ಅಮ್ಮ ಎಂದರೆ ಉಕ್ಕುವ ವಾತ್ಸಲ್ಯ. ಪ್ರತೀ ತಾಯಿಯೂ ತನ್ನ ಮಕ್ಕಳಿಗೋಸ್ಕರ ತೋರುವ ಕಾಳಜಿ, ಪ್ರೀತಿ ಅಮಿತವಾದುದು, ನಿಸ್ಸ್ವಾರ್ಥವಾದುದು. ಅದು ಮನುಷ್ಯರಲ್ಲಾಗಿರಲಿ ಅಥವಾ ಪ್ರಾಣಿಯಲ್ಲಾಗಿರಲಿ. ಮಕ್ಕಳ ವಿಚಾರದಲ್ಲಿ ತಾಯಿ ಏನು ಬೇಕಾದರೂ ಮಾಡುತ್ತಾಳೆ. ತನ್ನ ಶಕ್ತಿ ಮೀರಿ ಹೋರಾಡುತ್ತಾಳೆ.ತನ್ನ ಮಕ್ಕಳನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಡಬೇಕಾದರೂ ತಾಯಿ ಹಿಂದೆ ಸರಿಯುವುದಿಲ್ಲ. ಇದೇ ರೀತಿಯ ಘಟನೆಯೊಂದು ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಕ್ಷಣ ನಿಮ್ಮ ಮನಸ್ಸು ಭಾರವಾಗುವುದಂತೂ ಖಂಡಿತಾ.
ಹೆಬ್ಬಾವಿನಿಂದ ತನ್ನ ಮಗುವನ್ನು ರಕ್ಷಿಸಲು ಹೆಣ್ಣು ಕಾಂಗರೂ ತನ್ನ ಪ್ರಾಣವನ್ನೂ ಲೆಕ್ಕಿಸದೇ ಹೆಬ್ಬಾವಿನೊಂದಿಗೆ ಕಾದಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಹೆಬ್ಬಾವು ಕಾಂಗರೂ ಮರಿಯನ್ನು ಸುತ್ತುಕೊಂಡಿರುವುದನ್ನು ಕಾಣಬಹುದು. ಹೆಬ್ಬಾವಿನಿಂದ ಬಿಡಿಸಿಕೊಳ್ಳಲಾಗದೆ ಮರಿ ಜೀವನ್ಮರಣ ಹೋರಾಟ ನಡೆಸುತ್ತಿರುವಾಗ ತಾಯಿ ತನ್ನ ಮಗುವನ್ನು ರಕ್ಷಿಸಲು ಹೆಬ್ಬಾವಿನ ಮೇಲೆ ದಾಳಿ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಡೋಲೋ 650 ಶಶಿರೇಖಾ ಈಗ ಸಿನಿಮಾ ಹೀರೋಯಿನ್; ವಿಡಿಯೋ ವೈರಲ್
ಈ ವಿಡಿಯೋವನ್ನು @wildanimal9030 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಈಗಾಗಲೇ ಸಾಕಷ್ಟು ನೆಟ್ಟಿಗರನ್ನು ತಲುಪಿದೆ. ‘ಆ ಮುಗ್ಧ ಕಾಂಗರೂಗೆ ಸಹಾಯ ಮಾಡಲು ಬದಲು ವಿಡಿಯೋ ಮಾಡುವುದರಲ್ಲೇ ಮಗ್ನನಾಗಿದಿರಲ್ಲ’ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ. ಸದಗಯ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Thu, 25 January 24