Video: ನಿದ್ದೆ ಮಾಡುತ್ತಿರುವಂತೆ ನಟಿಸಿ, ರೈಲ್ವೆ ನಿಲ್ದಾಣದಲ್ಲಿ ಮಧ್ಯರಾತ್ರಿ ಈತ ಮಾಡಿದ್ದೇನು ನೋಡಿ..

|

Updated on: Apr 12, 2024 | 12:32 PM

ನಿದ್ದೆ ಮಾಡುತ್ತಿರುವಂತೆ ನಟಿಸಿ, ರೈಲು ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ 21 ವರ್ಷದ ಅವಿನೀಶ್ ಸಿಂಗ್ ಎಂಬಾತನನ್ನು ರೈಲ್ವೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ತನಿಖೆಯ ವೇಳೆ ಐದು ಮೊಬೈಲ್ ಗಳನ್ನು ಕಳವು ಮಾಡಿರುವುದು ತಿಳಿದು ಬಂದಿದೆ. ಕಳ್ಳನ ಕದಿಯೋ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಉತ್ತರ ಪ್ರದೇಶ: ನಿದ್ದೆ ಮಾಡುತ್ತಿರುವಂತೆ ನಟಿಸಿ, ಪಕ್ಕದಲ್ಲೇ ಮಲಗಿದ್ದ ವ್ಯಕ್ತಿಯ ಪ್ಯಾಂಟ್​​​ ಜೇಬಿನಿಂದ ಫೋನ್​​ ಎಗರಿಸಿಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ನಡೆದಿದೆ. ಕಳ್ಳ ಫೋನ್​​​ ಎಗರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಸಿಸಿಟಿವಿ ದೃಶ್ಯಾವಳಿ ಇಲ್ಲಿದೆ ನೋಡಿ.  ವಿಡಿಯೋದಲ್ಲಿ ಕಳ್ಳ  ಸಲೀಸಾಗಿ ಫೋನ್​ ಕದ್ದು ಪರಾರಿಯಾಗುವುದನ್ನು ಕಾಣಬಹುದು.

ಫೋನ್​​ ಕಳೆದುಕೊಂಡ ವ್ಯಕ್ತಿಯ ದೂರಿನ ಆಧಾರದ ಮೇಲೆ ರೈಲ್ವೆ ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲಿಸಿದ್ದು,ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ರೈಲ್ವೆ ಪೊಲೀಸರು ಕೊನೆಗೆ ಕಳ್ಳನನ್ನು ಗುರುತಿಸಿದ್ದಾರೆ. ನಿದ್ದೆಯ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ 21 ವರ್ಷದ ಅವಿನೀಶ್ ಸಿಂಗ್ ಎಂಬಾತನನ್ನು ಮಂಗಳವಾರ ಬಂಧಿಸಲಾಗಿದೆ. ತನಿಖೆಯ ವೇಳೆ ಐದು ಮೊಬೈಲ್ ಗಳನ್ನು ಕಳವು ಮಾಡಿರುವುದು ತಿಳಿದು ಬಂದಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ