Viral Video : ನಾಡಿನಲ್ಲೇ ಇದ್ದರೂ ಸ್ವಭಾವತಃ ಕಾಡುಪ್ರಾಣಿಗಳು ಅಪಾಯಕಾರಿಯೇ. ಹುಚ್ಚುಹವ್ಯಾಸವೋ, ಸಾಹಸವೋ ಗೊತ್ತಿಲ್ಲ, ಹೀಗೆ ಕಾಡುಪ್ರಾಣಿಗಳೊಂದಿಗೆ ವಿಡಿಯೋ, ಫೋಟೋ, ಸೆಲ್ಫಿ ಎಂದೆಲ್ಲ ಪ್ರಯತ್ನಿಸುವುದಂತೂ ಸರಿಯಲ್ಲ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು, ಆಟಿಕೆಯ ಸಿಂಹದಮರಿಗಳು ಇವಲ್ಲ, ಅವುಗಳೊಂದಿಗೆ ಹೀಗೆಲ್ಲ ಆಟವಾಡುವುದು ಮುದ್ದಾಡುವುದು ಸರಿಯಲ್ಲ ಎಂದು ಬುದ್ಧಿ ಹೇಳುತ್ತಿದ್ದಾರೆ ಈ ಯುವಕನಿಗೆ.
@basit_ayan_2748 ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ನೋಡಬಹುದಾಗಿದೆ. ಕಾರಿನ ಬಾನೆಟ್ ಮೇಲೆ ಕುಳಿತ ಈ ಸಿಂಹದ ಮರಿಗಳನ್ನು ಈತ ಮುದ್ದು ಮಾಡುತ್ತಿದ್ದಾನೆ. ಮುದ್ದುಮಾಡುತ್ತಿದ್ದಾನೆಂದರೆ ವಿಡಿಯೋ, ಫೋಟೋಗೆ ಪೋಸ್ ಕೊಡುತ್ತಲೇ ಅಲ್ಲವೆ? ಅವರು ವಿಡಿಯೋ ತೆಗೆಯೋತನಕ ನಾವು ಹೀಗೆ ಸುಮ್ಮನೆ ಪೋಸ್ ಕೊಡುತ್ತಿರಬೇಕು ಎನ್ನುವುದು ಸಿಂಹದಮರಿಗಳಿಗೆ ಅರ್ಥವಾಗಿ ಶಾಂತವಾಗಿ ಕುಳಿತುಕೊಳ್ಳುತ್ತವೆಯೇ? ಮೈಮೇಲೆ ಕೈಯ್ಯಾಡಿಸುತ್ತಲೇ ಇರುವ ಈ ಯುವಕನನ್ನು ಒಂದು ಸಿಂಹದ ಮರಿ ಸಹಿಸಿಕೊಂಡಿದೆ. ಇನ್ನೊಂದು ಮರಿ ಮಾತ್ರ ತಿರುಗಿ ನಿಂತಿದೆ. ಆಗ ನಿಲ್ಲಲ್ಲು ಧೈರ್ಯವಾದೀತೇ ಈ ಯುವಕನಿಗೆ? ಹೇಳಿಕೇಳಿ ಸಿಂಹ, ಆಕ್ರಮಣಕಾರಿಯೇ.
ಕಳೆದ ತಿಂಗಳಿನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಅನ್ನು ಸುಮಾರು 2,74,000 ಜನ ಇಷ್ಟಪಟ್ಟಿದ್ದಾರೆ. 3 ಮಿಲಿಯನ್ಗಿಂತಲೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಇಲ್ಲಿರುವ ಯುವಕನಿಗೆ ಬುದ್ಧಿ ಹೇಳಿದ್ಧಾರೆ. ‘ಇದು ಮೂರ್ಖತನ’ ಎಂದು ಒಬ್ಬರು. ‘ಇಲ್ಲಿ ಥಂಬ್ಸ್ ಡೌನ್ ಎಮೋಟಿಕಾನ್ ಎಲ್ಲಿದೆ’ ಎಂದು ಮತ್ತೊಬ್ಬರು, ‘ಇದು ಬಹಳ ಅಪಾಯಕಾರಿ, ಮತ್ತೊಮ್ಮೆ ಪ್ರಯತ್ನಿಸಬೇಡಿ’ ಎಂದು ಮಗದೊಬ್ಬರು, ‘ಇದು ಪ್ರಾಣಿಹಿಂಸೆ’ ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ‘ಹುಲಿ, ಸಿಂಹ, ಚಿರತೆ, ಜಾಗ್ವಾರ್ ಎಲ್ಲವೂ ಕಾಡುಪ್ರಾಣಿಗಳೇ’ ಎಂದು ಮತ್ತೊಬ್ಬರು ತಿಳಿಹೇಳಿದ್ಧಾರೆ. ಈ ವಿಡಿಯೋ ಎಲ್ಲಿ ಚಿತ್ರೀಕರಿಸಲಾಗಿದೆ ಎನ್ನವ ಮಾಹಿತಿ ಇಲ್ಲ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:18 pm, Tue, 11 October 22