Viral Video: ವಿದ್ಯುತ್ ಅಪಘಾತದಲ್ಲಿ ತನ್ನ ಎರಡೂ ಕಾಲು, ಒಂದು ಕೈ ಕಳೆದುಕೊಂಡ ಯುವಕನ ದೇಹದಾರ್ಢ್ಯ ಹೇಗಿದೆ ನೋಡಿ?

|

Updated on: Apr 01, 2023 | 4:02 PM

ಯುವಕನೊಬ್ಬ 2016ರಲ್ಲಿ ವಿದ್ಯುತ್ ಆಘಾತದಿಂದ ತನ್ನ ಎರಡೂ ಕಾಲುಗಳು ಮತ್ತು ಒಂದು ಕೈಯನ್ನು ಕಳೆದುಕೊಂಡಿದ್ದಾನೆ, ಆದರೆ ಯಾವುದಕ್ಕೂ ಕುಗ್ಗದೆ ಈಗ ಅನೇಕ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾನೆ ಸೂರಜ್ ಗೇವಾಲ್ ಟ್ರಿಪಲ್.

Viral Video: ವಿದ್ಯುತ್ ಅಪಘಾತದಲ್ಲಿ ತನ್ನ ಎರಡೂ ಕಾಲು, ಒಂದು ಕೈ ಕಳೆದುಕೊಂಡ ಯುವಕನ ದೇಹದಾರ್ಢ್ಯ ಹೇಗಿದೆ ನೋಡಿ?
ಸೂರಜ್ ಗೇವಾಲ್ ಟ್ರಿಪಲ್
Image Credit source: NDTV
Follow us on

ಪುಣೆಯ 23 ವರ್ಷದ ಯುವಕನೊಬ್ಬ 2016ರಲ್ಲಿ ವಿದ್ಯುತ್ ಆಘಾತದಿಂದ ತನ್ನ ಎರಡೂ ಕಾಲುಗಳು ಮತ್ತು ಒಂದು ಕೈಯನ್ನು ಕಳೆದುಕೊಂಡಿದ್ದಾನೆ, ಆದರೆ ಅವನು ಈ ವಿಚಾರಕ್ಕೆ ಕುಗ್ಗದೆ, ತಮ್ಮ ಸಾಹಸದ ಪ್ರದರ್ಶನವನ್ನು ಮಾಡುತ್ತಿದ್ದಾನೆ. ಹೌದು ಈಗ ಅನೇಕ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾನೆ ಸೂರಜ್ ಗೇವಾಲ್ ಟ್ರಿಪಲ್, ಈ ಯುವಕ ಅಂಗವಿಕಲ ಬಾಡಿಬಿಲ್ಡರ್ ಆಗಿದ್ದು, ಆತ ತನ್ನ ಬಾಡಿಬಿಲ್ಡರ್ ಫೋಟೋಗಳನ್ನು ಹಾಗೂ ವೀಡಿಯೊಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ ಮತ್ತು ಆತನಿಗೆ Instagram ನಲ್ಲಿ 86.3K ಅನುಯಾಯಿಗಳು ಕೂಡ ಇದ್ದಾರೆ.

ಗೇವಾಲ್ ಶೇರು ಕ್ಲಾಸಿಕ್ 2022, ಮಿಸ್ಟರ್ ಇಂಡಿಯಾ 2022 ಮತ್ತು ಮಿಸ್ಟರ್ ಯೂನಿವರ್ಸ್ 2022 ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಈ ಯುವಕ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ, ತನ್ನ ಉತ್ಸಾಹಕತೆ ಚಟುವಟಿಕೆ ಎಲ್ಲ ಕಡೆ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಇದೀಗ ಇದಕ್ಕೆ ಸಂಬಂಧಿಸಿದಂತೆ ವೀಡಿಯೊವೊಂದು ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿನ ದೇಹದಾರ್ಢ್ಯವು ಆಟವಲ್ಲ, ಇದು ಒಂದು ಭಾವನೆ ಎಂದು ಬರೆದು ಫೋಟೋವನ್ನು ಫೋಸ್ಟ್​ ಮಾಡಿದ್ದಾರೆ. ಈ ವೀಡಿಯೊವನ್ನು Instagram ನಲ್ಲಿ 2 ಮಿಲಿಯನ್ ವೀಕ್ಷಣೆಗಳು ಮತ್ತು ಹಲವಾರು ಜನ ಕಾಮೆಂಟ್‌ ಮಾಡಿದ್ದಾರೆ. ಒಬ್ಬ ಬಳಕೆದಾರ, ಈಗಿನ ಯುವಕರು ರಾಕಿಂಗ್ ಮಾಡಲು ನೀವು ಪ್ರೇರಣೆಯಾಗಿದ್ದೀರಿ ಬ್ರೋ ಎಂದು ಬರೆದಿದ್ದಾರೆ.

ಇದನ್ನೂ ಓದಿ: Viral Video: ಹೆಣ್ಮಕ್ಕಳನ್ನು ಚುಡಾಯಿಸುವ ಹುಡುಗರಿಗೆ ಮುಟ್ಟಿನೋಡಿಕೊಳ್ಳುವಂತೆ ಪಾಠ ಮಾಡಿದ ಶಿಕ್ಷಕಿ

ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, “ಕಠಿಣ ಕೆಲಸವು ಎಂದಿಗೂ ವಿಫಲವಾಗುವುದಿಲ್ಲ, ನನ್ನ ಸಹೋದರ ನೀವು ಯಾವಾಗಲೂ ಈ ರೀತಿಯ ಸಾಧನೆ ಮಾಡಿ ಎಂದು ಹೇಳಿದ್ದಾರೆ. ಇದನ್ನು ನೋಡಿದ ನಂತರ ಆ ದೇವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ. ಕೀಪ್ ಇಟ್ ಅಪ್ ಬ್ರೋ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

Published On - 4:01 pm, Sat, 1 April 23