ನವದೆಹಲಿ: ಕಾಡಿನಲ್ಲಿ ರಾಜನಂತೆ ಓಡಾಡಿಕೊಂಡಿರುವ ಚಿರತೆಗೆ ಶಾಲೆಗ ಹೋಗುವ ಮನಸಾಗಿತ್ತು. ಹೀಗಾಗಿ, ಸೀದಾ ಕ್ಲಾಸ್ ರೂಮಿನೊಳಗೆ ಹೋದ ಚಿರತೆ ಅಲ್ಲಿದ್ದ ವಿದ್ಯಾರ್ಥಿಯನ್ನು ನೋಡಿ ಕೋಪಗೊಂಡು ಆತನ ಮೇಲೆ ದಾಳಿ ನಡೆಸಿದೆ. ಇದೇನಪ್ಪಾ ವಿಚಿತ್ರ ಕತೆ ಎಂದು ಆಶ್ಚರ್ಯ ಪಡುತ್ತಿದ್ದೀರಾ? ಈ ರೀತಿಯ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಲಿಗಢದಲ್ಲಿ. ಅಲಿಗಢದ ಶಾಲೆಯೊಂದಕ್ಕೆ ಏಕಾಏಕಿ ನುಗ್ಗಿದ ಚಿರತೆಯೊಂದು ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಚಿರತೆ ಶಾಲೆಯೊಳಗೆ ನುಗ್ಗಿದ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿಯನ್ನು ಬಚಾವ್ ಮಾಡಿದ ಶಾಲಾ ಸಿಬ್ಬಂದಿ ಆ ಕ್ಲಾಸ್ ರೂಂಗೆ ಬೀಗ ಹಾಕಿದ್ದಾರೆ. ಅಲಿಗಢ್‌ನ ಚೌಧರಿ ನಿಹಾಲ್ ಸಿಂಗ್ ಇಂಟರ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಚಿರತೆಯನ್ನು ಕೊಂಡೊಯ್ಯಲು ಅರಣ್ಯಾಧಿಕಾರಿಗಳಿಗಾಗಿ ಶಾಲಾ ಸಿಬ್ಬಂದಿ ಕಾಯುತ್ತಿದ್ದಾಗ ಶಾಲೆಯ ಹೊರಗೆ ಜನಜಂಗುಳಿಯಿಂದ ಭಾರೀ ಗದ್ದಲ ಉಂಟಾಯಿತು.
ನಾನು ತರಗತಿಯಲ್ಲಿ ಕೂತಿದ್ದಾಗ ಅಲ್ಲಿ ಚಿರತೆ ಬಂದಿತು. ನಾನು ಹೆದರಿ ಎದ್ದು ನಿಂತ ಕೂಡಲೆ ಚಿರತೆ ನನ್ನ ಮೇಲೆ ದಾಳಿ ಮಾಡಿ ಕೈ ಮತ್ತು ಬೆನ್ನಿಗೆ ಕಚ್ಚಿತು ಎಂದು ಚಿರತೆಯಿಂದ ಹಲ್ಲೆಗೊಳಗಾದ ವಿದ್ಯಾರ್ಥಿ ಲಕ್ಕಿ ರಾಜ್ ಸಿಂಗ್ ಹೇಳಿದ್ದಾನೆ. ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.
ನಿನ್ನೆ ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಂತೆ ಚಿರತೆಯೊಂದು ಕ್ಯಾಂಪಸ್‌ಗೆ ನುಗ್ಗಿದೆ. ವಿದ್ಯಾರ್ಥಿಯ ಮೇಲೆ ಚಿರತೆ ದಾಳಿ ಮಾಡಿದೆ. ಗಾಯಗೊಂಡ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಈಗ ಅವನು ಮನೆಯಲ್ಲಿದ್ದು, ಆರೋಗ್ಯವಾಗಿದ್ದಾನೆ ಎಂದು ಚೌಧರಿ ನಿಹಾಲ್ ಸಿಂಗ್ ಇಂಟರ್ ಕಾಲೇಜ್ ಪ್ರಾಂಶುಪಾಲರಾದ ಯೋಗೇಶ್ ಯಾದವ್ ತಿಳಿಸಿದ್ದಾರೆ
ಇದನ್ನೂ ಓದಿ: ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ವಾಕಿಂಗ್ ಸ್ಟಿಕ್ನೊಂದಿಗೆ ಹೋರಾಡಿದ ಮಹಿಳೆ; ಭಯಾನಕ ದೃಶ್ಯವಿದು
TikTok: ಪ್ಲಾಸ್ಟಿಕ್ ಸರ್ಜರಿ ಮಾಡುವುದನ್ನು ಬಿಟ್ಟು ಟಿಕ್ಟಾಕ್ ವಿಡಿಯೋ ಮಾಡಿದ ಡಾಕ್ಟರ್; ಆಮೇಲೇನಾಯ್ತು?