AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆಯ್ತು ಇದು ಕೊನೆ ತುತ್ತು ಬೇಗ ತಿನ್ನಿ, ಕೋಗಿಲೆ ಮರಿಗಳಿಗೆ ಪ್ರೀತಿಯಿಂದ ಕೈ ತುತ್ತು ನೀಡಿದ ಮಹಿಳೆ

ಪ್ರಾಣಿಗಳು ಮತ್ತು ಪಕ್ಷಿಗಳ ಕುರಿತ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುತ್ತವೆ.  ಇವುಗಳಲ್ಲಿ ಕೆಲವು ವಿಡಿಯೋಗಳಂತೂ ನಂಬಲಾಸಾಧ್ಯವಾಗಿರುತ್ತದೆ. ಅಂತಹದ್ದೇ   ವಿಡಿಯೋವೊಂದು ಹರಿದಾಡುತ್ತಿದ್ದು, ಮಹಿಳೆಯೊಬ್ಬರು ಹಸಿದು ಬಂದಂತಹ  ಎರಡು ಹಕ್ಕಿ ಮರಿಗಳಿಗೆ  ಪ್ರೀತಿಯಿಂದ ಕೈತುತ್ತು ನೀಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ವೈರಲ್ ಆಗಿದ್ದು,   ತಾಯಿ ವಾತ್ಸಲ್ಯಕ್ಕೆ ಸರಿಸಾಟಿ ಯಾವುದು ಇಲ್ಲ  ಎಂದು ನೆಟ್ಟಿಗರು ಭಾವುಕರಾಗಿದ್ದಾರೆ. 

Viral Video: ಆಯ್ತು ಇದು ಕೊನೆ ತುತ್ತು ಬೇಗ ತಿನ್ನಿ, ಕೋಗಿಲೆ ಮರಿಗಳಿಗೆ ಪ್ರೀತಿಯಿಂದ ಕೈ ತುತ್ತು ನೀಡಿದ ಮಹಿಳೆ
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 25, 2023 | 5:32 PM

ಅಮ್ಮಾ ಎಷ್ಟು ತಿನ್ನಿಸ್ತೀಯಾ ನನ್ಗೆ ಊಟ ಸಾಕು ಎಂದು ಮಕ್ಕಳು ಎಷ್ಟೇ ಹಟ ಮಾಡಿದ್ರೂ, ತಾಯಿಯಾದವಳು ತನ್ನ  ಮಕ್ಕಳ ಹೊಟ್ಟೆ ತುಂಬುವವರೆಗೂ ಊಟ ಮಾಡಿಸುತ್ತಾಳೆ. ಅಮ್ಮನ ಕೈ ರುಚಿಯೇ ಹಾಗೇ ಅದು ಅಮೃತವಿದ್ದಂತೆ.  ಅದು ಪ್ರೀತಿ ವಾತ್ಸಲ್ಯದ ಪ್ರತೀಕ. ನಾವೆಲ್ಲರೂ ಅಮ್ಮನ ಕೈ ತುತ್ತು ತಸವಿದಿರುತ್ತೇವೆ. ಹಾಗೇನೇ ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳಿಗೆ ಪ್ರೀತಿಯಿಂದ ಕೈತುತ್ತು ನೀಡುತ್ತಾಳೆ.   ಆದ್ರೆ ಇಲ್ಲೊಬ್ಬರು ತಾಯಿ ಹಸಿದು ಬಂದಂತಹ ಹಕ್ಕಿ ಮರಿಗಳಿಗೂ ಕೂಡಾ ಪ್ರೀತಿಯಿಂದ ಕೈತುತ್ತು ನೀಡಿದ್ದಾರೆ. ಅರೇ ಹಕ್ಕಿಗಳು ಮನುಷ್ಯರನ್ನು ಕಂಡ್ರೆ ಹಾರಿ ಹೋಗುತ್ತೆ ಅಲ್ವಾ, ಅದು ಹೇಗೆ ಕೈ ತುತ್ತು ತಿನ್ನಲು ಸಾಧ್ಯ ಅಂತ ಯೋಚ್ನೆ ಮಾಡ್ತಿದ್ದೀರಾ? ಹಾಗಿದ್ರೆ ಈ ಹೃದಯಸ್ಪರ್ಶಿ ವಿಡಿಯೋವನ್ನೊಮ್ಮೆ ನೋಡಿ.

@kumaresan.p16041990 ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ʼಮಹಿಳೆಯೊಬ್ಬರು ಹಕ್ಕಿ ಮರಿಗಳಿಗೆ  ಪ್ರೀತಿಯಿಂದ ಕೈ ತುತ್ತು ನೀಡುವ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಈ ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ಮರದ ಮೇಲೆ ಕುಳಿತಿದ್ದಂತಹ ಎರಡು ಹಕ್ಕಿ ಮರಿಗಳಿಗೆ ಪ್ರೀತಿಯಿಂದ ಕೈ ತುತ್ತು ನೀಡುತ್ತಿರುವುದನ್ನು ಕಾಣಬಹುದು. ಹಸಿದು ಬಂದಂತಹ ಎರಡು ಹಕ್ಕಿ ಮರಿಗಳು ಅಮ್ಮಾ ನನ್ಗೆ ಕೈ ತುತ್ತು ನೀಡಮ್ಮಾ… ಅಮ್ಮಾ ನನ್ಗೆ ಮೊದ್ಲು ಕೈ ತುತ್ತು ನೀಡಮ್ಮಾ… ಎನ್ನುತ್ತಾ ಬಾಯಿ ತೆರೆದು  ಕುಳಿತಿರುತ್ತವೆ. ಆ ಹಕ್ಕಿಗಳಿಗೆ ಈ ತಾಯಿ ಪ್ರೀತಿಯಿಂದ ತುತ್ತನ್ನು ತಿನ್ನಿಸುತ್ತಾರೆ.

ಇದನ್ನೂ ಓದಿ: ರಾಮ ಮಂದಿರ ಥೀಮ್​​​ನಲ್ಲಿ ಮೂಡಿಬಂದ ಕ್ರಿಸ್ಮಸ್ ಕೇಕ್

ನವೆಂಬರ್ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ  12.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.1 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನಾನು ಮೊದಲ ಬಾರಿಗೆ ಮನುಷ್ಯರು ಹಕ್ಕಿಗಳಿಗೆ ಕೈ ತುತ್ತು ನೀಡುತ್ತಿರುವುದನ್ನು ನೋಡುತ್ತಿರುವುದು, ಈ ದೃಶ್ಯವನ್ನು ಕಂಡು ನಾನು ಭಾವುಕನಾದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼತಾಯಿ ಪ್ರೀತಿಗೆ ಸರಿಸಾಟಿ ಯಾವುದು ಇಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ತಾಯಿ ತನ್ನ ಸ್ವಂತ ಮಕ್ಕಳಿಗೆ ತುತ್ತು ನೀಡುತ್ತಿರುವಂತೆ ಭಾಸವಾಗುತ್ತಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಹೃಯಯಸ್ಪರ್ಶಿ  ವಿಡಿಯೋಗೆ ಭಾರೀ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ