Viral Video: ಹೆಂಡತಿಗೆ ಚಾಪ್​ಸ್ಟಿಕ್​ನಲ್ಲಿ ನೂಡಲ್ಸ್​ ತಿನ್ನುವುದನ್ನು ಹೇಳಿಕೊಟ್ಟ ಗಂಡ; ಕ್ಯೂಟ್ ವಿಡಿಯೋ ಇಲ್ಲಿದೆ

| Updated By: ಸುಷ್ಮಾ ಚಕ್ರೆ

Updated on: Dec 23, 2021 | 1:10 PM

ಗಂಡ ಮತ್ತು ಹೆಂಡತಿ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದು, ಅಲ್ಲಿ ಅವರು ನೂಡಲ್ಸ್ ಬೌಲ್ ಅನ್ನು ಆರ್ಡರ್ ಮಾಡಿದ್ದಾರೆ. ನೂಡಲ್ಸ್ ತಿನ್ನಲು ಚಾಪ್​ಸ್ಟಿಕ್​ಗಳನ್ನು ಹೇಗೆ ಬಳಸಬೇಕೆಂದು ಗಂಡ ತನ್ನ ಹೆಂಡತಿಗೆ ಕಲಿಸುತ್ತಿದ್ದಾನೆ.

Viral Video: ಹೆಂಡತಿಗೆ ಚಾಪ್​ಸ್ಟಿಕ್​ನಲ್ಲಿ ನೂಡಲ್ಸ್​ ತಿನ್ನುವುದನ್ನು ಹೇಳಿಕೊಟ್ಟ ಗಂಡ; ಕ್ಯೂಟ್ ವಿಡಿಯೋ ಇಲ್ಲಿದೆ
ಗಂಡ-ಹೆಂಡತಿ ನೂಡಲ್ಸ್​ ತಿನ್ನುತ್ತಿರುವ ವಿಡಿಯೋ
Follow us on

ಹೊಸದಾಗಿ ಮದುವೆಯಾದ ಜೋಡಿಯೊಂದು ರೆಸ್ಟೋರೆಂಟ್​ಗೆ ಊಟಕ್ಕೆ ಬಂದಿತ್ತು. ಆ ನವವಿವಾಹಿತ ಜೋಡಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನ್ನ ಮುದ್ದಿನ ಹೆಂಡತಿಗೆ ಗಂಡ ಚಾಪ್‌ಸ್ಟಿಕ್‌ಗಳನ್ನು ಹೇಗೆ ಬಳಸಬೇಕೆಂದು ಹೇಳಿಕೊಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ. ಈ ಕ್ಯೂಟ್ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವಿಡಿಯೋದಲ್ಲಿರುವ ವ್ಯಕ್ತಿಯನ್ನು ಸಾಯಿ ಗುರುಂಗ್ ಮತ್ತು ಆತನ ಪತ್ನಿ ಅಕ್ಷಿತಾ ಗುರುಂಗ್ ಎಂದು ಗುರುತಿಸಲಾಗಿದೆ. ಈ ವೈರಲ್ ವಿಡಿಯೋವನ್ನು 1 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಗಂಡ ಮತ್ತು ಹೆಂಡತಿ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದು, ಅಲ್ಲಿ ಅವರು ನೂಡಲ್ಸ್ ಬೌಲ್ ಅನ್ನು ಆರ್ಡರ್ ಮಾಡಿದ್ದಾರೆ. ನೂಡಲ್ಸ್ ತಿನ್ನಲು ಚಾಪ್​ಸ್ಟಿಕ್​ಗಳನ್ನು ಹೇಗೆ ಬಳಸಬೇಕೆಂದು ಗಂಡ ತನ್ನ ಹೆಂಡತಿಗೆ ಕಲಿಸುತ್ತಿದ್ದಾನೆ. ಗಂಡ ಹೇಳಿದಂತೆಯೇ ಹೆಂಡತಿ ಚಾಪ್​ಸ್ಟಿಕ್​ನಲ್ಲಿ ನೂಡಲ್ಸ್ ತಿನ್ನಲು ಪ್ರಯತ್ನಿಸಿದ್ದಾಳೆ.

ಆ ರೆಸ್ಟೋರೆಂಟ್‌ನ ಅಧಿಕೃತ ಖಾತೆಯಿಂದ ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹೊಸ ವಿಷಯಗಳನ್ನು ಕಲಿಯಲು ಗಂಡ ತನ್ನ ಹೆಂಡತಿಗೆ ಎಷ್ಟು ಮುದ್ದಾಗಿ ಸಹಾಯ ಮಾಡುತ್ತಿದ್ದಾನೆ ಎಂಬುದನ್ನು ಇನ್​ಸ್ಟಾಗ್ರಾಂ ಬಳಕೆದಾರರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Viral Video: ಕುಕ್ಕರ್​ನಲ್ಲಿ ಕಾಫಿ ತಯಾರಿಸಿದ ವ್ಯಕ್ತಿ: ವೀಡಿಯೋ ವೈರಲ್​

Viral Video: ಅಮ್ಮನ ಮದುವೆಯಲ್ಲಿ ಮಗಳ ಸಂಭ್ರಮ; ಈ ವಿಡಿಯೋ ನೋಡಿದರೆ ಅಚ್ಚರಿಯಾಗದಿರದು!