AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬನ್ನಿ ಫ್ರೆಂಚ್ ಫ್ರೈಸ್ ಮಾಡೋಣ, ಇಷ್ಟು ಮುದ್ದಾಗಿ ಹೇಳಿಕೊಟ್ರೆ, ಯಾರ್ ತಾನೇ ಕಲಿಯಲ್ಲ ಹೇಳಿ!

ಬಹುತೇಕ ಎಲ್ಲರಿಗೂ ಫ್ರೆಂಚ್ ಫ್ರೈಸ್ ಎಂದರೆ ಬಲು ಇಷ್ಟ. ಆದ್ರೆ ಫ್ರೆಂಚ್ ಫ್ರೈಸ್ ಹೇಗೆ ಮಾಡೋದು ಅಂತ ಅದರ ರೆಸಿಪಿ ಬಗ್ಗೆ ಹಲವರಿಗೆ ತಿಳಿದಿಲ್ಲ, ಅಂತವರಿಗಾಗಿಯೇ ಈ ಮುದ್ದು ಹುಡುಗ ಫ್ರೈಂಚ್ ಫ್ರೈಸ್ ಹೇಗೆ ಮಾಡೋದು ಎಂಬುದನ್ನು ತಿಳಿಸಿಕೊಟ್ಟಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಇಷ್ಟು ಮುದ್ದು ಮುದ್ದಾಗಿ ಅಡುಗೆ ಮಾಡೋದನ್ನ ಕಲಿಸಿದ್ರೆ ಯಾರು ತಾನೇ ಅಡುಗೆ ಕಲಿಯಲ್ಲ ಹೇಳಿ ಎಂದು ನೆಟ್ಟಿಗರು ಹೇಳಿದ್ದಾರೆ. 

Viral Video: ಬನ್ನಿ ಫ್ರೆಂಚ್ ಫ್ರೈಸ್ ಮಾಡೋಣ, ಇಷ್ಟು ಮುದ್ದಾಗಿ ಹೇಳಿಕೊಟ್ರೆ, ಯಾರ್ ತಾನೇ ಕಲಿಯಲ್ಲ ಹೇಳಿ!
ವೈರಲ್​​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Dec 25, 2023 | 12:51 PM

Share

ನಿಮ್ಗೂ ಫ್ರೆಂಚ್ ಫ್ರೈಸ್ ಅಂದ್ರೆ ತುಂಬಾನೇ ಇಷ್ಟನಾ…. ಆದ್ರೆ ಪ್ರತಿ ಬಾರಿ ಹೊರಗಡೆ ಈ ಫುಡ್ ತಿನ್ನೋದು ಎಷ್ಟು ಸರಿ ಅಂತಾ ಯೋಚ್ನೆ ಮಾಡ್ತಿದ್ದೀರಾ? ಹಾಗಿದ್ರೆ ಈ ರೆಸಿಪಿಯ ಆರೋಗ್ಯಕರ ಆವೃತ್ತಿಯನ್ನು  ನೀವು ಮನೆಯಲ್ಲಿಯೇ ತಯಾರಿಸಬಹುದಲ್ವಾ? ಅದೇನೋ ತಯಾರಿಸಬಹುದು ಆದ್ರೆ  ಫ್ರೆಂಚ್  ಫ್ರೈಸ್ ಮಾಡೋದು ಹೇಗೆ ಅಂತಾನೇ ಗೊತ್ತಿಲ್ಲ ಅಲ್ವಾ ಎಂಬ ಚಿಂತೇನಾ… ಹಾಗಿದ್ರೆ ಈ ವಿಡಿಯೋವನ್ನು ಒಮ್ಮೆ ನೋಡಿ,  ನಮ್ಮ ಲಿಟಲ್ ಮಾಸ್ಟರ್   ಚೆಫ್ ಸುಲಭವಾಗಿ ಫ್ರೆಂಚ್   ಫ್ರೈಸ್ ಮಾಡೋದನ್ನಾ ಹೇಳಿ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಇಷ್ಟು ಮುದ್ದು ಮುದ್ದಾಗಿ ಅಡುಗೆ ಮಾಡೋದನ್ನ ಕಲಿಸಿದ್ರೆ ಯಾರು ತಾನೇ ಅಡುಗೆ ಕಲಿಯಲ್ಲ ಹೇಳಿ ಎಂದು ನೆಟ್ಟಿಗರು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಈ ವಿಡಿಯೋವನ್ನು  @agniv_2018 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು,  ಪುಟ್ಟ  ಹುಡುಗನೊಬ್ಬ ಫ್ರೆಂಚ್ ಫ್ರೈಸ್ ಹೇಗೆ ಮಾಡುವುದು ಎಂಬ ರೆಸಿಪಿಯನ್ನು  ಹೇಳಿಕೊಡುತ್ತಿರುವುದನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by AgniV (@agniv_2018)

ಈ ವೈರಲ್ ವಿಡಿಯೋದಲ್ಲಿ ಪುಟ್ಟ ಬಾಲಕ ಲೆಟ್ಸ್ ಮೇಕ್ ಫ್ರೆಂಚ್ ಫ್ರೈಸ್ ಎಂದು ಹೇಳಿ, ಫ್ರೈಂಚ್ ಫ್ರೈಸ್ ಹೇಗೆ ಮಾಡುವುದು ಎಂಬುದನ್ನು ಹೇಳಿಕೊಟ್ಟಿದ್ದಾನೆ.  ಪುಟ್ಟ ಹುಡುಗ ಮೊದಲಿಗೆ ಎರಡು ಆಲೂಗಡ್ಡೆಯನ್ನು ತೆಗೆದುಕೊಂಡು, ಅದನ್ನು ಚೆನ್ನಾಗಿ ತೊಳೆದ ಬಳಿಕ ಆ ಆಲೂಗಡ್ಡೆಯನ್ನು ಫ್ರೆಂಚ್  ಫ್ರೈಸ್ ಆಕಾರಕ್ಕೆ ಕತ್ತರಿಸಿಕೊಳ್ಳುತ್ತಾನೆ. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲು ಇಟ್ಟು ಅದಕ್ಕೆ ಕತ್ತರಿಸಿದ ಆಲೂಗಡ್ಡೆ ಮತ್ತು ಉಪ್ಪನ್ನು ಸೇರಿಸಿ ಬೇಯಲು ಬಿಡುತ್ತಾನೆ. ಇದರ ನಡುವೆಯೂ ಯಾವ ರೀತಿ ಜಾಗರೂಕತೆಯಿಂದ ಆಲೂಗಡ್ಡೆಗನ್ನು ಕತ್ತರಿಸಬೇಕು ಮತ್ತು ಕೆಲವೊಮ್ಮೆ ಜಂಕ್ಸ್ ಫುಡ್ ತಿಂದ್ರೆ ಏನು ಆಗಲ್ಲ ಅಂತ ಮುದ್ದಾಗಿ ಹೇಳುವುದನ್ನು ಕಾಣಬಹುದು. ನಂತರ ಬೇಯಿಸಿದ ಆಲೂಗಡ್ಡೆಗಳನ್ನು ತೆಗೆದುಕೊಂಡು ಅದನ್ನು ಟಿಶ್ಯೂ ಪೇಪರ್ ಮೇಲೆ ಡ್ರೈ ಆಗಲು ಬಿಡುತ್ತಾನೆ.  ಬಳಿಕ ಅದನ್ನು ಒಂದು ಪಾತ್ರೆಗೆ ಹಾಕಿ, ಫ್ರೆಂಚ್ ಫ್ರೈಸ್   ಕ್ರಿಸ್ಪಿ ಆಗಲು  ಅದಕ್ಕೆ ಕಾರ್ನ್ ಫ್ಲೋರ್ (ಜೋಳದ ಹಿಟ್ಟು)ನ್ನು ಸಹ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ, ಬಳಿಕ ಅದನ್ನು ಎಣ್ಣೆಯಲ್ಲಿ ಫ್ರೈ ಮಾಡಿ,  ಎಷ್ಟು ಕ್ರಿಸ್ಪಿ ಫ್ರೆಂಚ್ ಫ್ರೈಸ್  ಇದು ಎಂದು ಹೇಳುವುದನ್ನು ಕಾಣಬಹುದು.

ಇದನ್ನೂ ಓದಿ: ಡೋಲೋ 650 ಮಾತ್ರೆಯಿಂದ ಬಟ್ಟೆಯ ಕಲೆ ಮಾಯ! ವಿಜ್ಞಾನಿಗಳಿಗೆ ಅಚ್ಚರಿ ಮೂಡಿಸಿದ ಮಹಿಳೆಯ ಪ್ರಯೋಗ

ಡಿಸೆಂಬರ್ 23 ರಂದು ಹಂಚಿಕೊಳ್ಳಲಾದ ಈ ವಿಡಿಯೋ 13.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 739K ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಸಹ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ!!! ಈ ಹುಡುಗ ಎಷ್ಟು ಮುದ್ದಾಗಿ ಅಡುಗೆ ಮಾಡುವುದನ್ನು ಹೇಳಿ ಕೊಡುತ್ತಿದ್ದಾನೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಷ್ಟು ಮುದ್ದಾದ ಬಾಣಸಿಗ ಅಡುಗೆ ಮಾಡುವುದನ್ನು ಕಲಿಸಿಕೊಟ್ಟರೆ ಯಾರಾದರೂ ಅಡುಗೆ ಮಾಡುವುದನ್ನು ಕಲಿಯದಿರಲೂ ಸಾಧ್ಯನಾʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ತುಂಬಾ ಮುದ್ದಾಗಿದೆ ಎಂದು ಕಮೆಂಟ್ಸ್ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ