Viral Video: ಪ್ರೀತಿಯ ಬೆಕ್ಕಮ್ಮನಿಗೆ ಅದ್ಧೂರಿ ಸೀಮಂತ: ಇಲ್ಲಿದೆ ನೋಡಿ ಮುದ್ದಾದ ವಿಡಿಯೋ
ಅನೇಕರು ತಮ್ಮ ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕುತ್ತಾರೆ. ಮನುಷ್ಯರಿಗೆ ನಿಷ್ಠೆ, ಪ್ರಾಮಾಣಿಕತೆಯನ್ನು ತೋರುವ ಈ ಮುಗ್ಧ ಮನಸ್ಸುಗಳ ಹುಟ್ಟುಹಬ್ಬವನ್ನು ಆಚರಿಸುವುದರಿಂದ ಹಿಡಿದು ಅವುಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವವರೆಗೆ ಸಾಕು ಪ್ರಾಣಿಗಳ ಕುರಿತ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಮನೆಯವರು ತಮ್ಮ ಕುಟುಂಬದ ಸದಸ್ಯೆಯಂತೆ ಇರುವ ಬೆಕ್ಕಮ್ಮನಿಗೆ ಅದ್ಧೂರಿ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಬೆಕ್ಕಮ್ಮ ಸೀಮಂತದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧ ತುಂಬಾ ವಿಶೇಷವಾದದ್ದು. ಇದೇ ಕಾರಣಕ್ಕೆ ಹೆಚ್ಚಿನವರು ತಮ್ಮ ಮನೆಗಳಲ್ಲಿ ಪ್ರಾಣಿಗಳನ್ನು ಸಾಕಲು ಬಯಸುತ್ತಾರೆ. ಅನೇಕರು ತಮ್ಮ ಸಾಕು ಪ್ರಾಣಿಗಳಾದ ನಾಯಿ ಬೆಕ್ಕುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ ಮತ್ತು ಮುದ್ದು ಮಾಡುತ್ತಾರೆ. ಈ ಸಾಕು ಪ್ರಾಣಿಗಳ ಹುಟ್ಟು ಹಬ್ಬವನ್ನು ಆಚರಿಸುವುದರಿಂದ ಹಿಡಿದು ಅವುಗಳನ್ನು ಕುಟುಂಬದ ಸದಸ್ಯರೊಂದಿಗೆ ವಿಹಾರಕ್ಕೆ ಕರೆದೊಯ್ಯುವವರೆಗೆ ಅವುಗಳಿಗೆ ಸಾಕಷ್ಟು ಪ್ರೀತಿ, ಕಾಳಜಿಯನ್ನು ತೋರುತ್ತಾರೆ. ಇಂತಹ ಹಲವಾರು ಹೃದಯಸ್ಪರ್ಶಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಮನೆಯವರು ತಮ್ಮ ಕುಟುಂಬದ ಸದಸ್ಯೆಯಂತೆ ಇರುವ ಬೆಕ್ಕಮ್ಮನಿಗೆ ಅದ್ಧೂರಿಯಾಗಿ ಸೀಮಂತವನ್ನು ಮಾಡಿದ್ದಾರೆ. ಹೌದು ಈ ಹಿಂದೆ ಗರ್ಭಿಣಿ ನಾಯಿಗೆ ಸೀಮಂತ ಮಾಡಿದ ವಿಡಿಯೋವೊಂದು ವೈರಲ್ ಆಗಿತ್ತು, ಅದೇ ರೀತಿ ಇಲ್ಲೊಂದು ಕುಟುಂಬದವರು ತಮ್ಮ ಮನೆಯ ಗರ್ಭಿಣಿ ಬೆಕ್ಕಿಗೂ ಅದ್ಧೂರಿ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ.
ಪ್ರಸಾದ್ (@prasadchinnu65) ಎಂಬವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಬೆಕ್ಕಿಮ್ಮನಿಗೆ ಅದ್ಧೂರಿ ಸೀಮಂತ ಕಾರ್ಯಕ್ರಮ ನೆರವೇರಿಸಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ವಿಡಿಯೋದಲ್ಲಿ ಗರ್ಭಿಣಿ ಬೆಕ್ಕಿನ ಹಣೆಗೆ ತಿಲಕವನ್ನಿಟ್ಟು, ಹೂವಿನ ಹಾರವನ್ನು ಹಾಕಿ ಕುರ್ಚಿಯ ಮೇಲೆ ಕೂರಿಸಿರುವುದನ್ನು ಕಾಣಬಹುದು. ಮತ್ತು ಬೆಕ್ಕಿನ ಮುಂದುಗಡೆ ಅರಶಿನ ಕುಂಕುಮ, ಬಳೆ, ಸೀರೆ, ಹಣ್ಣು ಹಂಪಲು, ತಿಂಡಿ ತಟ್ಟೆಗಳನ್ನೆಲ್ಲಾ ಇಟ್ಟು ಬೆಕ್ಕಮ್ಮನಿಗೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿರುವ ಸುಂದರ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ; ಆಯ್ತು ಇದು ಕೊನೆ ತುತ್ತು ಬೇಗ ತಿನ್ನಿ, ಕೋಗಿಲೆ ಮರಿಗಳಿಗೆ ಪ್ರೀತಿಯಿಂದ ಕೈ ತುತ್ತು ನೀಡಿದ ಮಹಿಳೆ
ಡಿಸೆಂಬರ್ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 875 ಸಾವಿರ ವೀಕ್ಷಣೆಗಳನ್ನು ಹಾಗೂ 33.3 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಸಹ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼದುಡ್ಡು ಜಾಸ್ತಿ ಆದ್ರೆ ಹಿಂಗೂ ಕೂಡ ಆಗುತ್ತೆʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ಬೆಕ್ಕು ತುಂಬಾ ಪುಣ್ಯ ಮಾಡಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದೇ ತಾನೇ ಪ್ರೀತಿ ಎಂದು ಈ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: