Viral Video: ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

Shocking Video: ಅಲಿಗಢದ ಶಾಲೆಯೊಂದಕ್ಕೆ ಏಕಾಏಕಿ ನುಗ್ಗಿದ ಚಿರತೆಯೊಂದು ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

Viral Video: ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ
ಶಾಲೆಯೊಳಗೆ ನುಗ್ಗಿದ ಚಿರತೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 02, 2021 | 1:58 PM

ನವದೆಹಲಿ: ಕಾಡಿನಲ್ಲಿ ರಾಜನಂತೆ ಓಡಾಡಿಕೊಂಡಿರುವ ಚಿರತೆಗೆ ಶಾಲೆಗ ಹೋಗುವ ಮನಸಾಗಿತ್ತು. ಹೀಗಾಗಿ, ಸೀದಾ ಕ್ಲಾಸ್​ ರೂಮಿನೊಳಗೆ ಹೋದ ಚಿರತೆ ಅಲ್ಲಿದ್ದ ವಿದ್ಯಾರ್ಥಿಯನ್ನು ನೋಡಿ ಕೋಪಗೊಂಡು ಆತನ ಮೇಲೆ ದಾಳಿ ನಡೆಸಿದೆ. ಇದೇನಪ್ಪಾ ವಿಚಿತ್ರ ಕತೆ ಎಂದು ಆಶ್ಚರ್ಯ ಪಡುತ್ತಿದ್ದೀರಾ? ಈ ರೀತಿಯ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಲಿಗಢದಲ್ಲಿ. ಅಲಿಗಢದ ಶಾಲೆಯೊಂದಕ್ಕೆ ಏಕಾಏಕಿ ನುಗ್ಗಿದ ಚಿರತೆಯೊಂದು ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

ಚಿರತೆ ಶಾಲೆಯೊಳಗೆ ನುಗ್ಗಿದ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿಯನ್ನು ಬಚಾವ್ ಮಾಡಿದ ಶಾಲಾ ಸಿಬ್ಬಂದಿ ಆ ಕ್ಲಾಸ್​ ರೂಂಗೆ ಬೀಗ ಹಾಕಿದ್ದಾರೆ. ಅಲಿಗಢ್‌ನ ಚೌಧರಿ ನಿಹಾಲ್ ಸಿಂಗ್ ಇಂಟರ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಚಿರತೆಯನ್ನು ಕೊಂಡೊಯ್ಯಲು ಅರಣ್ಯಾಧಿಕಾರಿಗಳಿಗಾಗಿ ಶಾಲಾ ಸಿಬ್ಬಂದಿ ಕಾಯುತ್ತಿದ್ದಾಗ ಶಾಲೆಯ ಹೊರಗೆ ಜನಜಂಗುಳಿಯಿಂದ ಭಾರೀ ಗದ್ದಲ ಉಂಟಾಯಿತು.

ನಾನು ತರಗತಿಯಲ್ಲಿ ಕೂತಿದ್ದಾಗ ಅಲ್ಲಿ ಚಿರತೆ ಬಂದಿತು. ನಾನು ಹೆದರಿ ಎದ್ದು ನಿಂತ ಕೂಡಲೆ ಚಿರತೆ ನನ್ನ ಮೇಲೆ ದಾಳಿ ಮಾಡಿ ಕೈ ಮತ್ತು ಬೆನ್ನಿಗೆ ಕಚ್ಚಿತು ಎಂದು ಚಿರತೆಯಿಂದ ಹಲ್ಲೆಗೊಳಗಾದ ವಿದ್ಯಾರ್ಥಿ ಲಕ್ಕಿ ರಾಜ್ ಸಿಂಗ್ ಹೇಳಿದ್ದಾನೆ. ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.

ನಿನ್ನೆ ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಂತೆ ಚಿರತೆಯೊಂದು ಕ್ಯಾಂಪಸ್‌ಗೆ ನುಗ್ಗಿದೆ. ವಿದ್ಯಾರ್ಥಿಯ ಮೇಲೆ ಚಿರತೆ ದಾಳಿ ಮಾಡಿದೆ. ಗಾಯಗೊಂಡ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಈಗ ಅವನು ಮನೆಯಲ್ಲಿದ್ದು, ಆರೋಗ್ಯವಾಗಿದ್ದಾನೆ ಎಂದು ಚೌಧರಿ ನಿಹಾಲ್ ಸಿಂಗ್ ಇಂಟರ್ ಕಾಲೇಜ್ ಪ್ರಾಂಶುಪಾಲರಾದ ಯೋಗೇಶ್ ಯಾದವ್ ತಿಳಿಸಿದ್ದಾರೆ

ಇದನ್ನೂ ಓದಿ: ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ವಾಕಿಂಗ್ ಸ್ಟಿಕ್​​ನೊಂದಿಗೆ ಹೋರಾಡಿದ ಮಹಿಳೆ; ಭಯಾನಕ ದೃಶ್ಯವಿದು

TikTok: ಪ್ಲಾಸ್ಟಿಕ್ ಸರ್ಜರಿ ಮಾಡುವುದನ್ನು ಬಿಟ್ಟು ಟಿಕ್​ಟಾಕ್ ವಿಡಿಯೋ ಮಾಡಿದ ಡಾಕ್ಟರ್​; ಆಮೇಲೇನಾಯ್ತು?

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ