AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಹೆಂಡತಿಯೊಂದಿಗೆ ನಿತ್ಯ ಜಗಳ: ಹೆದರಿ ತಾಳೆ ಮರವೇರಿ ಗಂಡನ ವಾಸ, ಹೌಹಾರಿದ ನೆಟ್ಟಿಗರು

ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಹೆದರಿ ಕಳೆದ 25 ದಿನಗಳಿಂದ ತಾಳೆ ಮರದ ಮೇಲೆ ವಾಸಿಸುತ್ತಿರುವಂತಹ ಘಟನೆ ನಡೆದಿದೆ. ಈ ಸುದ್ದಿ ತಿಳಿದ ನೆಟ್ಟಿಗರು ನಿಜಿಕ್ಕೂ ಹೌಹಾರಿದ್ದಾರೆ.

Viral News: ಹೆಂಡತಿಯೊಂದಿಗೆ ನಿತ್ಯ ಜಗಳ: ಹೆದರಿ ತಾಳೆ ಮರವೇರಿ ಗಂಡನ ವಾಸ, ಹೌಹಾರಿದ ನೆಟ್ಟಿಗರು
ಹೆಂಡತಿಗೆ ಹೆದರಿ ತಾಳೆ ಮರವೇರಿ ಗಂಡನ ವಾಸ!
TV9 Web
| Edited By: |

Updated on: Aug 28, 2022 | 7:23 AM

Share

ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಮಾತು ಇಂದಿಗೂ ಪ್ರಸ್ತುತ. ದಂಪತಿಗಳ ನಡುವೆ ಆಗಾಗ ಜಗಳವಾಗುವುದು ಸಹಜ. ನಾವು ನಮ್ಮ ಪ್ರೀತಿಪಾತ್ರರಲ್ಲಿ ಕೋಪ ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಜಗಳವಾದಾಗ      ಅವರೊಂದಿಗೆ  ಮಾತನಾಡದೆ ಅಥವಾ ಅವರು ಬಂದು ಕ್ಷಮೆಯಾಚಿಸುವವರೆಗೆ ಇಡೀ ದಿನ ಮಾತನಾಡದೆ ನಮ್ಮ ಭಾವನೆಗಳನ್ನು ಹೊರಹಾಕುತ್ತೇವೆ. ಆದರೆ, ಇತ್ತೀಚೆಗೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಹೆದರಿ ಕಳೆದ 25 ದಿನಗಳಿಂದ ತಾಳೆ ಮರದ ಮೇಲೆ ವಾಸಿಸುತ್ತಿರುವಂತಹ ಘಟನೆ ನಡೆದಿದೆ. ಈ ಸುದ್ದಿ ತಿಳಿದ ನೆಟ್ಟಿಗರು ನಿಜಿಕ್ಕೂ ಹೌಹಾರಿದ್ದಾರೆ. ಗಂಡ-ಹೆಂಡತಿಯ ಜಗಳ ಇಷ್ಟು ದೊಡ್ಡ ತಿರುವು ಪಡೆಯಬಹುದು ಎಂಬುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.

ಉತ್ತರ ಪ್ರದೇಶದ ಮೌ ಜಿಲ್ಲೆಯ ರಾಮ್ ಪ್ರವೇಶ್ ಎಂಬ ವ್ಯಕ್ತಿ ಒಂದು ತಿಂಗಳಿನಿಂದ ಗ್ರಾಮದ ಮಧ್ಯದಲ್ಲಿರುವ ತಾಳೆ ಮರದ ಮೇಲೆ ವಾಸಿಸುತ್ತಿದ್ದಾರೆ. ರಾಮ್ ಪ್ರವೇಶ್ ತಂದೆ ವಿಶುಂರಾಮ್ ಅವರ ಪ್ರಕಾರ, ಅವರ ಮಗ ಪ್ರವೇಶ್ ತನ್ನ ಹೆಂಡತಿಯೊಂದಿಗೆ ಪ್ರತಿನಿತ್ಯ ಜಗಳದಿಂದಾಗಿ ಮರದ ಮೇಲೆ ಮನೆ ಮಾಡಿದ್ದಾನೆ ಎಂದಿದ್ದಾರೆ. ರಾಮ್‌ನ ಹೆಂಡತಿ ಪ್ರತಿದಿನ ತನಗೆ ಥಳಿಸುತ್ತಿದ್ದಳು ಎಂದು ವಿನ್ಸುರಾಮ್ ಹೇಳಿಕೊಂಡಿದ್ದಾನೆ. ನಿರಂತರ ಜಗಳದಿಂದ ಬೇಸತ್ತ ರಾಮ್ ತಾಳೆ ಮರದ ಮೇಲೆ ವಾಸಿಸಲು ನಿರ್ಧರಿಸಿದನು. ಆದರೆ, ರಾಮ್ ಮರದ ಮೇಲೆ ವಾಸಿಸುವುದಕ್ಕೆ ಆ ಪ್ರದೇಶದಲ್ಲಿ ವಾಸಿಸುವ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ನೀ ನನಗಾದರೆ ನಾ ನಿನಗೆ ಎನ್ನುತ್ತಿವೆ ಈ ಆಮೆಗಳು

ವಿಶೇಷವಾಗಿ ಮಹಿಳೆಯರು, ರಾಮ್ ಮರದ ಮೇಲೆ ವಾಸಿಸುತ್ತಿರುವುದು ತಮ್ಮ ಖಾಸಗಿ ತನದ ಮೇಲೆ ಆಕ್ರಮಣವಾಗಿದೆ ಎಂದು ದೂರಿದ್ದಾರೆ. ಮರವು ಸುಮಾರು 100 ಅಡಿ ಎತ್ತರವಾಗಿದ್ದು, ಸಮೀಪದಲ್ಲಿಯೇ ಕೊಳ ಇರುವುದರಿಂದ ಮಹಿಳೆಯರು ಹಾಗೂ ಗ್ರಾಮಸ್ಥರ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ತಮ್ಮ ಮನೆಯ ಅಂಗಳ ರಾಮನಿಗೆ ಕಾಣಿಸುತ್ತಿವೆ ಎಂದು ಆರೋಪಿಸಿ ಖಾಸಗಿತನದ ಕುರಿತು ದೂರಿದ್ದಾರೆ. ರಾಮನನ್ನು ಮರದಿಂದ ಕೆಳಗಿಳಿಸಲು ಪ್ರಯತ್ನಿಸಿದ್ದು, ಅವನು ಕಲ್ಲುಗಳನ್ನು ಎಸೆದಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇನ್ನೂ ಆತನ ಊಟವನ್ನು ಕುಟುಂಬಸ್ಥರೆ ನೋಡಿಕೊಳ್ಳುತ್ತಿದ್ದು, ರಾಮ್ ಮೇಲ್ಲಿಂದ ಹಗ್ಗವನ್ನು ಎಸೆಯಲಾಗುತ್ತಿದ್ದು, ಕುಟುಂಬ ಸದಸ್ಯರು ಊಟ ಮತ್ತು ನೀರನ್ನು ಹಗ್ಗಕ್ಕೆ ಕಟ್ಟುತ್ತಾರೆ. ನಂತರ ರಾಮ್​ ಅದನ್ನು ಮೇಲಕ್ಕೆತ್ತಿಕೊಳ್ಳುತ್ತಾನೆ.

ರಾಮ್ ತಡರಾತ್ರಿ ಮರದಿಂದ ಕೆಳಗಿಳಿದು ತನ್ನ ದೈನಂದಿನ ಚಟುವಟಿಕೆಗಳನ್ನು ಮುಗಿಸಿ ನಂತರ ಹಿಂತಿರುಗುತ್ತಾನೆ ಎಂದು ಆ ಪ್ರದೇಶದಲ್ಲಿ ವಾಸಿಸುವ ಗ್ರಾಮಸ್ಥರು ಹೇಳಿದ್ದಾರೆ. ಈ ಅಸಾಮಾನ್ಯ ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕಾಗಮಿಸಿ ಪರಿಸ್ಥಿತಿಯ ವಿಡಿಯೋ ರೆಕಾರ್ಡ್ ಮಾಡಿ, ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ, ತನ್ನ ಸೊಸೆ ತನ್ನ ಪತಿಯನ್ನು ಥಳಿಸುತ್ತಾಳೆ ಎಂಬ ರಾಮ್‌ನ ತಂದೆ ವಿಂಸುರಾಂ ಹೇಳಿಕೆಗೆ ವಿರುದ್ಧವಾಗಿ, ರಾಮ್ ಮತ್ತು ಅವನ ತಂದೆಯ ನಡುವೆ ನಿರಂತರ ಮನಸ್ತಾಪವಿದೆ ಎಂದು ಬರಸಾತ್‌ಪುರದ ಗ್ರಾಮದ ಮುಖ್ಯಸ್ಥ ದೀಪಕ್ ಹೇಳಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.