Australia Accident: ಆಸ್ಟ್ರೇಲಿಯಾದಲ್ಲಿ ಮದುವೆ ದಿಬ್ಬಣದ ಬಸ್ ಪಲ್ಟಿ, 10 ಜನ ಸಾವು
ಆಸ್ಟ್ರೇಲಿಯಾದ ಹಂಟರ್ ಕಣಿವೆ ಪ್ರದೇಶದ ಹೆದ್ದಾರಿಯಲ್ಲಿ ಮದುವೆ ದಿಬ್ಬಣದ ಬಸ್ ಪಲ್ಟಿಯಾಗಿ 10 ಜನ ಮೃತಪಟ್ಟಿದ್ದು 25ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಘಟನೆ ನಡೆದಿದೆ.
ಕ್ಯಾನ್ಬೆರಾ: ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯದ ಹಂಟರ್ ಕಣಿವೆ ಪ್ರದೇಶದ ಹೆದ್ದಾರಿಯಲ್ಲಿ ಮದುವೆ ದಿಬ್ಬಣ ಪಲ್ಟಿಯಾಗಿ ದುರಂತ ಸಂಭವಿದೆ. ಘಟನೆಯಲ್ಲಿ 10 ಜನ ಸಾವನ್ನಪ್ಪಿದ್ದು 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದಾಗ ಭಾನುವಾರ ರಾತ್ರಿ 11:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸಿಡ್ನಿಯ ವಾಯುವ್ಯಕ್ಕೆ ಸುಮಾರು 180 ಕಿಲೋಮೀಟರ್ (112 ಮೈಲುಗಳು) ಗ್ರೆಟಾ ಪಟ್ಟಣದ ಬಳಿ ಘಟನೆ ನಡೆದಿದೆ. 58 ವರ್ಷ ವಯಸ್ಸಿನ ಬಸ್ ಚಾಲಕನನ್ನು ಕಡ್ಡಾಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Amazon Forest: ವಿಮಾನ ಅಪಘಾತ: 40 ದಿನಗಳ ಕಾಲ ಅಮೆಜಾನ್ ಕಾಡಿನಲ್ಲಿ 4 ಮಕ್ಕಳು ಬದುಕುಳಿದಿದ್ದು ಹೇಗೆ?
ಗಾಯಾಳುಗಳನ್ನು ರಸ್ತೆ ಮಾರ್ಗ ಮತ್ತು ವಿಮಾನದ ಮೂಲಕ ಹಂಟರ್ ವ್ಯಾಲಿಯ ನ್ಯೂ ಲ್ಯಾಂಬ್ಟನ್ ಹೈಟ್ಸ್‌ನಲ್ಲಿರುವ ಜಾನ್ ಹಂಟರ್ ಆಸ್ಪತ್ರೆ ಮತ್ತು ವಾರತಾಹ್‌ನ ಮೇಟರ್ ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Australia: 10 killed, 11 rushed to hospital after bus crashes in Hunter Valley
Read @ANI Story | https://t.co/6jJ3CQX5Uh#Australia #HunterValley #accident pic.twitter.com/p1JcIpLTav
— ANI Digital (@ani_digital) June 11, 2023
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:01 am, Mon, 12 June 23