Kannada News Trending Heartwarming Video Of Air India Flight Attended Consoling Little Baby Leaves Internet In Awe
Viral Video : ಏರ್ ಇಂಡಿಯಾ ವಿಮಾನದಲ್ಲಿ ಹೀಗೊಂದು ಹೃದಯಸ್ಪರ್ಶಿ ಸನ್ನಿವೇಶ
Air India : ಹೆಣ್ಣುಮಗುವನ್ನು ಹೆಗಲ ಮೇಲೆ ಹಾಕಿಕೊಂಡು ಸಂತೈಸುತ್ತಿರುವ ಏರ್ ಇಂಡಿಯಾ ಸಿಬ್ಬಂದಿಗೆ ನೆಟ್ಟಿಗರಿಂದ ಶಭಾಷ್! 2ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗೊಳಗಾದ ಈ ವಿಡಿಯೋ ನೋಡಿ.
ಪ್ರಯಾಣಿಕರ ಮಗುವನ್ನು ಸಂತೈಸುತ್ತಿರುವ ಏರ್ ಇಂಡಿಯಾ ಸಿಬ್ಬಂದಿ
Viral Video : ವಿಮಾನದಲ್ಲಿ ಚಿಕ್ಕಮಕ್ಕಳೊಂದಿಗೆ ಪ್ರಯಾಣಿಸುವುದು ನಿಜಕ್ಕೂ ಪ್ರಯಾಸದ ಕೆಲಸ. ಇಂಥ ಸಂದರ್ಭದಲ್ಲಿ ವಿಮಾನ ಸಿಬ್ಬಂದಿ ಸಹಕರಿಸಿದರೆ ವರ್ಣಿಸದಷ್ಟು ಆರಾಮದಾಯಕವಾಗಿರುತ್ತದೆ ಪ್ರಯಾಣ. ಅಂಥದೊಂದು ದೃಶ್ಯವನ್ನು ನೀವಿಲ್ಲಿ ನೋಡಬಹುದು. ನೀಲ್ ಮಲ್ಕಮ್ ಎಂಬ ಏರ್ ಇಂಡಿಯಾ ಸಿಬ್ಬಂದಿ ಪ್ರಯಾಣಿಕರ ಹೆಣ್ಣುಮಗುವನ್ನು ಭುಜದ ಮೇಲೆ ಹಾಕಿಕೊಂಡು ಸಂತೈಸಿದ್ದಾರೆ. ಈ ಮಗುವಿನ ತಂದೆ ವೆಂಕಟೇಶ ನೀಲ್ ಅವರಿಗೆ ವಿಶೇಷ ಧನ್ಯವಾದ ಹೇಳಿದ್ದಾರೆ. ವೆಂಕಟೇಶ್, ಅವರ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ನೋಡಬಹುದು. ಹೀಗೆ ಭುಜದ ಮೇಲೆ ಹಾಯಾಗಿ ವಿರಮಿಸುವ ಈ ಮಗುವನ್ನು ನೋಡಿ ನೆಟ್ಟಿಗರ ಮನತುಂಬಿದೆ.
ಇದನ್ನೂ ಓದಿ
Viral Video : ತನ್ನ ಹುಡುಗನಿಗಾಗಿ ಪಂಜಾಬಿ ಕಲಿತು ಮಾತನಾಡಿದ್ದಾಳೆ ಈ ಕೆನಡಿಯನ್ ಯುವತಿ
Viral Video : ‘ಮಸಾಕಾ ಕಿಡ್ಸ್ ಆಫ್ರಿಕಾನಾ’ದ ಮಕ್ಕಳು ಈ ಸಲ ಜಸ್ಟಿನ್ ಬೈಬರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ
Viral Video: ಆಕಾಶಕ್ಕೆ ಈ ಬಣ್ಣದ ಕುಂಚಿಗೆ ಕಟ್ಟಿದರಾರೋ? ಚೀನಾದಲ್ಲಿ ಮೂಡಿದ ಕಾಮನಬಿಲ್ಲು
Viral Video : ನಿರೀಕ್ಷೆ ಇಲ್ಲದೆ ಪ್ರೀತಿಸುವುದಷ್ಟೇ ಗೊತ್ತು ಈ ಜೀವಗಳಿಗೆ
ಆಗಸ್ಟ್ 7 ರಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ ನೀಲ್ ಪ್ರಯಾಣಿಕರ ಮಗುವನ್ನು ಸಂತೈಸಿದ್ದಾರೆ. ಇವರ ಈ ಆಪ್ತ ನಡೆವಳಿಕೆಯನ್ನು ಮೆಚ್ಚಿಕೊಂಡ ಮಗುವಿನ ತಂದೆ ವೆಂಕಟೇಶ್, ‘ನನ್ನ ಮಗಳು ಹೀಗೆ ಅವರ ಭುಜದ ಮೇಲೆ ಹಾಯಾಗಿ ಮಲಗಿರುವುದನ್ನು ನೋಡಿ ಅಚ್ಚರಿಗೊಳಗಾಗಿದ್ದೇನೆ. ಏರ್ ಇಂಡಿಯಾ ಅನ್ನು ಟಾಟಾ ತನ್ನ ಸುಪರ್ದಿಗೆ ತೆಗೆದುಕೊಂಡ ನಂತರ ಅನೇಕ ಬದಲಾವಣೆಗಳು ಉಂಟಾಗುತ್ತಿವೆ’ ಎಂದು ಪೋಸ್ಟ್ನಲ್ಲಿ ಬರೆದು, ನೀಲ್ ಮಲ್ಕಮ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ನೆಟ್ಟಿಗರು ಹೃದಯಸ್ಪರ್ಶಿಯಾದ ಈ ದೃಶ್ಯವನ್ನು ಕೊಂಡಾಡುತ್ತಿದ್ದಾರೆ. 1,70,000 ಕ್ಕೂ ಹೆಚ್ಚು ಲೈಕ್ಸ್ ಮತ್ತು 2 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಯನ್ನು ಈ ವಿಡಿಯೋ ಹೊಂದಿದೆ.