Viral Video: ನಿರತಂರ ಮಳೆ ಹಿನ್ನೆಲೆ ಅಂತಿಮವಾಗಿ ಬಟ್ಟೆ ಒಣಗಿಸಲು ಪರಿಹಾರ ಕಂಡುಕೊಂಡ ಮುಂಬೈ ಜನರು

ಒಗೆದ ಬಟ್ಟೆಗಳನ್ನು ಕೂಡ ಸರಿಯಾಗಿ ಒಣಗಿಸಲಾಗದೆ ಪರದಾಡುತ್ತಿದ್ದ ಮುಂಬೈನ ಒಂದಷ್ಟು ಜನರು ರೈಲಿನಲ್ಲಿ ಸಂಚರಿಸುವಾಗ ಅದರಲ್ಲಿರುವ ಫ್ಯಾನ್ ಅಡಿಯಲ್ಲಿ ಬಟ್ಟೆಗಳನ್ನು ಒಣಗಲು ಹಾಕುತ್ತಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

Viral Video: ನಿರತಂರ ಮಳೆ ಹಿನ್ನೆಲೆ ಅಂತಿಮವಾಗಿ ಬಟ್ಟೆ ಒಣಗಿಸಲು ಪರಿಹಾರ ಕಂಡುಕೊಂಡ ಮುಂಬೈ ಜನರು
ರೈಲಿನಲ್ಲಿ ಬಟ್ಟೆ ಒಣಗಿಸಲು ಹಾಕಿರುವುದು
Updated By: Rakesh Nayak Manchi

Updated on: Jul 17, 2022 | 1:39 PM

ಮುಂಬೈಯಲ್ಲಿ ಆಗುತ್ತಿರುವ ಮಳೆಯಿಂದ ವಾಹನ ಸಂಚಾರಕ್ಕೆ ಅಡಣೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗುತ್ತಿದೆ. ಅಷ್ಟೇ ಅಲ್ಲದೆ, ಒಗೆದ ಬಟ್ಟೆಗಳನ್ನು ಕೂಡ ಸರಿಯಾಗಿ ಒಣಗಿಸಲಾಗದೆ ಜನರು ಪರದಾಡುತ್ತಿದ್ದಾರೆ. ಅಂತಿಮವಾಗಿ ಮುಂಬೈನ ಜನರು ಬಟ್ಟೆ ಒಣಗಿಸಲು ಪರಿಹಾರವನ್ನು ಕೊಂಡುಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಸ್ಥಳೀಯ ರೈಲಿನಲ್ಲಿ ಜನರು ತಮ್ಮ ಒಗೆದ ಬಟ್ಟೆಗಳನ್ನು ಒಣಹಾಕಿರುವುದನ್ನು ವಿಡಿಯೋ ತೋರಿಸುತ್ತದೆ.

ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಬಟ್ಟೆಗಳು ಸರಿಯಾಗಿ ಒಣಗುತ್ತಿಲ್ಲ. ಈ ಅನಾನುಕೂಲತೆಗಳನ್ನು ಎದುರಿಸುತ್ತಿರುವ ಜನರು ರೈಲಿನಲ್ಲಿ ಓಡಾಡುವಾಗ ರೈಲಿನ ಫ್ಯಾನ್ ಅಡಿ ಒಣಹಾಕುತ್ತಿದ್ದಾರೆ. ದಾದರ್ಮುಂಬೈಕರ್ ಹ್ಯಾಂಡಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇದು ನಮ್ಮ ಮುಂಬೈನಲ್ಲಿ ಮಾತ್ರ ಸಾಧ್ಯ’ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಎರಡು ದಿನಗಳ ಹಿಂದೆ ಹಂಚಿಕೊಂಡಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಹಾಸ್ಯವಾಗಿಯೂ ಕಾಂಮೆಂಟ್ ಮಾಡುತ್ತಿದ್ದಾರೆ.

ಮುಂಬೈನಲ್ಲಿ ಭಾರೀ ಮಾನ್ಸೂನ್ ಮಳೆಯಾಗುತ್ತಿರುವ ಪರಿಣಾಮ ಜನರು ಪ್ರತಿ ವರ್ಷ ಇಂತಹ ಸವಾಲುಗಳನ್ನು ಎದುರಿಸುತ್ತಿರುತ್ತಾರೆ. ರೈಲಿನೊಳಗೆ ಬಟ್ಟೆಗಳನ್ನು ಒಣಗಿಸಲು ಹಾಕವುದು ಇದೇನು ಹೊಸತ್ತಲ್ಲ. ಮುಂಬೈನ ಸ್ಥಳೀಯ ರೈಲಿನಲ್ಲಿ ಬಟ್ಟೆಗಳನ್ನು ಒಣಹಾಕಿರುವ ಹಳೇಯ ಟ್ವೀಟ್ ಕೂಡ ಇದೆ.

ಈ ವಾರದ ಆರಂಭದಲ್ಲಿ ಮುಂಬೈನಲ್ಲಿ ನಿರಂತರ ಮಳೆಯಾಗಿ ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮಳೆಯ ಸಮಯದಲ್ಲಿ ಬಂದರು ಮಾರ್ಗಗಳಲ್ಲಿನ ಉಪನಗರ ಸೇವೆಗಳು ನಿಧಾನವಾಗಿದ್ದರೂ ಮಧ್ಯ ರೈಲ್ವೆ ಮತ್ತು ಪಶ್ಚಿಮ ರೈಲ್ವೆಗಳಲ್ಲಿನ ಸ್ಥಳೀಯ ರೈಲು ಸೇವೆಗಳು ಪರಿಣಾಮ ಬೀರಲಿಲ್ಲ.

ಮಹಾರಾಷ್ಟ್ರದಾದ್ಯಂತ ಮಳೆ ಸಂಬಂಧಿತ ಘಟನೆಗಳು ಇಲ್ಲಿಯವರೆಗೆ 102 ಜನರನ್ನು ಬಲಿ ತೆಗೆದುಕೊಂಡಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ವರದಿಯಲ್ಲಿ ತಿಳಿಸಿದೆ. ಈ ಅಂಕಿಅಂಶಗಳು ಜೂನ್ 1 ಮತ್ತು ಜುಲೈ 14 ರ ನಡುವೆ ಇವೆ ಎಂದು ಅದು ಹೇಳಿದೆ.

Published On - 1:39 pm, Sun, 17 July 22