Viral Video: ತವರಿನಿಂದ ಬರದ ಪತ್ನಿ, ಹೈ ಟೆನ್ಷನ್ ಟವರ್ ಏರಿದ ಪತಿ

ತನ್ನ ಪತ್ನಿ ತವರು ಮನೆಯಿಂದ ಬರದ ಹಿನ್ನೆಲೆ ಪತಿ ಮಹಾಶಯನೊಬ್ಬ ಹೈ ಟೆನ್ಷನ್ ಟವರ್ ಏರಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ತವರಿನಿಂದ ಬರದ ಪತ್ನಿ, ಹೈ ಟೆನ್ಷನ್ ಟವರ್ ಏರಿದ ಪತಿ
ತವರಿನಿಂದ ಬರದ ಪತ್ನಿ, ಹೈ ಟೆನ್ಷನ್ ಟವರ್ ಏರಿದ ಪತಿ
Updated By: Rakesh Nayak Manchi

Updated on: Sep 22, 2022 | 5:36 PM

ತವರಿಗೆ ಹೋದ ಪತ್ನಿ ಮತ್ತೆ ಮನೆಗೆ ಬರದ ಹಿನ್ನೆಲೆ ಆಕೆಯ ಪತಿ ಟ್ರಾನ್ಸ್‌ಮಿಷನ್ ಟವರ್ ಏರಿದ ಘಟನೆಯೊಂದು ಛತ್ತೀಸ್‌ಗಢದ ಭಿಲಾಯಿಯ ಗನಿಯಾರಿ ಗ್ರಾಮದಲ್ಲಿ ನಡೆದಿದೆ. ಹೊರಿ ಲಾಲ್ ಎಂದು ಗುರುತಿಸಲಾದ ವ್ಯಕ್ತಿ ತನ್ನ ಹೆಂಡತಿಯನ್ನು ವಾಪಸ್ ಕರೆದುಕೊಂಡು ಹೋಗಲು ತನ್ನ ಅತ್ತೆಯ ಮನೆಗೆ ಬಂದಿದ್ದಾನೆ. ಆದರೆ ಆತನ ಮಾವ ತನ್ನ ಮಗಳನ್ನು ವಾಪಸ್ ಕಳುಹಿಸಿಕೊಡಲು ನಿರಾಕರಿಸಿದ್ದಾರೆ. ಇದರಿಂದ ನಿರಾಶೆ ಮತ್ತು ಕೋಪಗೊಂಡ ಹೊರಿ ಲಾಲ್ ತನ್ನ ಹೆಂಡತಿಯನ್ನು ಕಳುಹಿಸಿಕೊಡುವಂತೆ ಅತ್ತೆ ಮತ್ತು ಮಾವನ ಮೇಲೆ ಒತ್ತಡ ಹೇರಲು 75 ಅಡಿ ಎತ್ತರದ ಹೈಟೆನ್ಷನ್ ಟವರ್ ಅನ್ನು ಏರಿ ಕುಳಿತಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Viral Video) ಆಗುತ್ತಿದೆ.

ಲಾಲ್ ಹೈಟೆನ್ಷನ್ ಟವರ್ ಏರಿದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕೆಳಗೆ ಇಳಿಯುವಂತೆ ಮನವೋಲಿಸಿದ್ದಾರೆ. ಆದರೂ ಅದು ಫಲಕಾರಿಯಾಗಲಿಲ್ಲ. ಕೊನೆಯದಾಗಿ ಪತ್ನಿಯನ್ನು ವಾಪಸ್ ಕಳುಹಿಸುವುದಾಗಿ ಪೊಲೀಸರು ಭರವಸೆ ನೀಡಿದಾಗ ಹೊರಿ ಲಾಲ್ ಟವರ್‌ನಿಂದ ಇಳಿದು ಕೆಳಗೆ ಬಂದಿದ್ದಾನೆ. ಬಳಿಕ ಆತನನ್ನು ವಿಚಾರಣೆ ನಡೆಸುವ ಸಲುವಾಗಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋದರು. ಆತನ ಅತ್ತಿಗೆಯನ್ನೂ ವಿಚಾರಣೆಗಾಗಿ ಠಾಣೆಗೆ ಕರೆಸಲಾಗಿತ್ತು. ಆದರೆ ಮಾವ ತನ್ನ ಮಗಳನ್ನು ಗಂಡನ ಮನೆಗೆ ವಾಪಸ್ ಕಳುಹಿಸದರಿಲು ಸ್ಪಷ್ಟವಾದ ಕಾರಣ ಏನು ಎಂದು ತಿಳಿದುಬಂದಿಲ್ಲ. ಆದರೆ ಘಟನೆಯ ವಿಡಿಯೋ ಮಾತ್ರ ವೈರಲ್ ಆಗುತ್ತಿದೆ.

ಅಲ್ಕೇಶ್ ಕುಶ್ವಾಹಾ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಆತ ತನ್ನ ಹೆಂಡತಿಯನ್ನು ಕರೆದೊಯ್ಯಲು ಅತ್ತೆ-ಮಾವನ ಮನೆಯನ್ನು ತಲುಪಿದ್ದ, ಅತ್ತೆ-ಮಾವ ಅವನನ್ನು ಕಳುಹಿಸದಿದ್ದರೆ, ಪತಿ ಶೋಲೆ ಚಿತ್ರದ ಧರ್ಮೇಂದ್ರನಾಗುತ್ತಾನೆ ಮತ್ತು ಹೈಟೆನ್ಷನ್ ಟವರ್ ಮೇಲೆ ಹತ್ತುತ್ತಾನೆ” ಎಂದು ಶೀರ್ಷಿಕೆ ಬರೆದಿದ್ದಾರೆ. ಈ ದೃಶ್ಯವು 1970 ರ ದಶಕದ ಬ್ಲಾಕ್‌ಬಸ್ಟರ್ ‘ಶೋಲೆ’ ಚಿತ್ರದಲ್ಲಿ ಧರ್ಮೇಂದ್ರ ಅವರ ಪಾತ್ರದ ಪೌರಾಣಿಕ ಕುಡುಕ ಕೃತ್ಯವನ್ನು ನೆನಪಿಸುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ