ವೈರಲ್ ವಿಡಿಯೋ: ತೆರೆದ ಬಾಯಿಯೊಳಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರಕ್ಷಣೆ ವೇಳೆ ಗಾಬರಿಯಿಂದಲೋ ಅಥವಾ ಕೋಪದಿಂದಲೋ ಏನೋ ಭಾರಿ ಶಬ್ದದ ಮೂಲಕ ಚಿರತೆ ಕೂಗಾಡಿದೆ. ಇದರ ವಿಡಿಯೋವನ್ನುಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಶೀರ್ಷಿಕೆಯಲ್ಲಿ ಜನರಿಗೆ ಎಚ್ಚರಿಕೆಯ ಮನವಿಯನ್ನು ಮಾಡಿದ್ದಾರೆ.
ಇದನ್ನೂ ಓದಿ: Viral Video: ನೀವು ಇದುವರೆಗೆ ನೋಡಿರದಂಥ ವಿಭಿನ್ನ ಸ್ಕೂಟರ್ ಇಲ್ಲಿದೆ ನೋಡಿ, ವಿಡಿಯೋ ವೈರಲ್
ವಿಡಿಯೋ ಹಂಚಿಕೊಳ್ಳುವ ವೇಳೆ ಸುಸಂತ ನಂದಾ ಅವರು ತೆರೆದ ಬಾವಿಗಳನ್ನು ಮುಚ್ಚುವಂತೆ ಸೂಚಿಸಿದ್ದಾರೆ. “ಕಾಡು ಪ್ರಾಣಿಗಳಿಗೆ ಇಂತಹ ಆಘಾತವನ್ನು ತಪ್ಪಿಸಲು ದಯವಿಟ್ಟು ತೆರೆದ ಬಾವಿಗಳನ್ನು ಮುಚ್ಚಿ” ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಗಮನಿಸಿದಂತೆ, ತೆರೆದ ಬಾವಿಗೆ ಬೋನ್ ಅನ್ನು ಹಗ್ಗದ ಸಹಾಯದಿಂದ ಇಳಿಸಲಾಗಿದೆ. ಆ ಬೋನಿನೊಳಗೆ ಗಂಡು ಚಿರತೆ ಸೇರಿಕೊಂಡ ನಂತರ ಜಾಗರೂಕತೆಯಿಂದ ಮೇಲೆತ್ತಲಾಗಿದೆ. ಈ ವೇಳೆ ಚಿರತೆ ಚೀರಾಡುವುದನ್ನು ನೋಡಬಹುದು.
Forest staff rescuing a male leopard from an open well in Maharashtra. Please cover open wells to avoid such trauma for the wild animals. Spread the ward ?? pic.twitter.com/JTFE4JlYIe
— Susanta Nanda IFS (@susantananda3) June 18, 2022
ಭಾನುವಾರ ಹಂಚಿಕೊಂಡ ವಿಡಿಯೋ ಟ್ವಿಟರ್‌ನಲ್ಲಿ 13,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಚಿರತೆಯನ್ನು ರಕ್ಷಿಸಿದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಹಲವು ನೆಟ್ಟಿಗರು ಶ್ಲಾಘಿಸಿದ್ದಾರೆ. ”ಅರಣ್ಯ ಇಲಾಖೆ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ವಂದನೆಗಳು. ತೆರೆದ ಬಾವಿಗಳನ್ನು ಮುಚ್ಚುವ ಅಥವಾ ಬೇಲಿ ಹಾಕುವ ಬಗ್ಗೆ ನಾವು ಜನರಿಗೆ ತಿಳುವಳಿಕೆ ನೀಡಲು ಪ್ರಾರಂಭಿಸಬೇಕು” ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:Viral Video: ಸುರಿದ ಧಾರಾಕಾರ ಮಳೆಗೆ ರಸ್ತೆಗೆ ಬಂದ ಮೀನುಗಳು! ಎಲ್ಲಿ ಇದು ಗೊತ್ತಾ?
ರಾಜ್ಯದ ಶೇ.90 ರಷ್ಟು ರೈತರು ಬಾವಿಗಳನ್ನು ಮುಚ್ಚಲು ಶಕ್ತರಾಗಿಲ್ಲ ಎಂದು ಬಳಕೆದಾರರು ಹೇಳಿದರು. “ಮಹಾರಾಷ್ಟ್ರದಲ್ಲಿ 90% ರೈತರು ಕನಿಷ್ಠ ಆದಾಯದಿಂದ ತಮ್ಮನ್ನು ತಾವು ಪೋಷಿಸಲು ಸಾಧ್ಯವಾಗುತ್ತಿಲ್ಲ. ಅವರು ತೆರೆದ ಬಾವಿಗಳನ್ನು ಮುಚ್ಚಲು ಹೇಗೆ ಖರ್ಚು ಮಾಡುತ್ತಾರೆ? ಬಾವಿಗಳನ್ನು ಮುಚ್ಚಲು ಸರ್ಕಾರವು ಸಬ್ಸಿಡಿಯನ್ನು ವಿಸ್ತರಿಸಬೇಕು”ಎಂದು ಬರೆದಿದ್ದಾರೆ.
ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ