Viral Video: ಹರಿಯುತ್ತಿರುವ ನದಿಯನ್ನು ಎಚ್ಚರಿಕೆಯಿಂದ ದಾಟಿದ ಆಡಿನ ಹಿಂಡು; ಜೀವನದ ಪಾಠ ಕಲಿಸುವ ವಿಡಿಯೋ ವೈರಲ್

| Updated By: Rakesh Nayak Manchi

Updated on: Jul 14, 2022 | 2:44 PM

ಹರಿಯುವ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಾಂಕ್ರೀಟ್ ಬ್ಲಾಕ್‌ಗಳನ್ನು ಆಡುಗಳ ಹಿಂಡು ಬಹಳ ಎಚ್ಚರಿಕೆಯಿಂದ ಜಿಗಿಯುವ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಹಲವರು ಆಡುಗಳಿಂದ ಕಲಿತ ಪಾಠವನ್ನು ಹಂಚಿಕೊಂಡಿದ್ದಾರೆ.

Viral Video: ಹರಿಯುತ್ತಿರುವ ನದಿಯನ್ನು ಎಚ್ಚರಿಕೆಯಿಂದ ದಾಟಿದ ಆಡಿನ ಹಿಂಡು; ಜೀವನದ ಪಾಠ ಕಲಿಸುವ ವಿಡಿಯೋ ವೈರಲ್
ಕಾಂಕ್ರಿಟ್ ಬ್ಲಾಕ್​ಗಳನ್ನು ಹಾರುತ್ತಿರುವ ಆಡುಗಳು
Follow us on

ಪ್ರಕೃತಿ ಮತ್ತು ಪ್ರಾಣಿಗಳಿಂದ ಮಾನವರಾದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ಇದೀಗ ಆಡುಗಳ ಹಿಂಡೊಂದು ನದಿ ದಾಟುವ ಮೂಲಕ ಒಂದಷ್ಟು ಮಂದಿ ಸ್ಪೂರ್ತಿಯನ್ನು ಪಡೆಯಲು ಕಾರಣವಾಗಿದೆ. ವೀಡಿಯೊದಲ್ಲಿ ಇರುವಂತೆ, ನದಿಯೊಂದರಲ್ಲಿ ವೇಗವಾಗಿ ನೀರು ಹರಿಯುತ್ತಿರುತ್ತದೆ. ಇದಕ್ಕೆ ಅಡ್ಡಲಾಗಿ ಕಟ್ಟಲಾಗಿರುವ ಕಾಂಕ್ರೀಟ್ ಬ್ಲಾಕ್‌ಗಳ ಬಹಳ ಎಚ್ಚರಿಕೆಯಿಂದ ಜಿಗಿಯುವುದನ್ನು ನೋಡಬಹುದು.

ಇದನ್ನೂ ಓದಿ: Viral Video: ಮಳೆಯ ನೀರು ತಾಗಬಾರದೆಂದು ತಂಗಿಯನ್ನು ಬೆನ್ನ ಮೇಲೆ ಕೂರಿಸಿ ರಸ್ತೆ ದಾಟಿಸಿದ ಅಣ್ಣ; ವಿಡಿಯೋ ವೈರಲ್​

ಭಾರತೀಯ ಪೊಲೀಸ್ ಸೇವಾ ಅಧಿಕಾರಿ ದೀಪಾಂಶು ಕಬ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ 15 ಸೆಕೆಂಡುಗಳ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಇತರರಿಗೆ ಜಾಗ ನೀಡುವ ಮೂಲಕ ನೀವು ಮುಂದೆ ಹೋಗಬಹುದು ಎಂದು ಶೀರ್ಷಿಕೆ ನೀಡಿದ್ದಾರೆ. ಕಾಬ್ರಾ ಅವರು ಹಂಚಿಕೊಂಡಿರುವ ಈ ವಿಡಿಯೋ ವೈರಲ್ ಪಡೆದು ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 16,000ಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ.

ಇದನ್ನೂ ಓದಿ: Viral Video: ಗೋಲ್ಗಪ್ಪ ಪ್ರಿಯರೇ ಇಲ್ಲಿ ನೋಡಿ… ಗೋಲ್ಗಪ್ಪ ನೀರಿನ ರುಚಿಯನ್ನು ಹೆಚ್ಚಿಸಲು ಟಾಯ್ಲೆಟ್ ಕ್ಲೀನರ್ ಬಳಕೆ

ಇದನ್ನೂ ಓದಿ: Viral Video: ಬೆಸ್ಟ್ ಫ್ರೆಂಡ್ ಮದುವೆಗೆ ಹೋಗುವ ಮುನ್ನ ‘ಮೆಹಂದಿ ಹೈ ರಚನೇವಾಲಿ’ ಹಾಡಿಗೆ ನೃತ್ಯ ಮಾಡಿದ ಸುಂದರಿಯರು

ಅನೇಕ ಜನರು ತಮ್ಮ ಸ್ವಂತ ಪಾಠಗಳನ್ನು ಮತ್ತು ವಿಡಿಯೋದಿಂದ ಕಂಡುಕೊಂಡ ಪಾಠವನ್ನು ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, “ನೀವು ಬೇರೆಡೆಗೆ ತಲುಪಲು ಬಯಸಿದರೆ ನೀವು ಇದೀಗ ಆಕ್ರಮಿಸಿಕೊಂಡಿರುವ ಜಾಗವನ್ನು ಖಾಲಿ ಮಾಡಬೇಕು. ಭೌತಶಾಸ್ತ್ರದ ನಿಯಮಗಳು ಈ ತತ್ತ್ವಶಾಸ್ತ್ರವನ್ನು ಸತ್ಯವೆಂದು ಅನುಮತಿಸುತ್ತವೆ, ಅದು ಅಕ್ಷರಶಃ, ಒಂದು ವಸ್ತುವು ಒಂದೇ ಸಮಯದಲ್ಲಿ ಎರಡು ವಿಭಿನ್ನ ಸ್ಥಾನಗಳಲ್ಲಿರಲು ಸಾಧ್ಯವಿಲ್ಲ” ಎಂದಿದ್ದಾರೆ.

ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯಿಸಿ, “ವಿಶೇಷವಾಗಿ ಕಾರ್ಪೊರೇಟ್ ಕಂಪನಿಗಳಲ್ಲಿ ಬೆಳೆಯಲು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ನಿಮ್ಮ ತಂಡದ ಸದಸ್ಯರಿಗೆ ತರಬೇತಿ ನೀಡಿ ಮತ್ತು ಅವರು ಪ್ರದರ್ಶನವನ್ನು ನಡೆಸಲು ಅವಕಾಶ ಮಾಡಿಕೊಡಿ ಮತ್ತು ಅದೇ ಸಮಯದಲ್ಲಿ ನಿಮ್ಮ ನಾಯಕತ್ವದ ಗುಣಗಳನ್ನು ನೀವು ಬೆಳೆಸಿಕೊಳ್ಳಬಹುದು” ಎಂದಿದ್ದಾರೆ.

ಇದನ್ನೂ ಓದಿ: Viral Video: ವಿಮಾನದ ಕಿಟಕಿಯ ಮೂಲಕ ಹೊರಗಿದ್ದ ಸಿಬ್ಬಂದಿಯೊಂದಿಗೆ ಪ್ರಯಾಣಿಕನ ರಾಕ್ ಪೇಪರ್ ಕತ್ತರಿ ಆಟ

Published On - 2:43 pm, Thu, 14 July 22