Viral Video: ಅಬ್ಬಬ್ಬಾ ಎಂಥಾ ಬಿಸಿಲು!; ಸ್ಕೂಟಿ ಸೀಟ್ ಮೇಲೆ ಬಿಸಿ ಬಿಸಿ ದೋಸೆ ಬೇಯಿಸಿದ ಯುವಕ

ಹೈದರಾಬಾದ್‌ನಲ್ಲಿ ವ್ಯಕ್ತಿಯೊಬ್ಬರು ಸ್ಕೂಟರ್ ಸೀಟ್ ಮೇಲೆ ಬಿಸಿ ಬಿಸಿಯಾದ ದೋಸೆ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

Viral Video: ಅಬ್ಬಬ್ಬಾ ಎಂಥಾ ಬಿಸಿಲು!; ಸ್ಕೂಟಿ ಸೀಟ್ ಮೇಲೆ ಬಿಸಿ ಬಿಸಿ ದೋಸೆ ಬೇಯಿಸಿದ ಯುವಕ
ಸ್ಕೂಟಿ ಸೀಟ್ ಮೇಲೆ ದೋಸೆ ಮಾಡಿದ ಯುವಕ
Image Credit source: indiatv news
Edited By:

Updated on: Jun 06, 2022 | 1:31 PM

ಭಾರತದ ದಕ್ಷಿಣ ರಾಜ್ಯಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಉತ್ತರ ಭಾರತದ ಕೆಲವೆಡೆ ಕೂಡ ಮಳೆಯಾಗುತ್ತಿದೆ. ಆದರೆ, ಇನ್ನೊಂದೆಡೆ ಉತ್ತರ ಭಾರತದ ಹಲವೆಡೆ ಬಿಸಿ ಗಾಳಿಯೂ (Heat Wave) ಹೆಚ್ಚಾಗಿದೆ. 2022 ಅತ್ಯಂತ ಬಿಸಿಯಾದ ವರ್ಷಗಳಲ್ಲಿ ಒಂದಾಗಿದೆ. ತಾಪಮಾನ ಹೆಚ್ಚಾಗುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ತಾಪಮಾನ 46 ಡಿಗ್ರಿಗಿಂತ ಹೆಚ್ಚಾಗಿದೆ. ಇದರಿಂದ ಜನರು ಮನೆಯಿಂದ ಹೊರಬರಲು ಕಷ್ಟಪಡುತ್ತಿದ್ದಾರೆ. ಇಲ್ಲೊಬ್ಬ ಯುವಕ ಬಿಸಿಲಿನಿಂದ ಸುಡುತ್ತಿದ್ದ ತನ್ನ ಸ್ಕೂಟಿಯ ಸೀಟಿನ ಮೇಲೆ ದೋಸೆ ಎರೆದಿರುವ ವಿಡಿಯೋ ವೈರಲ್ (Viral Video) ಆಗಿದೆ.

ಸ್ಕೂಟಿಯ ಸೀಟಿನಲ್ಲಿ ಈ ಯುವಕ ದೋಸೆಯನ್ನು ಬೇಯಿಸಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹೈದರಾಬಾದ್‌ನಲ್ಲಿ ವ್ಯಕ್ತಿಯೊಬ್ಬರು ಸ್ಕೂಟರ್ ಸೀಟ್ ಮೇಲೆ ಬಿಸಿ ಬಿಸಿಯಾದ ದೋಸೆ ಮಾಡುತ್ತಿರುವುದನ್ನು ನೋಡಬಹುದು. ಈ ವೀಡಿಯೋ ನೋಡಿದ ನಂತರ ಇಂಟರ್‌ನೆಟ್ ಬಳಕೆದಾರರು ಬೆಚ್ಚಿಬಿದ್ದಿದ್ದಾರೆ. ಬಿಸಿಗಾಳಿಯ ತೀವ್ರತೆಯ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು “ಓಹ್ ಸ್ಕೂಟಿಯ ಸೀಟ್ ಕವರ್ ನಾನ್ ಸ್ಟಿಕ್ ತವಾಕ್ಕಿಂತ ಉತ್ತಮವಾಗಿದೆ” ಎಂದು ಕಮೆಂಟ್ ಮಾಡಿದ್ದಾರೆ.

ಉಷ್ಣ ಅಲೆ ಎಂದರೇನು?:
ಭಾರತದಲ್ಲಿ ಬಿಸಿಲಿನ ತಾಪ ಇಂದು ಮುಂದುವರೆಯಲಿದೆ. ಆದರೆ ಬಿಸಿ ಅಲೆ ಎಂದರೇನು? ಭಾರತೀಯ ಹವಾಮಾನ ಇಲಾಖೆ (IMD) ಕೆಲವು ಪರಿಸ್ಥಿತಿಗಳಲ್ಲಿ ‘ಉಷ್ಣ ಅಲೆ’ ಅಥವಾ ‘ತೀವ್ರ ಶಾಖದ ಅಲೆ’ ಎಂದು ಘೋಷಿಸುತ್ತದೆ. 45 ಡಿಗ್ರಿ ಸೆಲ್ಸಿಯಸ್ ಅಥವಾ ಹೆಚ್ಚಿನ ಗರಿಷ್ಠ ತಾಪಮಾನವನ್ನು ದಾಖಲಿಸಿದರೆ ಅದನ್ನು ಉಷ್ಣ ಅಲೆ ಎನ್ನಲಾಗುತ್ತದೆ. ಹಾಗೇ, ಗರಿಷ್ಠ ತಾಪಮಾನವು ಆ ದಿನದ ಸಾಮಾನ್ಯ ತಾಪಮಾನಕ್ಕಿಂತ 4.5ರಿಂದ 6.4 ಡಿಗ್ರಿ ಸೆಲ್ಸಿಯಸ್‌ ಇದ್ದರೆ ಅದನ್ನು ಕೂಡ ಉಷ್ಣದ ಅಲೆ ಎಂದು ಕರೆಯಲಾಗುತ್ತದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ