿಡ್ಸ್​ ಆಫ್ರಿಕಾನಾ’ದ ಮಕ್ಕಳು ಈ ಸಲ ಜಸ್ಟಿನ್​ ಬೈಬರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ
Image
Viral Video: ಆಕಾಶಕ್ಕೆ ಈ ಬಣ್ಣದ ಕುಂಚಿಗೆ ಕಟ್ಟಿದರಾರೋ? ಚೀನಾದಲ್ಲಿ ಮೂಡಿದ ಕಾಮನಬಿಲ್ಲು
Image
Viral Video : ನಿರೀಕ್ಷೆ ಇಲ್ಲದೆ ಪ್ರೀತಿಸುವುದಷ್ಟೇ ಗೊತ್ತು ಈ ಜೀವಗಳಿಗೆ

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:21 am, Thu, 1 September 22