Video Viral: 7 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ 5 ವರ್ಷದ ಪುಟ್ಟ ಬಾಲಕಿ; ವಿಡಿಯೋ ವೈರಲ್​

5ವರ್ಷದ ಪುಟ್ಟ ಬಾಲಕಿ ಬೇರೆ ಬೇರೆ ದೇಶಗಳ 7 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ಸದ್ಯ ಈ ಪುಟ್ಟ ಬಾಲಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

Video Viral: 7 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ 5 ವರ್ಷದ ಪುಟ್ಟ ಬಾಲಕಿ; ವಿಡಿಯೋ ವೈರಲ್​
Viral Video

Updated on: Dec 25, 2023 | 5:35 PM

ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿ ಮಾತೃಭಾಷೆಯೊಂದೇ ನಮಗೆ ತಿಳಿದಿರುತ್ತದೆ. ಸ್ವಲ್ಪ ದೊಡ್ಡವರಾತ್ತಿದ್ದಂತೆ ಶಾಲೆಯಲ್ಲಿ ಒಂದೆರಡು ಭಾಷೆಯನ್ನು ಕಲಿಯುವುದುಂಟು. ಪ್ರಪಂಚದಾದ್ಯಂತ ಬಳಸುವ ಕೆಲವು ಭಾಷೆಗಳನ್ನು ಕಲಿಯಲು ಕೆಲವೊಮ್ಮೆ ವರ್ಷಗಳೇ ಬೇಕಾಗುತ್ತದೆ. ಆದರೆ ಈ 5ವರ್ಷದ ಪುಟ್ಟ ಬಾಲಕಿ ಬೇರೆ ಬೇರೆ ದೇಶಗಳ 7 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ಸದ್ಯ ಈ ಪುಟ್ಟ ಬಾಲಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ಈ ಪೋರಿಯ ಟಾಲೆಂಟ್​​​ ನೋಡಿ ನಿಮಗೆ ಆಶ್ಚರ್ಯವಾಗುವುದಂತೂ ಖಂಡಿತಾ.

ವೈರಲ್ ಆಗುತ್ತಿರುವ ವೀಡಿಯೋವೊಂದರಲ್ಲಿ, ಈ ಪುಟ್ಟ ಬಾಲಕಿ ನನಗೆ ರಷ್ಯನ್, ಇಂಗ್ಲಿಷ್, ಅರೇಬಿಕ್, ಇಟಾಲಿಯನ್, ಸ್ಪ್ಯಾನಿಷ್, ಜರ್ಮನ್, ಚೈನೀಸ್ ಭಾಷೆ ಮಾತನಾಡಲು ಬರುತ್ತದೆ ಎಂಬುದನ್ನು ಹೇಳುತ್ತಿರುವುದು ಕಾಣಬಹುದು. ಜರ್ಮನ್‌ನಿಂದ ಪ್ರಾರಂಭಿಸಿ, ಅರೇಬಿಕ್, ಸ್ಪ್ಯಾನಿಷ್, ಚೈನೀಸ್ ಸೇರಿದಂತೆ ಎಲ್ಲಾ ಭಾಷೆಗಳನ್ನು ಮಾತನಾಡುವ ಮೂಲಕ ಪ್ರೇಕ್ಷಕರನ್ನು ಆಶ್ಚರ್ಯಚಕಿತರನ್ನಾಗಿಸುವ ಇದೀಗಾ ಎಲ್ಲೆಡೆ ವೈರಲ್​​ ಆಗಿದೆ. ಈ ವೀಡಿಯೊ ಟಿವಿ ಶೋ ಲಿಟಲ್ ಬಿಗ್ ಶಾಟ್ಸ್‌ ಕಾರ್ಯಕ್ರಮದ್ದಾಗಿದ್ದು, ಇಲ್ಲಿ ಪ್ರಪಂಚದಾದ್ಯಂತದ ಪ್ರತಿಭಾವಂತ ಮಕ್ಕಳ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಲಾಗುತ್ತದೆ.

ವಿಡಿಯೊ ಇಲ್ಲಿದೆ ನೋಡಿ: 

ಇದನ್ನೂ ಓದಿ: ಬನ್ನಿ ಫ್ರೆಂಚ್ ಫ್ರೈಸ್ ಮಾಡೋಣ, ಇಷ್ಟು ಮುದ್ದಾಗಿ ಹೇಳಿಕೊಟ್ರೆ, ಯಾರ್ ತಾನೇ ಕಲಿಯಲ್ಲ ಹೇಳಿ!

ಈ ವೀಡಿಯೊವನ್ನು @ThebestFigen ಎಂಬ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಕೇವಲ 58 ಸೆಕೆಂಡ್ ಗಳ ಈ ವಿಡಿಯೋವನ್ನು ಇದುವರೆಗೆ 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: