Viral Video: ನನ್ ಬಪ್ಪನನ್ನು ಕೊಂಡೋಗಬೇಡಿ; ಅಳುತ್ತಾ ಗಣಪನನ್ನು ಅಪ್ಪಿಕೊಂಡ ಮುಗ್ದ ಬಾಲೆಯ ವಿಡಿಯೋ ವೈರಲ್

| Updated By: Rakesh Nayak Manchi

Updated on: Sep 11, 2022 | 12:54 PM

ಗಣಪತಿಯನ್ನು ಕೊಂಡೋಗಬೇಡಿ ಎಂದು ವಿಗ್ರಹವನ್ನು ಅಪ್ಪಿಕೊಂಡ ಸಣ್ಣ ಬಾಲೆಯ ಹೃದಯಸ್ಪರ್ಷಿ ವಿಡಿಯೋ ವೈರಲ್ ಆಗುತ್ತಿದೆ.

Viral Video: ನನ್ ಬಪ್ಪನನ್ನು ಕೊಂಡೋಗಬೇಡಿ; ಅಳುತ್ತಾ ಗಣಪನನ್ನು ಅಪ್ಪಿಕೊಂಡ ಮುಗ್ದ ಬಾಲೆಯ ವಿಡಿಯೋ ವೈರಲ್
ವಿಗ್ರಹವನ್ನು ವಿಸರ್ಜನೆ ಮಾಡಲು ಬಿಡದೆ ಗಣಪತಿಯನ್ನು ಅಪ್ಪಿಕೊಂಡ ಮಗು
Follow us on

ಗಣೇಶ ಹಬ್ಬ ಎಂದರೆ ಯುವಕರಿಂದ ಹಿಡಿದು ಹಿರಿಯರವರೆಗೆ ಖುಷಿಯೋ ಖುಷಿ. ಇನ್ನು ಸಣ್ಣ ಮಕ್ಕಳ ವಿಷಯ ಹೇಳಬೇಕಾ? ಗಣಪನನ್ನು ಹಚ್ಚಿಕೊಂಡು ಬಿಡುತ್ತಾರೆ. ಅದರಂತೆ ಮನೆಯೊಂದರಲ್ಲಿ ಗಣಪನನ್ನು ಕೂರಿಸಲಾಗಿತ್ತು. ಇದರ ವಿಸರ್ಜನೆ ವೇಳೆ ಆ ಮನೆಯಲ್ಲಿದ್ದ ಸಣ್ಣ ಮಗು ಬಪ್ಪನನ್ನು ವಿಸರ್ಜನೆ ಮಾಡಬಾರದು ಎಂದು ಅಳುತ್ತಾ ಗಣಪನ ವಿಗ್ರಹವನ್ನು ಅಪ್ಪಿಕೊಂಡ ಹೃದಯಸ್ಪರ್ಷಿ ವಿಡಿಯೋ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ, ಕುಟುಂಬವೊಂದು ತಮ್ಮ ಮನೆಯಲ್ಲಿ ಹಬ್ಬದ ಪ್ರಯುಕ್ತ ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಅದರಂತೆ ಕೊನೆಯ ದಿನದಂದು ವಿಗ್ರಹವನ್ನು ವಿಸರ್ಜನೆ ಮಾಡಲು ಕಾರಿನಲ್ಲಿ ಕೊಂಡೊಯ್ಯಲು ಮುಂದಾಗಿದ್ದಾರೆ. ಇತ್ತ ಮನೆಯಲ್ಲಿ ಕೆಲವು ದಿನಗಳಿಂದ ಪೂಜಿಸಿಕೊಂಡು ಬರುತ್ತಿದ್ದ ಗಣಪತಿಯನ್ನು ಹಚ್ಚಿಕೊಂಡಿದ್ದ ಸಣ್ಣ ಬಾಲಕಿ ವಿಗ್ರಹದ ವಿಸರ್ಜನೆ ಮಾಡದಂತೆ ಕೂಗಿದ್ದಾಳೆ. ಮಾತ್ರವಲ್ಲ ಎಷ್ಟೇ ಮನವೋಲಿಸಿದರೂ ಆಕೆ ಬಿಡದೆ ತನ್ನ ಬಪ್ಪನನ್ನು ಅಪ್ಪಿಕೊಂಡಲು, ವಿಗ್ರಹದ ಮುಂದೆಯೇ ಕುಳಿತುಕೊಂಡಳು. ಹಾಗೋ ಹೀಗೋ ಮಹಿಳೆಯೊಬ್ಬರು ಆಕೆಯನ್ನು ಎತ್ತಿಕೊಂಡರು. ಅಷ್ಟರಲ್ಲೇ ಮತ್ತೆ ಹಠಕ್ಕೆ ಬಿದ್ದ ಬಾಲಕಿ ಮನಪರಿವರ್ತಿಸಲು ಗಣಪತಿಗೆ ಜೈಕಾರವನ್ನು ಕೂಗಿದರು. ಈ ವೇಳೆ ಮಗು ಕೊಂಚ ಅಳು ನಿಲ್ಲಿಸುವುದನ್ನು ಕಾಣಬಹುದು.

ರಾಮೇಶ್ವರ್ ಶರ್ಮಾ ಎಂಬವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನನ್ನ ಬಪ್ಪನನ್ನು ಕೊಂಡೋಗಬೇಡಿ” ಎಂದು ಶೀರ್ಪಿಕೆ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಪಡೆದುಕೊಂಡಿದ್ದು, 17ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹಾಗೂ ಸಾವಿರಾರು ಲೈಕ್​ಗಳು ಬಂದಿವೆ.

ಮತ್ತಷ್ಟು ಟ್ರೆಂಡಿಂಗ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Sun, 11 September 22