Viral Video: ರೈಲು ಬರುವುದ ನೋಡಿ ಆತ್ಮಹತ್ಯೆ ಮಾಡಿಕೊಳ್ಳಲು ಹಳಿ ಮೇಲೆ ಮಲಗಿದ ವ್ಯಕ್ತಿಯನ್ನು ರಕ್ಷಿಸಿದ ಮಹಿಳಾ ಕಾನ್​ಸ್ಟೆಬಲ್

|

Updated on: Jun 12, 2023 | 2:25 PM

ರೈಲು ಬರುವುದನ್ನು ನೋಡಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ರೈಲ್ವೆ ಹಳಿ ಮೇಲೆ ಹೋಗಿ ಮಲಗಿದ ವ್ಯಕ್ತಿಯನ್ನು ಮಹಿಳಾ ಕಾನ್​ಸ್ಟೆಬಲ್​ ರಕ್ಷಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

Viral Video: ರೈಲು ಬರುವುದ ನೋಡಿ ಆತ್ಮಹತ್ಯೆ ಮಾಡಿಕೊಳ್ಳಲು ಹಳಿ ಮೇಲೆ ಮಲಗಿದ ವ್ಯಕ್ತಿಯನ್ನು ರಕ್ಷಿಸಿದ ಮಹಿಳಾ ಕಾನ್​ಸ್ಟೆಬಲ್
ರೈಲು
Image Credit source: News 9
Follow us on

ರೈಲು ಬರುವುದನ್ನು ನೋಡಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ರೈಲ್ವೆ ಹಳಿ ಮೇಲೆ ಹೋಗಿ ಮಲಗಿದ ವ್ಯಕ್ತಿಯನ್ನು ಮಹಿಳಾ ಕಾನ್​ಸ್ಟೆಬಲ್​ ರಕ್ಷಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಒಬ್ಬ ವ್ಯಕ್ತಿ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಒಬ್ಬಂಟಿಯಾಗಿ ನಿಂತಿರುವುದು ಕಂಡುಬರುತ್ತದೆ. ತನ್ನ ಸುತ್ತಲೂ ಯಾರಾದರೂ ಇದ್ದಾರೆಯೇ ಎಂದು ಸುತ್ತಲೂ ಒಮ್ಮೆ ನೋಡುತ್ತಾನೆ, ರೈಲು ಬರುವ ಸಮಯವಾದ ಕೂಡಲೇ ಹಳಿ ಮೇಲೆ ಹಾರಿ ಹಳಿಯ ಮೇಲೆ ತಲೆ ಇಟ್ಟು ಮಲಗುತ್ತಾನೆ. ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೆ ರೈಲ್ವೆ ಹಳಿ ಮೇಲೆ ಹಾರಿ ಆತನ ಪ್ರಾಣವನ್ನು ರಕ್ಷಿಸಿದ್ದಾರೆ.

ರೈಲು ಬರುವ ಮುನ್ನವೇ ಆತನನ್ನು ಬೇರೆ ಹಳಿಯ ಮೇಲೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಕಾನ್ಸ್‌ಟೇಬಲ್ ವ್ಯಕ್ತಿಗೆ ಸಹಾಯ ಮಾಡುತ್ತಿರುವುದನ್ನು ಕಂಡು, ರೈಲ್ವೇ ನಿಲ್ದಾಣದಲ್ಲಿದ್ದ ಇತರ ಜನರು ಸಹ ಸಹಾಯ ಮಾಡಲು ಓಡಿದರು. ನಂತರ ವ್ಯಕ್ತಿಯನ್ನು ಪ್ಲಾಟ್​ಫಾರಂ ಮೇಲೆ ಎಳೆದುಕೊಂಡು ಹೋಗಿದ್ದಾರೆ. ಮಹಿಳಾ ಪೇದೆಯನ್ನು ಸುಮತಿ ಎಂದು ಗುರುತಿಸಲಾಗಿದೆ.

ಮತ್ತಷ್ಟು ಓದಿ: ಮೆಟ್ರೋಗಾಗಿ ಕಾಯುತ್ತಾ ನಿಲ್ಲುವ ಮಹಿಳೆಯರೇ ಹುಷಾರ್! ಈ ವಿಡಿಯೋ ನೋಡಿ

ಯುವಕ ತನ್ನ ಪ್ರಾಣವನ್ನು ಏಕೆ ಕೊನೆಗಾಣಿಸಲು ಯತ್ನಿಸಿದ್ದಾನೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ನಡುವೆ ಟ್ವಿಟರ್ ಬಳಕೆದಾರರು ಮಹಿಳಾ ಪೇದೆ ತೋರಿದ ಧೈರ್ಯವನ್ನು ಕೊಂಡಾಡುತ್ತಿದ್ದಾರೆ.

ಬಳಕೆದಾರರು ಆಕೆಯನ್ನು ದೇವತೆಗೆ ಹೋಲಿಸಿದ್ದಾರೆ, ಶ್ಲಾಘನೀಯ ಪ್ರಯತ್ನ. ನೀನು ಪೊಲೀಸ್ ಪೇದೆಯ ರೂಪದಲ್ಲಿರುವ ನಿಜವಾದ ದೇವತೆ ಎಂದಿದ್ದಾರೆ.

ರೈಲಿನಿಂದ ಇಳಿಯುವಾಗ ಸಾಕಷ್ಟು ಮಂದಿ ಜಾರಿ ಬಿದ್ದು ಇನ್ನೇನು ರೈಲಿನ ಕೆಳಗೆ ಸಿಲುಕುತ್ತಾರೆ ಎನ್ನುವ ಸಮಯದಲ್ಲಿ ಅವರನ್ನು ರಕ್ಷಿಸುವ ಸಾಕಷ್ಟು ವಿಡಿಯೋಗಳನ್ನು ನಾವು ನೋಡಿರಬಹುದು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ