Viral Video: ಅಪಘಾತ ತಪ್ಪಿಸಲು ಮುಂದಾದರೂ ನಡೆಯಿತು ಭೀಕರ ಅಪಘಾತ! ವಿಡಿಯೋ ಇಲ್ಲಿದೆ ನೋಡಿ

ಸಂಭವಿಸಬಹುದಾದ ಕಾರು ಅಪಘಾತವನ್ನು ತಪ್ಪಿಸಲು ಪ್ರಯತ್ನಿಸುವಾಗ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು. ಈ ಭೀಕರ ಅಪಘಾತದ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ಅಪಘಾತ ತಪ್ಪಿಸಲು ಮುಂದಾದರೂ ನಡೆಯಿತು ಭೀಕರ ಅಪಘಾತ! ವಿಡಿಯೋ ಇಲ್ಲಿದೆ ನೋಡಿ
ಕಾರು ಅಪಘಾತ
Edited By:

Updated on: Jul 01, 2022 | 11:21 PM

ವಾಹನ ಚಾಲನೆಯಲ್ಲಿದ್ದಾಗ ಅಡ್ಡದಾರಿಯಲ್ಲಿ ಇದ್ದಕ್ಕಿದ್ದಂತೆ ವಾಹನ ಬಂದು ಎದುರಾದಾಗ ಚಾಲಕರು ಕೈಕಾಲುಬಡಿಯುತ್ತಾರೆ. ಈ ವೇಳೆ ಅಪಘಾತಗಳು ನಡೆಯುವುದು ಹೆಚ್ಚು. ಇತ್ತೀಚೆಗೆ ಯುಎಸ್‌ನಲ್ಲಿ ಎಸ್‌ಯುವಿ ಕಾರು ಡ್ರೈವರ್‌ ಕೂಡ ಅನುಭಿವಿಸಿದ್ದು ಕೂಡ ಇದೇ ಪರಿಸ್ಥಿತಿ. ಸಂಭವಿಸಬಹುದಾದ ಕಾರು ಅಪಘಾತ(Car Accident) ವನ್ನು ತಪ್ಪಿಸಲು ಪ್ರಯತ್ನಿಸುವಾಗ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಭೀಕರ ಅಪಘಾತದ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (Video Viral) ಆಗುತ್ತಿದೆ.

ಇದನ್ನೂ ಓದಿ: Viral Video: ಹುಲಿ ಮರಿಗಳಿಗೆ ಹಾಲು ಕುಡಿಸಿದ ಒರಾಂಗುಟಾನ್! ನೆಟ್ಟಿಗರ ಮನಸೂರೆಗೊಳಿಸುವ ವಿಡಿಯೋ ವೈರಲ್

ಬೂದು ಟೊಯೋಟಾ ಹೈಲ್ಯಾಂಡರ್ ಕಾರೊಂದು ರಸ್ತೆ ಮೂಲಕ ವೇಗವಾಗಿ ಹೋಗುತ್ತಿದ್ದಾಗ ಟಿ-ಬೋನ್ ಬಳಿ ಇದ್ದಕ್ಕಿದ್ದಂತೆ ಬಂದ ಮತ್ತೊಂದು ಕಾರು ಹೈಲ್ಯಾಂಡರ್ ಕಾರನ್ನು ನೋಡಿ ಕೂಡಲೇ ನಿಲ್ಲಿಸಿದೆ. ಅಷ್ಟರಲ್ಲಾಗಲೇ ಹೈಲ್ಯಾಂಡರ್ ಕಾರು ನಿಯಂತ್ರಣ ಕಳೆದುಕೊಂಡು ಬೀದಿ ದೀಪದ ಕಂಬ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬಗಳು ಮುರಿದಿದ್ದು, ವಿದ್ಯುತ್ ತಂತಿಗಳು ತುಂಡಾಗಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ. ಒಂದಷ್ಟು ಸೆಕೆಂಡುಗಳ ನಂತರ ಆ ಕಾರಿನ ಒಳಗಿಂದ ಚಾಲಕ ಡೋರ್ ತೆಗೆಯಲು ಕಷ್ಟಪಡುತ್ತಿರುವುದನ್ನು ನೋಡಿದ ಜನರು ಚಾಲಕನ ನೆರವಿಗೆ ದಾವಿಸಿದ್ದಾರೆ. ಅದರಂತೆ ಚಾಲಕ ಸುರಕ್ಷಿತವಾಗಿ ಕಾರಿನಿಂದ ಕೆಳಗಿಳಿದಿದ್ದಾನೆ.

ABC7 ನ್ಯೂಸ್ ಪ್ರಕಾರ, ಅಪಘಾತದಿಂದಾಗಿ ಘಟನಾ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಕ್ಕೆ ಕಾರಣವಾಯಿತು. ಘಟನೆಯ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ವಿಡಿಯೋವನ್ನು ಹಂಚಿಕೊಂಡ ವ್ಯಕ್ತಿ ಸುದ್ದಿ ವಾಹಿನಿಗೆ “ಚಾಲಕನು ಪ್ರಾಣಾಪಾಯದಿಂದ ಪಾರಾಗಿದ್ದಾನೆ” ಎಂದು ಹೇಳಿದರು.

ಇದನ್ನೂ ಓದಿ:Viral Photo: 20 ರೂಪಾಯಿ ಚಹಾಕ್ಕೆ 70 ರೂಪಾಯಿ ಬಿಲ್ ನೋಡಿ ಪ್ರಯಾಣಿಕ ಶಾಕ್! ರೈಲಿನಲ್ಲಿ ಈ ವ್ಯವಸ್ಥೆ ಇದೆ ಗೊತ್ತಾ?