Viral Video: ಎಸ್ಕಲೇಟರ್​​ನಲ್ಲಿ  ಚಲಿಸುತ್ತಿರುವ ವೇಳೆ  ಕೆಳಗೆ ಇಣುಕಲು ಹೋಗಿ ಪಜೀತಿಗೆ ಸಿಲುಕಿದ ಬಾಲಕ

ಕೆಲವೊಮ್ಮೆ ಮಕ್ಕಳು ಮಾಡುವ ತರ್ಲೆ ತುಂಟಾಟಗಳು  ಅವರನ್ನೇ ಪಜೀತಿಗೆ ಸಿಲುಕಿಸುತ್ತವೆ. ಇಂತಹ ಸಾಕಷ್ಟು ಉದಾಹರಣೆಗಳನ್ನು ನೀವು ನೋಡಿರಬಹುದಲ್ವಾ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮಾಲ್ ಒಂದರಲ್ಲಿ ಬಾಲಕನೊಬ್ಬ ಎಸ್ಕಲೇಟರ್ ನಲ್ಲಿ ಚಲಿಸುತ್ತಿದ್ದಾಗ, ಮೇಲಿಂದ ಕೆಳಗೆ ಇಣುಕಲು ಹೋಗಿ ಪಜೀತಿಗೆ ಸಿಲುಕಿದ್ದಾನೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದೆ.

Viral Video: ಎಸ್ಕಲೇಟರ್​​ನಲ್ಲಿ  ಚಲಿಸುತ್ತಿರುವ ವೇಳೆ  ಕೆಳಗೆ ಇಣುಕಲು ಹೋಗಿ ಪಜೀತಿಗೆ ಸಿಲುಕಿದ ಬಾಲಕ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 12, 2024 | 12:53 PM

ಮಕ್ಕಳು ಎಂದ ಮೇಲೆ ತರ್ಲೆ ತುಂಟಾಟ ಸಹಜ. ಈ ಮಕ್ಕಳಿಗೆ ಎಲ್ಲಾ ವಿಷಯದಲ್ಲೂ ಕುತೂಹಲ ತುಸು ಹೆಚ್ಚು. ಹೀಗೆ ಇವರುಗಳು  ಬೇರೆ ಬೇರೆ ಕುತೂಹಲಕಾರಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಈ ರೀತಿ ಚಟುವಟಿಕೆಗಳು ಕೆಲವೊಮ್ಮೆ ಮಕ್ಕಳ ಪ್ರಾಣಕ್ಕೆಯೇ ಅಪಾಯ ತಂದೊಡ್ಡುತ್ತವೆ. ಇಂತಹ ಸಾಕಷ್ಟು ಉದಾಹರಣೆಗಳನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಬಾಲಕನೊಬ್ಬ ಮಾಲ್ ಒಂದರಲ್ಲಿ ಎಸ್ಕಲೇಟರ್ ನಲ್ಲಿ ಕೆಳಗಿಂದ ಮೇಲೆ ಹೋಗುತ್ತಿರುವ ವೇಳೆ, ಕುತೂಹಲದಿಂದ ಏನನ್ನೋ ಇಣುಕಲು ಹೋಗಿ ಪಜೀತಿಗೆ ಸಿಳುಕಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಈ ವೈರಲ್ ವಿಡಿಯೋವನ್ನು @FAFO_TV ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ವಿಡಿಯೋದಲ್ಲಿ ಬಾಲಕರಿಬ್ಬರು ಮಾಲ್ ಒಂದರಲ್ಲಿ ಎಕ್ಸಿಲೇಟರ್ ನಲ್ಲಿ ಕೆಳಗಿಂದ ಮೇಲೆ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಅದರಲ್ಲಿ ತುಂಟ ಹುಡುಗನೊಬ್ಬ   ಮೇಲಿಂದ ಕೆಳಗೆ ಇಣುಕಿ ಏನೋ ತರ್ಲೆ ಕೆಲಸ ಮಾಡಲು ಹೋಗುತ್ತಾನೆ. ಹೀಗೆ ಎಸ್ಕಲೇಟರ್ ಮೇಲೆ ಚಲಿಸುತ್ತಾ ಹೋದಂತೆ ಆ ಬಾಲಕನ ತಲೆ ಗೋಡೆ ಮತ್ತು ಎಸ್ಕಲೇಟರ್ ಮಧ್ಯೆ ಸಿಕ್ಕಿ ಹಾಕಿಕೊಳ್ಳುತ್ತದೆ. ಆ ತಕ್ಷಣ  ಧವಿಸಿದ ರಕ್ಷಣಾ ಸಿಬ್ಬಂದಿಗಳು  ಬಾಲಕನನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ಇದನ್ನೂ ಓದಿ: ಪಾರ್ಸೆಲ್​​ ನೀಡಲು ಬಂದು ಮನೆಯ ಹೊರಗಿದ್ದ ಬೆಲೆ ಬಾಳುವ ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್​​

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 15.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಭಯಾನಕ ದೃಶ್ಯವನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದು, ಬಾಲಕನ್ನು ರಕ್ಷಿಸಿದ ರಕ್ಷಣಾ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ