Viral Video: ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು; ವೈರಲ್ ಆದ ಈ ವಿಡಿಯೋ ನೋಡಿ
ಟ್ವಿಟರ್‌ನಲ್ಲಿ ಹಂಚಿಕೊಂಡ 22 ಸೆಕೆಂಡುಗಳ ಈ ವಿಡಿಯೋದಲ್ಲಿ ಕಪ್ಪು ಮೇಕೆಯನ್ನು ಅಟ್ಟಾಡಿಸಿ ಓಡುತ್ತಿದ್ದಾರೆ. ಹೀಗೆ ಹಿಂಬಾಲಿಸುವಾಗ ಅರೇ ಕಾಗದ ನೀಡು ಎಂದು ಹೇಳುತ್ತಿರುವುದು ರೆಕಾರ್ಡ್ ಆಗಿದೆ. ಮೇಕೆ ವೇಗವಾಗಿ ಓಡುತ್ತಿದ್ದರಿಂದ ಸ್ವಲ್ಪ ಹೊತ್ತು ಈ ಪ್ರಕ್ರಿಯೆ ಮುಂದುವರಿದಿದೆ.

ಸರ್ಕಾರಿ ನೌಕರನೊಬ್ಬ ತನ್ನ ಕಾಗದಗಳನ್ನು ತೆಗೆದುಕೊಂಡು ಹೋದ ಮೇಕೆಯನ್ನು ಅಟ್ಟಿಸಿಕೊಂಡು ಹೋಗುತ್ತಿರುವ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋ ಇದೀಗ ಸಾವಿರಾರು ವ್ಯೂವ್ಸ್ ಮತ್ತು ರಿಪೋಸ್ಟ್ನೊಂದಿಗೆ ವೈರಲ್ ಆಗಿದೆ. ಉತ್ತರ ಪ್ರದೇಶದ ಕಾನ್ಪುರದ ಸರ್ಕಾರಿ ಕಚೇರಿಯೊಂದರಲ್ಲಿ ಈ ಘಟನೆ ನಡೆದಿದ್ದು, ಕೆಲವು ಸರ್ಕಾರಿ ನೌಕರರು ಕಚೇರಿಯ ಹೊರಗೆ ಕುಳಿತು ಬಿಸಿಲಿಗೆ ನಿಂತಿದ್ದರು. ಅಷ್ಟರಲ್ಲಿ ಕಪ್ಪು ಬಣ್ಣದ ಮೇಕೆಯೊಂದು ಕಚೇರಿಯ ಒಳಗೆ ಪ್ರವೇಶಿಸಿ ಮೇಜಿನ ಮೇಲಿದ್ದ ಕಾಗದದ ಕಡತವನ್ನು ಬಾಯಲ್ಲಿಟ್ಟುಕೊಂಡು ಓಡಿ ಹೋಗಿದೆ. ಕಚೇರಿಯ ಉದ್ಯೋಗಿಗಳು ಮೊದಲು ಈ ಬಗ್ಗೆ ಗಮನ ಹರಿಸಿರಲಿಲ್ಲ, ಕೊನೆಗೆ ಮೇಕೆ ಕಾಗದದ ಪ್ರತಿಯೊಂದಿಗೆ ಓಡಿಹೋಗಿ ಅದನ್ನು ತಿನ್ನುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಮೇಕೆ ಬೆನ್ನಟ್ಟಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ವಿಟರ್‌ನಲ್ಲಿ ಹಂಚಿಕೊಂಡ 22 ಸೆಕೆಂಡುಗಳ ಈ ವಿಡಿಯೋದಲ್ಲಿ ಕಪ್ಪು ಮೇಕೆಯನ್ನು ಅಟ್ಟಾಡಿಸಿ ಓಡುತ್ತಿದ್ದಾರೆ. ಹೀಗೆ ಹಿಂಬಾಲಿಸುವಾಗ ಅರೇ ಕಾಗದ ನೀಡು ಎಂದು ಹೇಳುತ್ತಿರುವುದು ರೆಕಾರ್ಡ್ ಆಗಿದೆ. ಮೇಕೆ ವೇಗವಾಗಿ ಓಡುತ್ತಿದ್ದರಿಂದ ಸ್ವಲ್ಪ ಹೊತ್ತು ಈ ಪ್ರಕ್ರಿಯೆ ಮುಂದುವರಿದಿದೆ. ವಿಡಿಯೋದ ಕೊನೆಯಲ್ಲಿ ಕಚೇರಿ ನೌಕರ ದೂರದಲ್ಲಿ ಮೇಕೆ ಹಿಂದೆ ಓಡುತ್ತಿರುವುದನ್ನು ಕಾಣಬಹುದು. ಅಂತಿಮವಾಗಿ ಮೇಕೆ ಬಾಯಿಂದ ಕಾಗದ ಪಡೆಯುವಲ್ಲಿ ನೌಕರ ಯಶಸ್ವಿಯಾದರು. ಆದರೆ ಅದಾಗಲೇ ಮೇಕೆ ಅರ್ಧ ಕಾಗದ ತಿಂದು ಮುಗಿಸಿತ್ತು.
ऐसा भी होता हैं। ब्लॉक ऑफिस : #कानपुर में कर्मचारी बाहर धूप सेंकते रहे, फाइल लेकर भागा बकरा #UttarPradesh #Kanpur #ViralVideo pic.twitter.com/dPaglplIfi
— Urdu Safar (@UrduSafar1) December 2, 2021
ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ. ನೌಕರರ ನಿರ್ಲಕ್ಷ್ಯದ ಬಗ್ಗೆ ಕೆಲವರು ಪ್ರತಿಕ್ರಿಯಿಸಿದ್ದು, ಮತ್ತೆ ಕೆಲವರು ಮೇಕೆಯ ಓಡಾಡುವಿಕೆ ಕಂಡು ನಗುವ ಎಮೋಜಿ ಜತೆ ಕಮೆಂಟ್ ಮಾಡಿದ್ದಾರೆ. ಒಟ್ಟಾರೆ ನೆಟ್ಟಿಗರು ಈ ವಿಡಿಯೋ ಕಂಡು ಸಖತ್ ಎಂಜಾಯ್ ಮಾಡಿದ್ದಾರೆ.
ಇದನ್ನೂ ಓದಿ:
Viral Video: ಸಲೂನ್ಗೆ ಬಂದ ಕೋತಿ ಟ್ರಿಮ್ಮರ್ಗೆ ಮುಖವೊಡ್ಡಿದ ವೈರಲ್ ವಿಡಿಯೋ ನೋಡಿ
Published On - 9:56 am, Fri, 3 December 21