Viral Video: ಪೊಲೀಸ್ ಠಾಣೆಯಲ್ಲಿ ಜಾನಪದ ಗೀತೆ ಹಾಡಿದ ಬಾಲಕನ ವಿಡಿಯೋ ವೈರಲ್

| Updated By: Rakesh Nayak Manchi

Updated on: Jul 29, 2022 | 3:15 PM

ಕೇರಳದ ಪೊಲೀಸ್ ಠಾಣೆಯೊಂದರಲ್ಲಿ ಬಾಲಕನೊಬ್ಬ ಮಲಯಾಳಂ ಜಾನಪದ ಗೀತೆ ಹಾಡುವ ಮೂಲಕ ಇಂಟರ್ನೆಟ್​ನಲ್ಲಿ ಭಾರೀ ವೈರಲ್ ಆಗುತ್ತಿದ್ದಾನೆ. ಬಾಲಕನ ಹಾಡಿಗೆ ಮನಸೋತ ಪೊಲೀಸರು ಸಖತ್ ಎಂಜಾಯ್ ಮಾಡಿದ್ದಾರೆ.

Viral Video: ಪೊಲೀಸ್ ಠಾಣೆಯಲ್ಲಿ ಜಾನಪದ ಗೀತೆ ಹಾಡಿದ ಬಾಲಕನ ವಿಡಿಯೋ ವೈರಲ್
ಪೊಲೀಸ್ ಠಾಣೆಯಲ್ಲಿ ಜಾನಪದ ಗೀತೆ ಹಾಡಿದ ಬಾಲಕ
Follow us on

ಬಾಲಕನೊಬ್ಬ ಜಾನಪದ ಗೀತೆಯನ್ನು ಹಾಡಿ ಭಾರೀ ಸುದ್ದಿಯಾಗಿದ್ದಾನೆ. ಅಷ್ಟಕ್ಕೂ ಆತ ಜಾನಪದ ಗೀತೆ ಹಾಡಿದ್ದು ಅಪರಾಧಗಳನ್ನು ನಿಗ್ರಹಿಸಲು ಮತ್ತು ಅಪರಾಧಿಗಳನ್ನು ದಂಡಿಸಲು ಇರುವ ಪೊಲೀಸ್ ಠಾಣೆಯಲ್ಲಿ. ಕೇರಳದ ಪಾಲಕ್ಕಾಡ್ ನಾಟುಕಲ್ ಪೊಲೀಸ್ ಠಾಣೆಯಲ್ಲಿ ಬಾಲಕನೊಬ್ಬ ಮಲಯಾಳಂ ಜಾನಪದ ಗೀತೆಯನ್ನು ಹಾಡಿ ಗಮನಸೆಳೆದಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ಜಾನಪದ ಗೀತೆಯನ್ನು ಬಾಲಕ ಬಹಳ ಉತ್ಸಾಹದಿಂದ ಹಾಡುವುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತದೆ.

ವಿಡಿಯೋದಲ್ಲಿ ಕಾಣುವಂತೆ, ಪೊಲೀಸ್ ಸಿಬ್ಬಂದಿಯೊಬ್ಬರು ಬಾಲಕನನ್ನು ಕುರ್ಚಿಯಲ್ಲಿ ಕೂರಿಸಿ ಜಾನಪದ ಗೀತೆ ಹಾಡಿಸುತ್ತಾರೆ. ಈ ವೇಳೆ ಬಾಲಕ ಬಹಳ ಉತ್ಸಾಹದಿಂದ ಮಲಯಾಳಂ ಜಾನಪದ ಹಾಡನ್ನು ಹಾಡಲು ಪ್ರಾರಂಭಿಸುತ್ತಾನೆ. ಇದೇ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಮತ್ತೊಂದು ಕುರ್ಚಿಯನ್ನು ಬಾಲಕನ ಮುಂದೆ ತಂದಿಟ್ಟಾಗ ಆತ ಕುರ್ಚಿಯನ್ನು ಬಾರಿಸಿಕೊಂಡು ಹಾಡು ಹಾಡುತ್ತಾನೆ. ಬಾಲಕನ ಹಾಡಿಗೆ ಮನಸೋತ ಪೊಲೀಸರು ಖುಷಿ ಪಡುತ್ತಿರುವುದು ಕಂಡುಬಂದಿದೆ.

ಇದರ ವಿಡಿಯೋವನ್ನು ಕೇರಳ ಪೊಲೀಸರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಜಾಕಿರ್ ಭಾಯ್ ಪೊಲೀಸ್ ಠಾಣೆಗೆ ಪ್ರವೇಶಿಸಿ ಹಾಡನ್ನು ಹಾಡಬಹುದೇ? ಪಾಲಕ್ಕಾಡ್ ನಟ್ಟುಕಲ್ ಪೊಲೀಸ್ ಠಾಣೆಯಲ್ಲಿ ನೋಡಿದ್ದೇವೆ” ಎಂದು ಮಲಯಾಳಂನಲ್ಲಿ ಶೀರ್ಷಿಕೆಯನ್ನು ಬರೆಯಲಾಗಿದೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ ಸುಮಾರು 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಲೈಕ್​ಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ಕೂಡ ಬಾಲಕನ ಹಾಡನ್ನು ಕೇಳುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಈ ಸನ್ನಿವೇಶವನ್ನು ಆಕ್ಷನ್ ಹೀರೋ ಬಿಜು ಚಿತ್ರದ ದೃಶ್ಯಕ್ಕೆ ಹೋಲಿಸಿದ್ದಾರೆ.