Viral Video: ಸೀರೆಯುಟ್ಟು ಕಂಗೊಳಿಸುತ್ತಿರುವ ಜಪಾನೀಸ್ ಐಶ್ವರ್ಯ ರೈ; ವೈರಲ್ ವಿಡಿಯೋ ಇಲ್ಲಿದೆ

ಐಶ್ವರ್ಯ ರೈ ಅವರ ಹಿಂದಿ ಚಲನಚಿತ್ರಗಳ ಐಕಾನಿಕ್ ಡೈಲಾಗ್‌ಗಳಲ್ಲಿ ಒಂದನ್ನು ಜಪಾನ್ ಮಹಿಳೆ ಸಂಭಾಷಣೆ ಮಾಡಿದ್ದಾರೆ. ಅಲ್ಲದೆ, ಆ ವಿಡಿಯೋಗೆ ಬಾಲಿವುಡ್ ರೇಂಜ್​ನಲ್ಲಿ ಸೀರೆಯನ್ನು ಉಟ್ಟ ತನ್ನ ಫೋಟೋವನ್ನು ಹಾಕಿ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇದರ ವಿಡಿಯೋ ಇಲ್ಲಿದೆ.

Viral Video: ಸೀರೆಯುಟ್ಟು ಕಂಗೊಳಿಸುತ್ತಿರುವ ಜಪಾನೀಸ್ ಐಶ್ವರ್ಯ ರೈ; ವೈರಲ್ ವಿಡಿಯೋ ಇಲ್ಲಿದೆ
ವೈರಲ್ ಆಗುತ್ತಿರುವ ಜಪಾನ್ ಮಹಿಳೆ
TV9kannada Web Team

| Edited By: Rakesh Nayak

Jul 24, 2022 | 4:05 PM

ಭಾರತದ ಸಂಸ್ಕೃತಿಯನ್ನು ವಿದೇಶಿಗರಿಗೆ ಬಲು ಇಷ್ಟ. ಕೇವಲ ಸಂಸ್ಕೃತಿ ಮಾತ್ರವಲ್ಲ ಕಲೆ ಮತ್ತು ಚಲನಚಿತ್ರಗಳನ್ನು ಕೂಡ ಇಷ್ಟಪಡುತ್ತಾರೆ. ಏಕೆಂದರೆ ಇವುಗಳೆಲ್ಲಾ ಅದ್ಭುತವಾಗಿದ್ದು, ಅಷ್ಟೇ ಆಕರ್ಷಕವಾಗಿರುತ್ತದೆ. ಅದಾಗ್ಯೂ ಕೆಲವರು  ನಮ್ಮ ಚಲನಚಿತ್ರಗಳು ಮತ್ತು ನಟ-ನಟಿಯರ ಸಂಭಾಷಣೆಗಳನ್ನು ಮೆಚ್ಚಿಕೊಳ್ಳುತ್ತಾರೆ. ಇದೀಗ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಐಕಾನಿಕ್ ಡೈಲಾಗ್‌ಗಳಲ್ಲಿ ಒಂದನ್ನು ಜಪಾನಿನ ಮಹಿಳೆಯೊಬ್ಬರು ಡಬ್ ಮಾಡಿದ್ದಾರೆ. ವಿಡಿಯೋದಲ್ಲಿ ಆಕೆ ಸೀರೆಯುಟ್ಟು ಬಾಲಿವುಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೈರಲ್ ವಿಡಿಯೋ (Viral Video) ನೋಡಿದರೆ ನೀವು ಜಪಾನ್ ಮಹಿಳೆಯನ್ನು ಮೆಚ್ಚಿಕೊಳ್ಳುವ ಸಾಧ್ಯತೆ ಇದೆ.

ವೈರಲ್ ವಿಡಿಯೋದಲ್ಲಿ ಇರುವಂತೆ, ಐಶ್ವರ್ಯ ರೈ ಅವರ ಹಿಂದಿ ಚಲನಚಿತ್ರಗಳ ಐಕಾನಿಕ್ ಡೈಲಾಗ್‌ಗಳಲ್ಲಿ ಒಂದನ್ನು ಜಪಾನ್ ಮಹಿಳೆ ಸಂಭಾಷಣೆ ಮಾಡುತ್ತಾಳೆ. ನಂತರ ಆಕೆ ಬಾಲಿವುಡ್ ರೇಂಜ್​ನಲ್ಲಿ ಸೀರೆಯನ್ನು ಉಟ್ಟ ಫೋಟೋ ಸೇರಿದಂತೆ ಸಾರಿ ತೊಟ್ಟು ವಿವಿಧ ಲುಕ್​ನಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಕೂಡ ವಿಡಿಯೋದಲ್ಲಿ ಎಡಿಟ್ ಮಾಡಲಾಗಿದೆ. ಈ ವಿಡಿಯೋಗೆ ಭರ್ ಸೋರೆ ಮೇಘ ಮೇಘ ಹಾಡಿನ ಮ್ಯೂಸಿಕ್ ಅನ್ನು ಹಾಕಲಾಗಿದೆ.

ಸೀರೆಯುಟ್ಟು ಕಂಗೊಳಿಸುತ್ತಿರುವ ಜಪಾನ್ ಮಹಿಳೆಯೇ ಈ ವಿಡಿಯೋವನ್ನು ತನ್ನ mayojapan ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಸೀರೆಯು ಮಹಿಳೆಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ!!! ನೀವು ಒಪ್ಪುವುದಿಲ್ಲವೇ?” ಎಂದು ಶೀರ್ಷಿಕೆ ಬರೆದಿದ್ದಾರೆ. ಇವರ ಇನ್ಸ್ಟಾಗ್ರಾಮ್ ಖಾತೆಯ ಬಯೋದಲ್ಲಿ ತಾನು ಹಿಂದಿಯಲ್ಲಿ ಪದವಿ ಪಡೆದಿದ್ದಾಗಿ ಬರೆದುಕೊಂಡಿದ್ದಾರೆ. ಅಲ್ಲದೆ ಇವರು 1.13 ಲಕ್ಷಕ್ಕೂ ಹೆಚ್ಚು ಫಾಲೋವರ್​ಗಳನ್ನು ಹೊಂದಿದ್ದಾರೆ.

View this post on Instagram

A post shared by Mayo Japan (@mayojapan)

ಈ ವಿಡಿಯೋವನ್ನು ಜುಲೈ 14 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ನಂತರ 2.54 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರೊಬ್ಬರು, “ನೀವು ಐವರಿ ಕಲರ್ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಿರಿ” ಎಂದು ಹೊಗಳಿದ್ದಾರೆ. ಇನ್ನೊಬ್ಬ ಬಳಕೆದಾರ ಕಾಮೆಂಟ್ ಮಾಡಿ, “ಮೇಯೊ ಯಾವಾಗಲೂ ಬಹುಕಾಂತೀಯವಾಗಿ ಕಾಣುತ್ತಾಳೆ” ಎಂದು ಹೇಳಿದ್ದಾರೆ. ಮಗದೊಬ್ಬರು ಕಾಮೆಂಟ್ ಮಾಡಿ, “Oyy hoyyy ನಮ್ಮ ಜಪಾನೀಸ್ ಐಶ್ವರ್ಯಾ… ಮೇಯೊ” ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada