ನರೇಂದ್ರ ಮೋದಿಯವರ ಅಮೆರಿಕ ಭೇಟಿಗೆ ಮುಂಚಿತವಾಗಿ ವಿಶೇಷ ‘ಮೋದಿ ಜಿ’ ಥಾಲಿ ಬಿಡುಗಡೆ ಮಾಡಿದ ನ್ಯೂಜೆರ್ಸಿಯ ರೆಸ್ಟೊರೆಂಟ್
ಎಎನ್ಐ ವರದಿ ಪ್ರಕಾರ ಈ ವಿಶೇಷವಾದ ‘ಮೋದಿ ಜಿ’ ಥಾಲಿಯು ದೇಶದ ವಿವಿಧ ರಾಜ್ಯಗಳ ಅಡುಗೆಗಳನ್ನು ಹೊಂದಿದೆ. ಖಿಚಡಿ, ರಸಗುಲ್ಲಾ, ಸಾರ್ಸೋಂಕಾ ಸಾಗ್, ಕಾಶ್ಮೀರಿ ದಮ್ ಆಲೂ, ಇಡ್ಲಿ, ಧೋಕ್ಲಾ, ಚಾಚ್ ಮತ್ತು ಪಾಪಡ್ ಮತ್ತು ಇನ್ನಿತರ ಭಕ್ಷ್ಯಗಳು ಇದರಲ್ಲಿ ಇರಲಿವೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅಮೆರಿಕ (US Visit)ಭೇಟಿ ನೀಡಲಿದ್ದು ಈ ಭೇಟಿಯ ಕೆಲವೇ ದಿನಗಳ ಮೊದಲು, ನ್ಯೂಜೆರ್ಸಿಯ ರೆಸ್ಟೊರೆಂಟ್ ಪ್ರಧಾನಿಯನ್ನು ವಿಶೇಷ ರೀತಿಯಲ್ಲಿ ಗೌರವಿಸಲು ನಿರ್ಧರಿಸಿದೆ. ವಿವಿಧ ರೀತಿಯ ರುಚಿಕರವಾದ ಭಕ್ಷ್ಯಗಳೊಂದಿಗೆ ಪ್ರಧಾನಿ ಮೋದಿಗೆ ಮೀಸಲಾದ ‘ವಿಶೇಷ ಥಾಲಿ’ ಇಲ್ಲಿರಲಿದ್ದು ಇದಕ್ಕೆ ‘ಮೋದಿ ಜಿ ಥಾಲಿ’ (Modi Ji thali)ಎಂದು ಹೆಸರಿಡಲಾಗಿದೆ. ಬಾಣಸಿಗ ಶ್ರೀಪಾದ್ ಕುಲಕರ್ಣಿ ಅವರು ಥಾಲಿಯನ್ನು ತಯಾರಿಸಿದ್ದು ಇದು ಕಾಶ್ಮೀರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಭಾರತದ ವಿವಿಧ ಭಾಗಗಳ ಭಕ್ಷ್ಯಗಳನ್ನು ಹೊಂದಿದೆ.
ಎಎನ್ಐ ವರದಿ ಪ್ರಕಾರ ಈ ವಿಶೇಷವಾದ ‘ಮೋದಿ ಜಿ’ ಥಾಲಿಯು ದೇಶದ ವಿವಿಧ ರಾಜ್ಯಗಳ ಅಡುಗೆಗಳನ್ನು ಹೊಂದಿದೆ. ಖಿಚಡಿ, ರಸಗುಲ್ಲಾ, ಸಾರ್ಸೋಂಕಾ ಸಾಗ್, ಕಾಶ್ಮೀರಿ ದಮ್ ಆಲೂ, ಇಡ್ಲಿ, ಧೋಕ್ಲಾ, ಚಾಚ್ ಮತ್ತು ಪಾಪಡ್ ಮತ್ತು ಇನ್ನಿತರ ಭಕ್ಷ್ಯಗಳು ಇದರಲ್ಲಿ ಇರಲಿವೆ.
ವಿಡಿಯೊದಲ್ಲಿ ಶೆಫ್ ಕುಲಕರ್ಣಿ ಅವರು ಪ್ರಧಾನಿ ಮೋದಿಗಾಗಿ ಮಾಡಿರುವ ವಿಶೇಷ ಥಾಲಿಯನ್ನು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಈ ಥಾಲಿ ಕನಿಷ್ಠ 10 ವಸ್ತುಗಳನ್ನು ಹೊಂದಿದ. ಅದೇ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗಾಗಿ ಹೊಸ ಥಾಲಿಯನ್ನು ಬಿಡುಗಡೆ ಮಾಡುವ ಬಯಕೆಯನ್ನು ರೆಸ್ಟೋರೆಂಟ್ ವ್ಯಕ್ತಪಡಿಸಿದೆ.
PM मोदी के अमेरिका दौरे से पहले चर्चा में स्पेशल ‘मोदी जी थाली’#PModi #USVisit #ModiJiThali pic.twitter.com/HViJJMmkD2
— TV9 Bharatvarsh (@TV9Bharatvarsh) June 12, 2023
ನಾವು ಶೀಘ್ರದಲ್ಲೇ ಈ ಥಾಲಿಯನ್ನು ಪ್ರಾರಂಭಿಸಲು ಯೋಜಿಸಿದ್ದೇವೆ. ಇದು ಜನಪ್ರಿಯತೆಯನ್ನು ಗಳಿಸಲಿದೆ ಎಂದು ಭಾವಿಸುತ್ತೇವೆ. ಇದಾದ ನಂತರ ನಾನು ಡಾ ಜೈಶಂಕರ್ ಥಾಲಿಯನ್ನು ಪ್ರಾರಂಭಿಸುವ ಬಗ್ಗೆ ಚಿಂತಿಸುತ್ತಿದ್ದೇನೆ. ಏಕೆಂದರೆ ಅವರು ಭಾರತೀಯ ಅಮೆರಿಕನ್ ಸಮುದಾಯದಲ್ಲಿ ರಾಕ್‌ಸ್ಟಾರ್ ಆಕರ್ಷಣೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಭದ್ರತೆ: 14 ನ್ಯಾಯಾಧೀಶರು ಸೇರಿದಂತೆ 270 ನಿವೃತ್ತ ಅಧಿಕಾರಿಗಳಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ
ನ್ಯೂಜೆರ್ಸಿಯಲ್ಲಿ ಬಹು ಪಾಕಪದ್ಧತಿಯ ವಿಶೇಷತೆಯ ಹೊರತಾಗಿ, ಮೋದಿ ಜಿ ಥಾಲಿಯು 2019 ರಲ್ಲಿ ಭಾರತದ ಶಿಫಾರಸನ್ನು ಪರಿಗಣನೆಗೆ ತೆಗೆದುಕೊಂಡ ನಂತರ ವಿಶ್ವಸಂಸ್ಥೆಯು 2023 ಅನ್ನು ಅಂತರರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸಿದೆ ಎಂಬ ಅಂಶಕ್ಕೆ ಗೌರವ ಸಲ್ಲಿಸುತ್ತದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರ ಜನ್ಮದಿನದ ಮೊದಲು ರೆಸ್ಟೋರೆಂಟ್‌ಗಳು ಪ್ರಧಾನಿ ಮೋದಿಯವರಿಗೆ ಥಾಲಿ ಅಥವಾ ಖಾದ್ಯವನ್ನು ಅರ್ಪಿಸುತ್ತಿರುವುದು ಇದೇ ಮೊದಲಲ್ಲ, ಕನ್ನಾಟ್ ಪ್ಲೇಸ್‌ನಲ್ಲಿರುವ ARDOR 2.1 ಎಂಬ ಪ್ರಸಿದ್ಧ ರೆಸ್ಟೋರೆಂಟ್ 56 ಭಕ್ಷ್ಯಗಳಿರುವ ಥಾಲಿಯನ್ನು ಪರಿಚಯಿಸಿತ್ತು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ