ಮಳೆಗಾಲದಲ್ಲಿ ಮರದಡಿ ನಿಲ್ಲುವುದು ಡೇಂಜರ್, ಒಂದೊಮ್ಮೆ ಸಿಡಿಲು (lightning) ಬಡಿಯಿತು ಎಂದರೆ ಸಾಕು ಜೀವ ಉಳಿಯುವುದೇ ಡೌಟ್. ಸಿಡಿಲ ಬಡಿತದ ಶಬ್ದಕ್ಕೆ ಶೇ 10ರಷ್ಟು ಜನರು ಸಾಮಾನ್ಯವಾಗಿ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಗುಡುಗು-ಸಿಡಿಲು ಸಹಿತ ಮಳೆಯ ಸಮಯದಲ್ಲಿ ಮರಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಸಿಡಿಲಿನ ಬಡಿತಕ್ಕೆ ಜೀವ ಕಳೆದುಕೊಳ್ಳಬೇಕಾದಿತು. ಈ ವಿಚಾರ ಯಾಕೆ ಹೇಳುತ್ತೇವೆ ಎಂದರೆ ಬೃಹತ್ ಮರವೊಂದಕ್ಕೆ ಭಾರಿ ಶಬ್ಧದ ಮೂಲಕ ಮಿಂಚು ಬಂದು ಹೊಡೆದಿರುವ ವಿಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಈ ವಿಡಿಯೊ ವೀಕ್ಷಿಸುವಾಗ ಮೈ ಝುಂ ಎನಿಸುತ್ತದೆ.
ವಂಡರ್ ಆಫ್ ಸೈನ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪ್ನಲ್ಲಿ, ಮರಕ್ಕೆ ಸಿಡಲು ಹೊಡೆಯುವುದನ್ನು ಕಾಣಬಹುದು. ‘ಚಂಡಮಾರುತದ ಸಮಯದಲ್ಲಿ ನೀವು ಎಂದಿಗೂ ಮರದ ಕೆಳಗೆ ನಿಲ್ಲಬಾರದು’ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೊಗೆ ಸುಮಾರು 30,000 ವೀವ್ಸ್ ಮತ್ತು ಸಾವಿರಾರು ಲೈಕ್ಸ್ ಸಿಕ್ಕಿದೆ.
ಇದನ್ನೂ ಓದಿ: Viral Photo: ಈ ಜಿಲ್ಲಾಧಿಕಾರಿಯ 10ನೇ ತರಗತಿ ಅಂಕಪಟ್ಟಿ ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ
This is why you should never stand under a tree during a storm.
Credit: tomasgesu/TikTokpic.twitter.com/cf1VBIp9Gq
— Wonder of Science (@wonderofscience) June 13, 2022
ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, “ಆ ಮರದಲ್ಲಿ ಮತ್ತೆ ಎಲೆಗಳು ಬೆಳೆಯುವುದಿಲ್ಲ” ಎಂದು ಹೇಳಿದ್ದಾರೆ. ಮತ್ತೊಬ್ಬರು, “ಚಂಡಮಾರುತದ ಸಮಯದಲ್ಲಿ ಇರುವ ಅತ್ಯಂತ ಅಪಾಯಕಾರಿಯಾದ ಸ್ಥಳ ಮರ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video : ಪಸೂರಿ; ಹಾಡನ್ನು ಅಡುಗೆ ಮನೆಯಲ್ಲಿ ಅದ್ಭುತವಾಗಿ ಹಾಡಿದ ಯುವತಿ!
ಸಿಡಿಲಿನ ಅಪಾಯ ಎಷ್ಟರಮಟ್ಟಿಗೆ ಇದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಮತ್ತೊಂದು ಆಘಾತಕಾರಿ ಘಟನೆಯೆಂದರೆ, ಯುನೈಟೆಡ್ ಸ್ಟೇಟ್ಸ್ನಲ್ಲಿ 15 ವರ್ಷದ ಬಾಲಕಿಯೊಬ್ಬಳ ಮನೆಗೆ ಮೇ ತಿಂಗಳಲ್ಲಿ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ ತತ್ತರಿಸಿದ್ದ ಬಾಲಕಿ ಗಿಯಾನಾ ಸ್ಕಾರಮುಝೊ ಬದುಕುಳಿದಿದ್ದೇ ದೊಡ್ಡ ಪವಾಡ ಎನಿಸಿದೆ. ಅದೇ ತಿಂಗಳಿನಲ್ಲಿ ಒಕ್ಲಹೋಮಾದ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಸಿಡಿಲು ಬಡಿದಿತ್ತು. ಘಟನೆಯಲ್ಲಿ ಶೌಚಾಲಯವು ನಾಶಗೊಂಡಿತ್ತು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:39 am, Tue, 14 June 22