ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ನಿಜವಾಗಿಯೂ ಆಶ್ಚರ್ಯವನ್ನುಂಟು ಮಾಡುತ್ತವೆ. ಅಂಥಹುದೇ ಒಂದು ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ. ಎರಡು ಹೆಬ್ಬಾವಿನ ಎದುರು ವ್ಯಕ್ತಿ ಮಲಗಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೊ ನೋಡಿದ ಕೆಲವರು ಇದು ಹುಚ್ಚುತನ ಎಂದು ಪ್ರತಿಕ್ರಿಯಿಸಿದ್ದರೆ, ಇನ್ನು ಕೆಲವರು ತಮಾಷೆ ಮಾಡಿ ನಕ್ಕಿದ್ದಾರೆ.
ವಿಡಿಯೊದಲ್ಲಿ ಗಮನಿಸುವಂತೆ ಎರಡು ದೈತ್ಯ ಹೆಬ್ಬಾವುಗಳು ಮನೆಯ ಹೊರಗೆ ಮಲಗಿವೆ. ಅದರ ಎದುರು ವ್ಯಕ್ತಿಯೊಬ್ಬ ಮಲಗಿರುವುದು ಕಂಡು ಬರುತ್ತದೆ. ವ್ಯಕ್ತಿ ಎಚ್ಚರದಲ್ಲಿದ್ದರೂ ಹಾವಿನ ಮುಖಕ್ಕೆ ಮುಖ ಕೊಟ್ಟು ಮಲಗಿದ್ದಾನೆ. ವಿಡಿಯೊ ನೋಡಿ ಕೆಲವರು ಇದು ನಿಜವಾದ ವಿಡಿಯೋನಾ? ಎಂದು ಪ್ರಶ್ನೆ ಮಾಡಿದ್ದಾರೆ.
ಹಾವಿನ ಹೆಸರು ಕೇಳಿದಾಗಲೇ ಭಯವಾಗುತ್ತದೆ ಆದರೆ ಈ ವ್ಯಕ್ತಿ ಹಾವಿನ ಎದುರೇ ಮಲಗಿದ್ದಾನೆ. ವಿಡಿಯೊ ಭಯಾನಕವಾಗಿದೆ ಎಂದು ಓರ್ವರು ಹೇಳಿದ್ದಾರೆ. ಮೈ ಜುಂ ಎನ್ನುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು ಅನೇಕರು ಹಲವು ಎಮೋಜಿಗಳನ್ನು ಕಳೆಹಿಸುವ ಮೂಲಕ ಮತ್ತು ಕಾಮೆಂಟ್ ವಿಭಾಗದಲ್ಲಿ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:
Viral Video: ಕೊಂಚ ತಡವಾಗಿದ್ದರೂ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದರು ತಾಯಿ-ಮಗು; ಶಾಕಿಂಗ್ ವಿಡಿಯೋ ಇಲ್ಲಿದೆ