Viral Video: ರಾಮ ಮಂದಿರ ಥೀಮ್ನಲ್ಲಿ ಮೂಡಿಬಂದ ಕ್ರಿಸ್ಮಸ್ ಕೇಕ್
Christmas: ಇಂದು ಕ್ರಿಸ್ಮಸ್. ವಿಶ್ವದೆಲ್ಲೆಡೇ ಕ್ರಿಸ್ಮಸ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಇನ್ನೂ ಕ್ರಿಸ್ಮಸ್ ಹಬ್ಬದಲ್ಲಿ ಮುಖ್ಯವಾಗಿ ಕೇಕ್ ಇರ್ಲೇ ಬೇಕು ಅಲ್ವಾ. ಅನೇಕರು ವಿವಿಧ ಬಗೆಯ ಕೇಕ್ಗಳನ್ನು ಮನೆಯಲ್ಲಿಯೇ ತಯಾರಿದರೆ, ಇನ್ನೂ ಕೆಲವರು ತಮಗೆ ಬೇಕಾದ ಕೇಕ್ಗಳನ್ನು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಅದೇ ರೀತಿ ಇಲ್ಲೊಬ್ಬರು ಕೇಕ್ ಆರ್ಟಿಸ್ ಈ ಬಾರಿಯ ಕ್ರಿಸ್ಮಸ್ ಸಲುವಾಗಿ ರಾಮ ಮಂದಿರ ಥೀಮ್ ಅಲ್ಲಿ ವಿಶೇಷವಾದ ಕೇಕ್ ಒಂದನ್ನು ತಯಾರಿಸಿದ್ದು, ಇದೀಗ ಎಲ್ಲೆಡೆ ಸುದ್ದಿಯಾಗಿದೆ. ಈ ಕುರಿತ ಇಂಟರೆಸ್ಟಿಂಗ್ ವಿಡಿಯೋ ಇಲ್ಲಿದೆ ನೋಡಿ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ರಾಮ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದೆ. ಈ ಒಂದು ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ರಾಮ ಮಂದಿರದಲ್ಲಿ ಜನವರಿ 22 ರಂದು ಶ್ರೀ ರಾಮನ ಪ್ರತಿಷ್ಠೆ, ಮಂದಿರ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಈ ನಡುವೆ ಪವಿತ್ರ ರಾಮಮಂದಿರಕ್ಕೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕೆಂದು ಭಕ್ತರು ಒಂದಲ್ಲಾ ರೂಪದಲ್ಲಿ ರಾಮಮಂದಿರಕ್ಕೆ ತಮ್ಮ ಕೈಲಾದದಷ್ಟು ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ. ಇತ್ತೀಚಿಗೆ ಗುಜರಾತಿನ ವಜ್ರದ ವ್ಯಾಪಾರಿಯೊಬ್ಬರು, ರಾಮಮಂದಿರಕ್ಕೆ ಉಡುಗೊರೆಯಾಗಿ ನೀಡಲು ರಾಮ ಮಂದಿರದ ಪರಿಕಲ್ಪನೆಯಲ್ಲಿ ವಜ್ರದ ಹಾರವನ್ನು ತಯಾರಿಸಿ ಸುದ್ದಿಯಲ್ಲಿದ್ದರು. ಹಾಗೇನೆ ಕೆಲವು ದಿನಗಳ ಹಿಂದೆಯಷ್ಟೆ ಭಕ್ತರೊಬ್ಬರು 45 ದಿನ ಪರಿಮಳ ಸೂಸುವ 108 ಅಡಿ ಉದ್ದದ ಅಗರಬತ್ತಿಯನ್ನು ಶ್ರೀ ರಾಮನಿಗೆ ಕಾಣಿಕೆಯಾಗಿ ನೀಡಿ ಸುದ್ದಿಯಲ್ಲಿದ್ದರು. ಅದೇ ರೀತಿ ಇಲ್ಲೊಬ್ಬರು ಕೇಕ್ ಆರ್ಟಿಸ್ಟ್ ತಾನು ಕೂಡಾ ರಾಮ ಮಂದಿರದ ಸಲುವಾಗಿ ಏನಾದರೂ ವಿಶಿಷ್ಟವಾದದ್ದು ಮಾಡಬೇಕೆಂದು, ರಾಮ ಮಂದಿರ ಥೀಮ್ ಅಲ್ಲಿ ಕ್ರಿಸ್ಮಸ್ ಕೇಕ್ ಅನ್ನು ತಯಾರಿಸಿದ್ದಾರೆ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.
ಪಶ್ಚಿಮ ಬಂಗಾಳದ ಸಿಲಿಗುರಿಯ ಕೇಕ್ ಆರ್ಟಿಸ್ಟ್ ಪ್ರಿಯಾಂಕ ಎಂಬವರು ರಾಮ ಮಂದಿರ ಥೀಮ್ ಅಲ್ಲಿ ಅದ್ಭುತವಾದ ಕೇಕ್ ತಯಾರಿಸಿದ್ದು, ಜನವರಿ 22 ರಂದು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ, ಇದಕ್ಕೆ ಸಂಬಂಧಿಸಿದಂತೆ ಏನನ್ನಾದರೂ ಮಾಡಲು ಬಯಸಿದ್ದೆ, ಹಾಗಾಗಿ ನಾನು ಕೇಕ್ ಆರ್ಟಿಸ್ಟ್ ಆಗಿರುವುದರಿಂದ ರಾಮ ಮಂದಿರ ಥೀಮ್ ಅಲ್ಲಿ ಕೇಕ್ ತಯಾರಿಸಿದ್ದೇನೆ ಎಂದು ಪ್ರಿಯಾಂಕ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬನ್ನಿ ಫ್ರೆಂಚ್ ಫ್ರೈಸ್ ಮಾಡೋಣ, ಇಷ್ಟು ಮುದ್ದಾಗಿ ಹೇಳಿಕೊಟ್ರೆ, ಯಾರ್ ತಾನೇ ಕಲಿಯಲ್ಲ ಹೇಳಿ!
ವೈರಲ್ ವಿಡಿಯೋ ಇಲ್ಲಿದೆ:
#WATCH | West Bengal: A cake artist from Siliguri made a Ram Mandir themed Christmas cake pic.twitter.com/1pg3Mjte1c
— ANI (@ANI) December 24, 2023
ಡಿಸೆಂಬರ್ 24 ರಂದು ಈ ವಿಡಿಯೋವನ್ನು X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ 411K ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: