ಮೈತುಂಬಾ ರೋಮಗಳುಳ್ಳ ನಾಯಿಗಳು ಸಾಮಾನ್ಯವಾಗಿ ತಂಪಾಗಿರುವ ಜಾಗವನ್ನು ನೋಡಿಕೊಂಡು ಮಲಗಿಬಿಡುತ್ತದೆ. ಇನ್ನು ಅಂತಹ ನಾಯಿಗಳು ನೀರು ಸಿಕ್ಕಿದರೆ ಬಿಡುತ್ತವೆಯೇ? ಬಂಡೆ ಕಲ್ಲಿನ ಮೇಲಿನಿಂದ ಜಲಪಾತದಂತೆ ಹರಿದು ಬರುತ್ತಿರುವ ನೀರಿನಲ್ಲಿ ಎರಡು ನಾಯಿಗಳು ಜಾರುಬಂಡಿಯಂತೆ ಆಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ನೀವು ಪೆಟ್ ಲವರ್ಸ್ ಆಗಿದ್ದರೆ ಖಂಡಿತವಾಗಿಯೂ ಈ ವಿಡಿಯೋವನ್ನು ನೋಡಲೇಬೇಕು. ಏಕೆಂದರೆ, ಈ ವಿಡಿಯೋ ನಿಮ್ಮ ಮನಸ್ಸಿಗೆ ಮುದ ನೀಡುವಂತಿದೆ.
ಗೋಲ್ಡನ್ ರಿಟ್ರೈವರ್ ನಾಯಿಗಳ ವಿಡಿಯೋಗಳಿಗೆ ಸೀಮಿತವಾಗಿರುವ agoldennamedkevin ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಎರಡು ಗೋಲ್ಡನ್ ರಿಟ್ರೈವರ್ ನಾಯಿಗಳು ಬೃಹದಾಕಾರದ ಬಂಡೆಗಲ್ಲಿನ ಮೇಲಿನಿಂದ ಹರಿದು ಬರುತ್ತಿರುವ ನೀರಿನ ನಡುವೆ ಮೇಲಕ್ಕೆ ಹತ್ತಲು ಹರಸಾಹಸ ಪಡುವುದನ್ನು ಕಾಣಬಹುದು. ಐದು ದಿನಗಳ ಹಿಂದೆ ಹಂಚಿಕೊಂಡಿರುವ ಈ ವಿಡಿಯೋ ಈವರೆಗೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 90ಸಾವಿರಕ್ಕೂ ಹೆಚ್ಚು ಲೈಕ್ಗಳು ಬಂದಿವೆ.
ವೈರಲ್ ವಿಡಿಯೋದಲ್ಲಿ ಇರುವಂತೆ, ಎರಡು ಗೋಲ್ಡನ್ ರಿಟ್ರೈವರ್ ನಾಯಿಗಳು ದೊಡ್ಡ ಬಂಡೆ ಕಲ್ಲಿನ ಮೇಲಿನಿಂದ ಹರಿದು ಬರುತ್ತಿರುವ ನೀರಿನಲ್ಲಿ ಆಡುತ್ತಿರುತ್ತವೆ. ಮಾತ್ರವಲ್ಲದೆ ನೀರಿನ ನಡುವೆ ಮೇಲಕ್ಕೆ ಹತ್ತಲು ಯತ್ನಿಸುತ್ತವೆ. ಈ ವೇಳೆ ಎರಡೂ ನಾಯಿಗಳು ಜಾರಿ ಬೀಳುತ್ತವೆ. ಇದರಲ್ಲೊಂದು ನಾಯಿ ಮಾತ್ರ ಮಕ್ಕಳು ಜಾರು ಬಂಡಿಯಲ್ಲಿ ಜಾರಿದಂತೆ ಜಾರಿಕೊಂಡು ಕೆಳಗೆ ಹೋಗುತ್ತದೆ.
ವಿಡಿಯೋವನ್ನು ನೋಡಿದ ಒಂದಷ್ಟು ಮಂದಿ ಪ್ರೀತಿಯ ಕಾಮೆಂಟ್ಗಳನ್ನು ಮಾಡಿದ್ದಾರೆ. ಕಾಮೆಂಟ್ ಮಾಡಿದ ನೆಟ್ಟಿಗರೊಬ್ಬರು, ಕಷ್ಟಪಡುವುದು ನಿಜ” ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, “ನನಗೆ ತುಂಬಾ ಮೋಜು ತೋರುತ್ತಿದೆ” ಎಂದಿದ್ದಾರೆ.