ಸದ್ಯ ಬಾಲಿವುಡ್ನಲ್ಲಿ ಕಾಲಾ ಚಶ್ಮಾ ಎಂಬ ಹಾಡು ಸಖತ್ ಹಿಟ್ ಆಗಿತ್ತು. ಸಿದ್ಧಾರ್ಥ್ ಮೆಹ್ಲೋತ್ರಾ ಮತ್ತು ಕತ್ರಿನಾ ಕೈಫ್ ಅವರ ಅಭಿನಯದ ಈ ಹಾಡನ್ನು ದೇಶ ವಿದೇಶಗಳಲ್ಲೂ ಸೂಪರ್ ಹಿಟ್. ಈ ಹಾಡಿಗೆ ಸಣ್ಣ ಮಕ್ಕಳು, ಯುವಜನರು ಮಾತ್ರವಲ್ಲದೆ ಹಿರಿಯರು ಕೂಡ ಡಾನ್ಸ್ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿದ ಅನೇಕ ರೀಲ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದು. ಇದೀಗ ಕಲಾ ಚಶ್ಮಾ ಹಾಡಿಗೆ ಭಾರತದ ಆಂಟಿಯರು ಮಾಡಿದ ಡಾನ್ಸ್ಗಳ ತುಣುಕುಗಳನ್ನು ಒಟ್ಟಿಗೆ ಸೇರಿಸಿ ಮಾಡಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ಯೂಟ್ಯೂಬ್ನಲ್ಲಿ 50 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ಕ್ವಿಕ್ ಸ್ಟೈಲ್ನ ರೀಲ್ನಿಂದ ಆಡಿಯೋವನ್ನು ಬಳಸಿಕೊಂಡು ಕಾಲಾ ಚಶ್ಮಾ ನೃತ್ಯದ ನಟನಟಿಯರು ಹಾಕಿದ ಸ್ಟೆಪ್ ಅನ್ನೇ ಸಂಯೋಜನೆ ಮಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ಈ ಹಾಡಿನಲ್ಲಿ ಅಂಬೆಗಾಲಿನಲ್ಲಿ ಬಂದು ಹಾಕುವ ಸ್ಟೆಪ್ ಹಿಟ್ ಆಗಿದೆ.
ಈ ಹಾಡಿಗೆ ಅಂಬೆಗಾಲಿನಲ್ಲೇ ಸ್ಟೆಪ್ ಹಾಕುವ ಮೂಲಕ ಭಾರತೀಯ ಆಂಟಿಗಳು ಕೂಡ ಈಗ ಟ್ರೆಂಡ್‌ನಲ್ಲಿ ಇದ್ದಾರೆ. ಆಂಟಿಗಳ ಈ ಹಾಡಿಗೆ ಹಾಕಿದ ಸ್ಟೆಪ್ಗಳ ಬಹು ಕ್ಲಿಪ್ಗಳನ್ನು ಒಂದೇ ವಿಡಿಯೋದಲ್ಲಿ ಎಡಿಟ್ ಮಾಡಿ ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇಲ್ಲಿದೆ ನೋಡಿ:
ಕತ್ರಿನಾ ಕೈಫ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಕಾಲಾ ಚಶ್ಮಾ ಹಾಡು 2018 ರಲ್ಲಿ ಬಿಡುಗಡೆಯಾಗಿರಬಹುದು ಆದರೆ ಅದರ ಜನಪ್ರಿಯತೆಯು ಕಡಿಮೆಯಾಗಲು ನಿರಾಕರಿಸುತ್ತದೆ. ಈ ಹಿಂದೆ ಇದೇ ಹಾಡಿಗೆ ವಿದೇಶಿ ಹುಡುಗರು ಭರ್ಜರಿಯಾಗಿ ಡಾನ್ಸ್ ಮಾಡಿದ್ದಾರೆ. ಉಗಾಂಡಾದ ಎನ್‌ಜಿಒ ಸ್ಮ್ಯಾಶ್ ಟ್ಯಾಲೆಂಟ್ ಫೌಂಡೇಶನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಚಿಕ್ಕ ಕ್ಲಿಪ್‌ನಲ್ಲಿ, ಎನ್‌ಜಿಒದ ಪುಟ್ಟ ಹುಡುಗರು ಆಕರ್ಷಕ ಹಾಡಿಗೆ ಉತ್ಸಾಹದಿಂದ ಡಾನ್ಸ್ ಮಾಡುತ್ತಿರುವುದನ್ನು ಕಾಣಬಹುದು.
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 10:58 am, Sun, 28 August 22